ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬ್ರಾಹ್ಮಣ ಅಭಿವೃದ್ಧಿ ಮತ್ತು ಸಂಘಟನೆ ನಮ್ಮ ಗುರಿ :ಶ್ರೀ ಎಸ್ ರಘುನಾಥ್

ಬೆಂಗಳೂರು: ಬ್ರಾಹ್ಮಣ್ಯವನ್ನು ಉಳಿಸಿ ಬೆಳೆಸಿ ಸಂಘಟಿತಗೊಳ್ಳುವ ಅವಶ್ಯಕತೆ ಇಂದು ಅನಿವಾರ್ಯ. ಈ ಜಾಗತಿಕ ಕಾಲಘಟ್ಟದಲ್ಲಿ ನಾವು ವಿವಿಧ ಯೋಜನೆಗಳ ಮೂಲಕ ಬ್ರಾಹ್ಮಣರ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದೇವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ.) ಇದರ ಅಧ್ಯಕ್ಷ ಶ್ರೀ ಎಸ್ ರಘುನಾಥ್ ಅವರು ಮಹಾಸಭಾದ ವಾರ್ಷಿಕ ಸರ್ವ ಸದಸ್ಯರ ಸಭೆಯ ತಮ್ಮ ಅಧ್ಯಕ್ಷ ಭಾಷಣದಲ್ಲಿ ಪ್ರತಿಪಾದಿಸಿ, ಮುಂದುವರಿದ ಅವರು ನಾನು ಅಧಿಕಾರ ಸ್ವೀಕರಿಸಿದ ದಿನದಿಂದ ಒಂದೇ ವರ್ಷದಲ್ಲಿ ಹದಿಮೂರು ಸಾವಿರಕ್ಕೂ ಮೀರಿದ ಸದಸ್ಯತ್ವ ಸೇರ್ಪಡೆಗೊಂಡಿದ್ದು ಇದಕ್ಕೆ ಜಿಲ್ಲಾ ಪ್ರತಿನಿಧಿಗಳು, ಕಾರ್ಯಕರ್ತರ ಶ್ರಮ ಅಪಾರವಾಗಿದ್ದು ಸಂಘಟನೆಯ ಶಕ್ತಿಗೆ ನೀರೆರೆಯುವ ಎಲ್ಲರ ಶ್ರಮ ಅಭಿನಂದನೀಯ ಎಂದು ಸ್ಮರಿಸಿ, ಬ್ರಾಹ್ಮಣ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಮಹಾಸಭೆಗೆ ಕಾರ್ಪಸ್ ನಿಧಿಯನ್ನು ಸೇರಿಸಲಾಗುತ್ತಿದೆಯಲ್ಲದೆ ವಿದ್ಯಾರ್ಥಿವೇತನ ನಿಧಿ, ಅಂತ್ಯಕ್ರಿಯೆ ನಿಧಿ, ಆರೋಗ್ಯ ನಿಧಿ ಇತ್ಯಾದಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ತಮ್ಮಲ್ಲಿರುವ ಮಹತ್ವಾಕಾಂಕ್ಷೆಗಳನ್ನು ಅಧ್ಯಕ್ಷ ಶ್ರೀ ಎಸ್ ರಘುನಾಥ ಅವರು ಎಳೆ ಎಳೆಯಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಮಹಾಸಭಾದ ನಿಕಟ ಪೂರ್ವ ಅಧ್ಯಕ್ಷ ಅಡ್ವೊಕೇಟ್ ಹಾರನಹಳ್ಳಿ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ. ಎನ್ ಸತ್ಯಪ್ರಕಾಶ್ , ಖಜಾಂಚಿ ಶ್ರೀ ಸುಬ್ಬ ನರಸಿಂಹ ಹಿರಿಯ ಉಪಾಧ್ಯಕ್ಷ ಶ್ರೀ ಆರ್. ಲಕ್ಷ್ಮಿಕಾಂತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!