
ಸಿಂಧನೂರು : ಪಟ್ಟಣದಲ್ಲಿನ ಸೈಯದ್ ಹಾರೂನ್ ಜಾಗೀರ್ದಾರ್ ಅವರು ತಮ್ಮ ಮನೆಯಲ್ಲಿ ದಿನಾಲೂ ರಂಜಾನ್ ಮಾಸದ ಅಂಗವಾಗಿ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳುತ್ತಿದ್ದು 24ನೇ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟವು ಆತ್ಮೀಯ ಹಾಗೂ ಸೌಹಾರ್ದ ವಾತಾವರಣದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ರಾಜಶೇಖರ್ ಹಿಟ್ನಾಳ್ ಅವರು ಭಾಗವಹಿಸಿ ಇಫ್ತಾರ್ ಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ, ರಂಜಾನ್ ಮಾಸವು ಸಹೋದರತ್ವ, ಸಹಿಷ್ಣುತೆ ಆಧ್ಯಾತ್ಮಿಕ ಶಿಸ್ತು ಮತ್ತು ಭಕ್ತಿ, ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಾರುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಎಲ್ಲಾ ಧರ್ಮಗಳ ಜನರು ಒಂದಾಗಿ ಬದುಕುವ ಸಂಸ್ಕೃತಿ ಮತ್ತಷ್ಟು ಬಲವಾಗಬೇಕು ಎಂಬ ಆಶಯ ಹೊಂದಿದೆ, ಇಂತಹ ಕಾರ್ಯವನ್ನು ನಿರ್ವಹಿಸುತ್ತಿರುವ ಸೈಯದ್ ಹಾರೂನ್ ಜಾಗೀರ್ದಾರ್ ರವರಿಗೆ ಉನ್ನತ ಸ್ಥಾನ ಲಭಿಸಲಿ ಎಂದು ಸಂತೋಷ ವ್ಯಕ್ತಪಡಿಸಿ ಸಿಂಧನೂರಿನ ಜನತೆಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ರಾಜ್ಯ ಸರ್ಕಾರದ ಪ್ರತಿಷ್ಠಿತ ‘ದತ್ತಿ ಅಭಿಮನ್ಯು’ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರಾದ ಚಂದ್ರಶೇಖರ್ ಬೆನ್ನೂರು ಅವರನ್ನು ಸಂಸದರು ಸನ್ಮಾನಿಸಿದರು.
ಸೈಯದ್ ಹಾರೂನ್ ಜಾಗೀರ್ದಾರ್ ಅವರು ಆಗಮಿಸಿದ ಸಂಸದರಿಗೆ, ಪತ್ರಕರ್ತರಿಗೆ, ಸ್ನೇಹಿತರಿಗೆ ಹಾಗೂ ಸಮುದಾಯದ ಬಂಧುಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಜಯ್ ಜೈನ್, ಕಂಪ್ಲಿಯ ಯುವ ಯುವ ಮುಖಂಡ ಅಕ್ಕಿ ಜಿಲಾನ ಮತ್ತು ಸ್ನೇಹಿತರು. ಸಮುದಾಯದ ಹಿರಿಯರು, ಯುವಕರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















