ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಅಲಿಮಾರ್ ಶ್ರೀ ಆದಿ ರಕ್ತೇಶ್ವರಿ ಕ್ಷೇತ್ರ ಪುಸ್ತಕ ಬಿಡುಗಡೆ

ಉಡುಪಿ/ ಉಳ್ಳಾಲ: ತಾಲೂಕಿನ ಇರ ಆಚೆಬೈಲು ಪುರಾತನ ಕ್ಷೇತ್ರವಾದ ಶ್ರೀ ಮಲರಾಯ,ಧೂಮಾವತಿ, ಬಂಟ ಮತ್ತು ಪರಿವಾರ ಕ್ಷೇತ್ರದಲ್ಲಿ ದಿನಾಂಕ 16.3.2026 ರಂದು ನೇಮೋತ್ಸವದ ಸಂದರ್ಭದಲ್ಲಿ ಇರ ಶ್ರೀ ನೇಮು ಪೂಜಾರಿ, ಕವಿ ಕಾವ್ಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಬರೆದಿರುವ “ಇರ ಸೈಟ್ ಶ್ರೀ ಅಲಿಮಾರ್ ಆದಿ ರಕ್ತೇಶ್ವರಿ ಕ್ಷೇತ್ರ ” ಕುರಿತು ಬರೆದಿರುವ ಕೃತಿಯನ್ನು ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಗಡಿ ಪ್ರಧಾನರಾದ ಶ್ರೀ ಭಾಸ್ಕರಯಾನೆ ಮಂಜನ ಪೂಜಾರಿಯವರು ಬಿಡುಗಡೆ ಮಾಡಿದರು.

ದೈವದ ಆರಾಧಕರಾದ ಶ್ರೀ ರವೀಂದ್ರರವರು, ಶ್ರೀ ಇರ ನೇಮೂ ಪೂಜಾರಿ, ಶ್ರೀ ಆನಂದ ಪೂಜಾರಿ, ಶ್ರೀಮತಿ ಶಕೀಲರವರು, ಶ್ರೀ ಕಾರ್ತಿಕ್ ಮೊದಲಾದವರು ಭಾಗವಹಿಸಿದ್ದರು. ಈ ಹಿಂದೆ ಇದೇ ಕ್ಷೇತ್ರದಲ್ಲಿ ದೈವದೇವರಿಂದ ಊರಿಗೆ ಬೆಳಕು ಎಂಬ ಕೃತಿಯನ್ನು ಇರ ನೇಮು ಪೂಜಾರಿ ಬರೆದಿದ್ದು, ಮಾನ್ಯ ಕರ್ನಾಟಕ ಸರಕಾರದ ಈ ಹಿಂದಿನ ಧಾರ್ಮಿಕದತ್ತಿ ಸಚಿವರು, ಮೈಸೂರು ರಾಜ ಮನೆತನದ ಡಾಕ್ಟರ್ ಎಂ.ಜಿ.ಆರ್ ಅರಸು ಮೊದಲಾದ ಗಣ್ಯರು ಇದ್ದ ಧಾರ್ಮಿಕ ಸಭೆಯಲ್ಲಿ ಪರಮ ಪೂಜ್ಯ ಶ್ರೀ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ್ ಸ್ವಾಮೀಜಿ ಮಾಣಿಲಾ ಬಿಡುಗಡೆ ಮಾಡಿದ್ದರು.

ಶ್ರೀ ಕ್ಷೇತ್ರಕ್ಕೆ ಅನಾಧಿಯಲ್ಲಿ ಚಂದ್ರಗಿರಿಯಿಂದ ದೊಡ್ಡಮ್ಮ ಮತ್ತು ಸಣ್ಣಮ್ಮ ಅಕ್ಕ ತಂಗಿಯರು ಜಟಾಧಾರಿಗಳು ಆಚೆ ಬೈಲಿಗೆ ಬಂದು ಯಕ್ಷಗಾನ, ಸಾಹಿತ್ಯ ಪ್ರೀತಿಸಿ,ಪೋಷಿಸಿ, ಬೆಳೆಸಿದ ವಿಚಾರಧಾರೆ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿತ್ತಲ್ಲದೆ ಕುಂಡಾವೂ ಊರು ಮಹಾ ತಪಸ್ವಿ ಕುಂಡಲಿನಿ ತಪಸ್ಸು ಮಾಡಿದ ಪುಣ್ಯ ಭೂಮಿಯಾಗಿದೆ ಎಂದು ವರದಿಯಾಗಿದೆ.

ಅಲಿಮಾರ್ ಕ್ಷೇತ್ರ ಮಹಾ ಗುರು ಧ್ಯಾನಾಸಕ್ತರಾಗಿ ಜ್ಞಾನದ ಸ್ನಾನ ಮಾಡಿ ಹಾಡಿದ ಮಾತೆಲ್ಲ ಗಾನವಾಗಿದೆ. ಒಟ್ಟಿನಲ್ಲಿ ಯಕ್ಷಗಾನದ ತವರೂರು ನಮ್ಮ ಇರ ಗ್ರಾಮವು ಸಾಹಿತ್ಯವ ಪ್ರೋತ್ಸಾಹಿಸುವ ದೊಡ್ಡ ಮರದಂತೆ ಗೋಚರಿಸುತ್ತಿದೆ. ಹಾವನ್ನು ಹೂವಾಗಿ ಧರಿಸಿದ ಗ್ರಾಮ ದೇವರು ಹರ ಶ್ರೀ ಇರಾ ಸೋಮನಾಥೇಶ್ವರ ದೇವಸ್ಥಾನದ ಸನ್ನಿಧಿ ಕೂಡಾ ಇಲ್ಲಿದೆಯಲ್ಲದೇ ಎಲ್ಲೆಡೆ ಯಕ್ಷಗಾನದ ಸ್ವರ ಹೊಮ್ಮಿಸಿದ ಊರಾಗಿದೆ ಎಂದು ಸ್ಪಷ್ಟಗೊಳ್ಳುತ್ತಿದೆ ಯಲ್ಲದೆ ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿ ಹಲವು ದಶಕಗಳಿಂದ ಕಲಾ ಸೇವೆಯಲ್ಲಿ ತೊಡಗಿತ್ತು ಎಂದು ಶ್ರೀ ಇರಾ ನೇಮು ಪೂಜಾರಿ ಅವರು ವಿವರಿಸಿದ್ದಾರೆ.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!