ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು ಕಲಿಕಾ ಹಬ್ಬದ ಉದ್ದೇಶ : ಯಮನಪ್ಪ

ಬಳ್ಳಾರಿ/ ಕಂಪ್ಲಿ ತಾಲೂಕಿನ ದೇವಸಮುದ್ರ ಕ್ಲಸ್ಟರ್ ಮಟ್ಟದ ಚಿಕ್ಕಜಾಯಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಸಮುದ್ರ ಸಮೂಹ ಸಂಪನ್ಮೂಲ ಕೇಂದ್ರದಿಂದ ಕಲಿಕಾ ಹಬ್ಬ ಗುರುವಾರ ಸಂಭ್ರಮದಿಂದ ನಡೆಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ಯಮನಪ್ಪ ಕಲಿಕಾ ಹಬ್ಬ ಕಾರ್ಯಕ್ರಮ ಚಿಹ್ನೆ ಉದ್ಘಾಟಿಸಿ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿಯೇ ಸರ್ಕಾರ ಕಲಿಕಾ ಹಬ್ಬ ಎಂಬ ನೂತನ ಕಾರ್ಯಕ್ರಮ ಆಯೋಜಿಸಿದ್ದು, ಇಂಥ ವಾತಾವರಣದಲ್ಲಿ ಮಕ್ಕಳಿಗೆ ಕಲಿಯಲು ತುಂಬಾ ಅನೂಕೂಲವಾಗುತ್ತದೆ. ಕಲಿಕಾ ಬೋಧನೆಯೊಂದಿಗೆ ಆಟೋಟದ ಮೂಲಕ ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು ಕಲಿಕಾ ಹಬ್ಬದ ಉದ್ದೇಶವಾಗಿದೆ. ಹಬ್ಬದಲ್ಲಿ ಕಲಿಕೆ ಮಕ್ಕಳಿಗೆ ಹೊರೆ ಹಾಗೂ ಒತ್ತಡ ಉಂಟು ಮಾಡುವುದಿಲ್ಲ. ಆನಂದಮಯ ಚಟುವಟಿಕೆಯ ರೂಪದಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಸಿಆರ್‌ಪಿ ಕರುಣಾಕರ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಶಿಕ್ಷಣ ಬಲಪಡಿಸುವ ದೃಷ್ಟಿಯಿಂದ ಕಲಿಕಾ ಹಬ್ಬ ರೂಪಿಸಲಾಗಿದೆ. ಕೋವಿಡ್ ವೇಳೆ ಇಡೀ ದೇಶ ಸ್ತಬ್ಧವಾಗಿತ್ತು. ಮತ್ತು ಮಕ್ಕಳು ಶಿಕ್ಷಣದಿಂದ ಹಿಂದುಳಿದರು. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗಿತ್ತು. ಇದನ್ನು ಮನಗಂಡು ಸರ್ಕಾರ ಓದು ಮತ್ತು ಎಫ್‌ಎಲ್‌ಎನ್ ಆಧರಿತವಾಗಿ ಕಲಿಕಾ ಹಬ್ಬದ ಮೂಲಕ ಕಲಿಕೆಗೆ ಹೆಚ್ಷಿನ ಆಧ್ಯತೆ ನೀಡಿದೆ. ಹಿಂದುಳಿದ ಮಕ್ಕಳಿಗೆ ಕಲಿಕೆ ನೀಡಬೇಕಾಗಿದೆ. ಪಾಠದ ಜೊತೆಗೆ ವಿವಿಧ ವಿಭಿನ್ನ ಕಾರ್ಯಚಟುವಟಿಕೆಯೊಂದಿಗೆ ಕಲಿಕೆಗೆ ಸ್ಫೂರ್ತಿ ನೀಡಲಾಗುತ್ತಿದೆ. ಇದರ ಸದುಪಯೋಗದೊಂದಿಗೆ ಮಕ್ಕಳು ಉನ್ನತ ಮಟ್ಟದ ಶಿಕ್ಷಣದೊಂದಿಗೆ ಜ್ಞಾರ್ನಾಜನೆ ವೃದ್ಧಿಸಿಕೊಳ್ಳಬಹುದು ಎಂದರು.
ನಂತರ ವಿವಿಧ ತರನಾಗಿ ತಯಾರಿಸಿದ ಮಕ್ಕಳ ಕಲಿಕೋತ್ಸವವನ್ನು ವೀಕ್ಷಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಕವಿತಾ ಪಂಪನಗೌಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಮುಖ್ಯಗುರು ಕೆ.ಮಲ್ಲಿಕಾರ್ಜುನ, ಸ್ಥಳದಾನಿ ಅಮರೇಗೌಡ, ಬಾಬು ಜಗಜೀವನ್‌ರಾವ್ ಅಧ್ಯಕ್ಷ ಪಂಪಾಪತಿ, ಮುಖಂಡರಾದ ಪಕ್ಕೀರಪ್ಪ, ಕೃಷ್ಣಪ್ಪ, ವಿರೇಶ, ಜಡೆಪ್ಪ, ಮಾರೆಣ್ಣ, ಹುಲುಗಪ್ಪ, ವೀರಕುಮಾರ, ಮುದುಕಪ್ಪ, ಮಂಜುನಾಥ, ನಾಗವೇಣಿ, ಪ್ಯಾರಿಜಾನ್, ಗಂಗಮ್ಮ ಸೇರಿದಂತೆ ಶಿಕ್ಷಕರು, ಮಕ್ಕಳು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!