ಬೀದರ್ : ಬೀದರ್ ಜಿಲ್ಲೆಯ ಎಲ್.ಪಿ.ಜಿ. ಬಳಕೆದಾರರಿಗೆ ತಿಳಿಸುವುದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಗಳು ಸಾಕಷ್ಟು ಪ್ರಮಾಣದಲ್ಲಿ ಸದ್ಯ ದಾಸ್ತಾನು ಲಭ್ಯವಿರುವುದರಿಂದ ಗ್ರಾಹಕರ ಯಾರು ಗಾಬರಿಗೊಳ್ಳಬಾರದೆಂದು ಹಾಗೂ ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಳ್ಳಬಾರದೆಂದು ತಿಳಿಯಪಡಿಸಿದೆ ಹೆಚ್ಚಿನ ಗ್ರಾಹಕರು ಮುಂಚಿತವಾಗಿ ಬುಕಿಂಗ್ ಮಾಡುತ್ತಿರುವುದರಿಂದ ಐವಿಆರ್ಎಸ್/ಮಿಸ್ಡ್ ಕಾಲ್ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟನೆ ಉಂಟಾಗಿ ಸದರಿ ಸಿಸ್ಟಮ್ ಗಳು ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ ಪರ್ಯಾಯವಾಗಿ IOCL, HPCL ಮತ್ತು BPCL ಎಲ್ಪಿಜಿ ತೈಲ ಕಂಪನಿಗಳ ವಾಟ್ಸ್ಆಪ್ ನಂಬರ್ ಮುಖಾಂತರ ಸಹ ಬುಕ್ಕಿಂಗ್ ಮಾಡಬಹುದು.
ದಿನಾಂಕ.11-03-2026ರಂದು ಜಿಲ್ಲೆಯ ಗ್ಯಾಸ್ ಏಜೆನ್ಸಿದಾರರ ಮತ್ತು ಹೋಟೆಲ್ ಉದ್ಯಮಿದಾರರ
ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ವಾಣಿಜ್ಯ ಸಿಲಿಂಡರ್ಗಳ ಲಭ್ಯತೆಯ ಬಗ್ಗೆ ಚರ್ಚಿಸಲಾಗಿ ಹೋಟೆಲ್ಗಳಲ್ಲಿ ಲಭ್ಯವಿರುವ ಸಿಲಿಂಡರ್ಗಳನ್ನು ಅಗತ್ಯತೆಯ ಪ್ರಮಾಣದಲ್ಲಿ ಬಳಸಲು ಮತ್ತು ಗ್ಯಾಸ್ ಏಜೆನ್ಸಿ ಬಳಿ ಸ್ಟಾಕ್ ಇರುವ ವಾಣಿಜ್ಯ ಸಿಲಿಂಡರ್ಗಳನ್ನು ಅವಶ್ಯಕತೆ ಅನುಗುಣವಾಗಿ ಹೋಟೆಲುಗಳಿಗೆ
ಸರಬರಾಜು ಮಾಡಲು ಸೂಚಿಸಲಾಯಿತು. ಯಾರು ಅನಗತ್ಯವಾಗಿ ಹೆಚ್ಚಿನ ಸಿಲಿಂಡರನ್ನು ಸಂಗ್ರಹಣೆ ಮತ್ತು
ಮಾರ್ಗಾಂತರ ಮಾಡಬಾರದೆಂದು ತಿಳಿಸಿ. ಅಂತಹ ಪ್ರಕರಣಗಳು ಕಂಡು ಬಂದರೆ ಅಗತ್ಯ ವಸ್ತುಗಳ ಕಾಯ್ದೆ
1955 ರಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಯಿತು. ಈ ಎಲ್ಲಾ ವಿಷಯಗಳನ್ನು
ಜಿಲ್ಲೆಯ ಗ್ರಾಹಕರ ಗಮನಕ್ಕೆ ತರುತ್ತಾ ಜಿಲ್ಲೆಯಲ್ಲಿ ಎಲ್.ಪಿ.ಜಿ ಸಿಲಿಂಡರ್ ಗಳ ಕೊರತೆ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯಪಡಿಸಿದೆ.
ವರದಿ : ಶ್ರೀನಿವಾಸ ಬಿರಾದಾರ




















