ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಂಡಾಯ ಸಾಹಿತ್ಯ

ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ
ಎಲೆಕ್ಷನಲ್ಲಿ ಗೆಲ್ಲವ ಆಸೆಗಾಗಿ ಹೆಂಡ ತುಂಡು ಕೊಟ್ಟಾರ
ಗೆಲ್ಲುವ ಸಲುವಾಗಿ ದೊಡ್ಡ ದೊಡ್ಡ ಭಾಷಣ ಬಿಟ್ಟಾರ
ಗೆದ್ದ ಮೇಲೆ ಊರನ್ನೇ ಕೊಳ್ಳೆ ಹೊಡಿಯೋಕೆ ನಿಂತಾರ
ಅಕ್ಷರ ಜ್ಞಾನ ಇಲ್ಲದಿದ್ದರೂ ಅಧಿಕಾರ ನುಂಗ್ಯಾರ
ಅರಿವಿಲ್ಲದ ನಮ್ಮ ಜನ ಪವಿತ್ರ ವೋಟು ಮಾರಿಬಿಟ್ಟಾರ
ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ

ವಿದ್ಯಾಸಂಸ್ಥೆ ತೆಗಿತೀವಿ ಅಂತ ದೊಡ್ಡ ದೊಡ್ಡ
ಬಿಲ್ಡಿಂಗ್ ಕಟ್ಟಿಸ್ಯಾರ ಪೀಜು, ಡೊನೇಷನ್
ಹೆಸರಲ್ಲಿ ವ್ಯವಹಾರ ನಡೆಸ್ಯಾರ
ವಿದ್ಯಾ ತಾಯಿ ಹೆಸರಲ್ಲಿ ಇವತ್ತು ಕೆಲವರು ವ್ಯಾಪಾರ ನಡಿಸ್ಯಾರ.
ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ

ರೈತ ದೇಶದ ಬೆನ್ನೆಲುಬಂತ ಜಗತ್ತಿಗೆ ಸಾರಿದಾರ
ಬೆಳೆದ ಬೆಳೆಗೆ ಬೆಲೆ ಕೇಳಲು ಹೋದ ರೈತರ ಬೆನ್ನು ಮುರಿದಾರ
ನಾಚಿಕೆ ಇಲ್ಲದ ಕೆಲವು ಹರಾಮಿ ಮಂದಿ ರೈತ ಬೆಳೆದ ಅನ್ನ ತಿಂತಾರ
ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ

ಸ್ವಾಮಿ ಅಂತ ಕಾವಿ ಹಾಕಿ ಕಾಮದ ಆಟ ನಡಿಸ್ಯಾರ
ಕಾವಿ ಹಾಕಿ ಕೆಲವು ಕಳ್ಳ ಸ್ವಾಮಿಗಳು
ಪವಿತ್ರ ಕಾವಿಗೆ ಕಳಂಕ ತಂದಾರ
ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ

  • ಮಂಜುನಾಥ ಈರಪ್ಪ ಗುರಿಕಾರ
    ಸಾ: ಕಂದಕೂರು
    ತಾ:ಕುಷ್ಟಗಿ, ಜಿ:ಕೊಪ್ಪಳ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!