ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಬ್ದುಲ್ ಕಲಾಂ ಎಸ್.ಪಿ ಚಾರಿಟೇಬಲ್ ಫೌಂಡೇಷನ್ (ರಿ.) ಕೋಚಿಂಗ್ ಸೆಂಟರ್ ಉದ್ಘಾಟನೆ

ಬಡವರ ಅನಾಥ ಮಕ್ಕಳ ಬದುಕಿಗೆ ವರವಾದ ಅಬ್ದುಲ್ ಕಲಾಂ ಎಸ್.ಪಿ. ಚಾರಿಟೇಬಲ್ ಫೌಂಡೇಷನ್ : ವಾಮದೇವ ಶ್ರೀಗಳು

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಕೆನರಾ ಬ್ಯಾಂಕ್ ಬಳಿಯಲ್ಲಿ ಡಾ.ಅಬ್ದುಲ್ ಕಲಾಂ ಎಸ್.ಪಿ ಚಾರಿಟೇಬಲ್ ಫೌಂಡೇಶನ್ ಲೋಕಾರ್ಪಣೆಗೊಳ್ಳುವ ಜೊತೆಗೆ ಕೋಚಿಂಗ್ ಸೆಂಟರ್ ಅನ್ನು ಹಂಪಿ ಸಾವಿರ ದೇವರ ಮಹಾಂತ ಮಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಇವರು ದಿವ್ಯ ಸಾನಿಧ್ಯದೊಂದಿಗೆ ಭಾನುವಾರ ಸಂಜೆ ಉದ್ಘಾಟಿಸಿದರು.

ಹಂಪಿ ಸಾವಿರ ದೇವರ ಮಹಾಂತ ಮಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಬದುಕಿಗೆ ಮನುಷ್ಯ ಘನತೆ ನೀಡಬೇಕು. ಘನತೆ ನೀಡದಿದ್ದರೆ ಘನಕಾರ್ಯ ಮಾಡುವುದಿಲ್ಲ. ಅಬ್ದುಲ್ ಕಲಾಂ ಅವರನ್ನು ಜಗತ್ತು ಪ್ರೀತಿಸಿದೆ. ಜಗತ್ತಿನಲ್ಲಿ ಜ್ಞಾನದ ಹಸಿವನ್ನು ಕೈವಶ ಮಾಡಿಕೊಂಡಿದ್ದರು. ಶಿಕ್ಷಣದ ಮುಂದೆ ನಿಂತರೆ ದೊಡ್ಡವರಾಗಲು ಸಾಧ್ಯ ನೆಲದ ಮೇಲಿನ ನಡೆಯಿಂದ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗಿದೆ. ಜ್ಞಾನದಿಂದ ನಾಡಿನಲ್ಲಿ ಬದುಕುವ ಸಂಸ್ಕೃತಿಯನ್ನು ಕಲಿಸಿಕೊಡುತ್ತದೆ. ಅದೃಷ್ಟದ ಮೇಲೆ ಹೋಗಬೇಡಿ, ಕಠಿಣ ಪರಿಶ್ರಮದಿಂದ ಹೋದರೆ ಜಗತ್ತು ಗುರುತಿಸುತ್ತದೆ. ಇಡೀ ವಿಶ್ವ ಮುಂದಿನ ದಿನದಲ್ಲಿ ಆರ್ಥಿಕವಾಗಿ ದಿವಾಳಿಯಾಗಲಿದೆ. ಮನೆಯ
ಮೂಲ ಘಟ್ಟಗಳ ಮೂಲಕ ಬದುಕು ಸಾಗಿಸುವ ಕಾಲ ಬರುತ್ತದೆ. ಯುವಕರು ಭಾರತ ದೇಶದ ಸಂಪತ್ತು. ಚಾರಿಟೇಬಲ್ ಸಂಸ್ಥೆಯು ಬಡವರ, ಅನಾಥ, ದಿನದಲಿತರ ಪರವಾಗಿ ತರಗತಿಗಳನ್ನು ನಡೆಸುತ್ತಿದೆ, ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.

ಪಿಎಸ್‌ಐ ಸುಪ್ರೀತ್ ವಿರುಪಾಕ್ಷಪ್ಪ ಮಾತನಾಡಿ, ಸಮಾಜ ಸೇವೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ. ಕಲಾಂ ಅವರ ಚಿಂತನೆ ಮತ್ತು ತತ್ವದಾರ್ಶಗಳೊಂದಿಗೆ ಸಂಸ್ಥೆಯನ್ನು ಕಟ್ಟಿದ್ದು, ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ರೂಪುಗೊಳ್ಳಲಿದೆ. ಜ್ಞಾನದ ಮಹತ್ವ ಅರಿತು-ಕೊಂಡು ನಡೆದಾಗ ಜೀವನ ಉತ್ತಮವಾಗಿರುತ್ತದೆ ಯುವಕರ ತಂಡಕ್ಕೆ ಶುಭವಾಗಲಿ ಎಂದರು.

ಡಾ.ಅಬ್ದುಲ್ ಕಲಾಂ ಎಸ್.ಪಿ ಚಾರಿಟೇಬಲ್ ಪೌಂಡೇಷನ್ ಸಂಸ್ಥಾಪಕ ಹೆಚ್.ಪೀರಾವಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಿಕೊಡುವ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಜಾಗೃತಿವಹಿಸಬೇಕು. ಬೌದ್ಧಿಕವಾಗಿ ಬೆಳೆಯುವ ಜೊತೆಗೆ ಶಿಕ್ಷಣವೂ ಪ್ರತಿಯೊಬ್ಬರ ಜೀವನಕ್ಕೆ ಅತ್ಯವಶ್ಯಕವಾಗಿದೆ ಇಂತಹ ಶಿಕ್ಷಣವನ್ನು ನಾವು ನೀಡಲು ಅನುಭವಿ ಶಿಕ್ಷಕರ ತಂಡ ಸಿದ್ದರಿದ್ದು ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.

ಹೆಚ್.ವೀರಾಪುರದ ಜ್ಞಾನಜ್ಯೋತಿ ಶಿವಲಿಂಗ ಮಠದ ಜಡೇಶತಾತ, ಧರ್ಮಗುರುಗಳಾದ ಸೈಯದ್ ಶಬ್ಬಿರ್ ಖಾದಿ, ಹಫೀಜ್ ಮೊಹ್ಮದ್ ಆಜಂ ಷಹಾದ್,
ಸಾನಿಧ್ಯವಹಿಸಿದ್ದರು. ಡಾ.ಅಬ್ದುಲ್ ಕಲಾಂ ಎಸ್.ಪಿ ಚಾರಿಟೇಬಲ್ ಪೌಂಡೇಷನ್ ಅಧ್ಯಕ್ಷೆ ಹಂಚಿನಾಳ್ ಜಿ.ಜಬೀನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ನಂತರ ಕರಾಟೆ ಸೇರಿದಂತೆ ವಿವಿಧ ರಂಗದಲ್ಲಿ ಸಾಧನೆಗೈದ ಮಕ್ಕಳಿಗೆ ಹಾಗೂ ವೇದಿಕೆ ಮೇಲಿನ ಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಪಾಸ್ಟರ್ ತೀಮೋತಿ, ಉಪಾಧ್ಯಕ್ಷ ರಾಜಣ್ಣ, ಸಮಾಜ ಸೇವಕ ಕನಕಪ್ಪ ಸುಣಗಾರ, ಮುಖಂಡರಾದ ಸದಾಶಿವಪ್ಪ, ಗಾದಲಿ ನಾಗರೆಡ್ಡಿ, ಗಾದಿಲಿಂಗಪ್ಪ, ಕೋನೆಮನೆ, ಶರಣಬಸವ, ಸಾಧಕಲಿ ಹುಸೇನಬಾಷಾ, ಕಡೆಮನೆ ಪೀರಾಸಾಬ್, ಎಂ. ಎಸ್. ಮೂಗಪ್ಪ, ಟಿ.ರಾಮು, ರಾಜಸಾಬ್, ವಿ.ವಿರೇಶ, ಪದ್ಮಾವತಮ್ಮ, ಹಂಪಾಪತಿ, ಬಸವರಾಜ್, ಮಲ್ಲೇಶ, ಪತ್ತಾರ ಮೌಲಾಸಬ್, ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.

ಜಡೆಮ್ಮ ಹಾಗೂ ಭಾನುಬಿ ಪ್ರಾರ್ಥಿಸಿದರು, ಎಸ್.ರಾಮಪ್ಪ ಕಾರ್ಯಕ್ರಮ ನಿರೂಪಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!