ಬಳ್ಳಾರಿ / ಕಂಪ್ಲಿ: ಆಧುನಿಕ ಭಾರತರದಲ್ಲಿ ಮಹಿಳೆಯರ ಬದುಕು ಕಷ್ಟಕರ. ಅಂತರದಲ್ಲಿ ಪವಿತ್ರ ಚಾರಿಟೇಬಲ್ಯಿಂದ ಸಾಕಷ್ಟಯ ತರಬೇತಿ ಜೊತೆಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಅನುವು ಮಾಡುವ ಮೂಲಕ ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಆಸರೆಯಾಗಿದೆ ಎಂದು ಮುಖಂಡರು ಎಂ.ರಜನಿ ಹೇಳಿದರು.
ಪಟ್ಟಣದ ಎಂ.ಡಿ.ಕ್ಯಾಂಪಿನ ಶಿರಡಿ ಸಾಯಿಬಾಬ ದೇವಸ್ಥಾನ ಬಳಿಯಲ್ಲಿರುವ ಪವಿತ್ರ ಚಾರಿಟೇಬಲ್ ಕಛೇರಿಯಲ್ಲಿ ಪವಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ವಿ.ಪವಿತ್ರಗೌಡ ಇವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಒಳ್ಳೆಯ ಸ್ಥಾನಮಾನವಿದೆ. ಅದರಂತೆ ಮಹಿಳೆಯರು ಒಳ್ಳೆಯ ಜೀವನದೊಂದಿಗೆ ಆರ್ಥಿಕವಾಗಿ ಸಬಲರಾಗಲು ಪವಿತ್ರ ಚಾರಿಟೇಬಲ್ ನೀಡುವ ತರಬೇತಿ ಮುಖಾಂತರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಮಹಿಳೆಯರಿಗೆ ಅನುವು ಮಾಡಿಕೊಟ್ಟಿದೆ. ಮಹಿಳೆಯರ ಸಂಕಷ್ಟವನ್ನು ಆಲಿಸಿ, ಪವಿತ್ರ ಚಾರಿಟೇಬಲ್ ಮೂಲಕ ಮಹಿಳೆಯರು ತರಬೇತಿಯೊಂದಿಗೆ ಸ್ವಯಂ ಉದ್ಯೋಗದ ಕಡೆ ಮುಖ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಇಲ್ಲಿನ ಸಾಕಷ್ಟು ಮಹಿಳೆಯರು ಭವಿಷ್ಯ ರೂಪಿಸಿಕೊಂಡು ಹೋಗಿದ್ದಾರೆ. ಸಮಾಜ ಸೇವೆಯೊಂದಿಗೆ ಜನರ ಪ್ರೀತಿ, ವಿಶ್ವಾಸಗಳಿಸುವ ಜೊತೆಗೆ ಸಾಕಷ್ಟು ಮಹಿಳೆಯರಿಗೆ ಚಾರಿಟೇಬಲ್ ಟ್ರಸ್ಟ್ ಮೂಲಕ ತರಬೇತಿ ನೀಡುವದೊಂದಿಗೆ ಸ್ವಯಂ ಉದ್ಯೋಗಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇಂತಹ ಇನ್ನಷ್ಟು ಸೇವೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ಟ್ರಸ್ಡ್ ಉಪಾಧ್ಯಕ್ಷ ವಿ.ಶಿವನಗೌಡ, ಸದಸ್ಯ ವಿ.ವಿವೇಕ್ಗೌಡ, ಸಿಬ್ಬಂದಿಗಳಾದ ಎಂ.ರಜನಿ, ಶಿವರಾಜ, ಉದಯಮೇರಿ, ಶೈಲಜಾ, ಪಾರ್ವತಿ, ವಾಣಿ ಸೇರಿದಂತೆ ಮಹಿಳೆಯರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















