ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯು. ಟಿ. ಖಾದರ್ ಅವರ ನಾಯಕತ್ವ – ಒಂದು ದಿಟ್ಟ ಹೆಜ್ಜೆಯ ಇತಿಹಾಸ

ಬೆಂಗಳೂರು: ಶ್ರೀ ಯು ಟಿ ಖಾದರ್ ಅವರ ನಾಯಕತ್ವ ಇಂದು ಕರ್ನಾಟಕದ ರಾಜಕೀಯದಲ್ಲಿ ವಿಭಿನ್ನವಾದ ಮಾದರಿಯಾಗಿ ಹೊರಹೊಮ್ಮುತ್ತಿದೆ. ರಾಜಕೀಯವೆಂದರೆ ಕೇವಲ ಅಧಿಕಾರದ ಪೈಪೋಟಿ ಮಾತ್ರವಲ್ಲ, ಅದು ಮೌಲ್ಯಗಳು, ಸಹಿಷ್ಣುತೆ ಮತ್ತು ಪರಸ್ಪರ ಗೌರವದ ಮೇಲೆ ನಿಂತಿರಬೇಕೆಂಬ ಸಂದೇಶವನ್ನು ಅವರು ತಮ್ಮ ನಡೆ-ನುಡಿಗಳ ಮೂಲಕ ಸಮಾಜಕ್ಕೆ ನೀಡುತ್ತಿದ್ದಾರೆ.

ಇತ್ತೀಚೆಗೆ ಸದನದಲ್ಲಿ ನಡೆದ ಘಟನೆ ಅದಕ್ಕೆ ಅತ್ಯುತ್ತಮ ಉದಾಹರಣೆ. ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ಸಚಿವರ ವರ್ತನೆ ಮತ್ತು ನಿರ್ಲಕ್ಷ್ಯದ ಧೋರಣೆಗೆ ತಕ್ಕ ಶಿಕ್ಷಣ ನೀಡಲು ಶ್ರೀ ಖಾದರ್ ಅವರು ಧಿಡೀರ್ ಎಂದು ಸಭಾ ತ್ಯಾಗ ಮಾಡುವ ಮೂಲಕ ರಾಜ್ಯ ವಿಧಾನಸಭೆಯಲ್ಲಿ ಇತಿಹಾಸ ನಿರ್ಮಿಸಿದರು.

ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿಯುವಂತಹ ದಿಟ್ಟ ಹೆಜ್ಜೆಯನ್ನು ಇಟ್ಟ ನಮ್ಮ ನಲ್ಮೆಯ ಸ್ಪೀಕರ್‌ವರಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಬೇಕು. ಇಂತಹ ಧೈರ್ಯಶಾಲಿ ನಿರ್ಧಾರ ಕೈಗೊಳ್ಳಲು ಎಂಟೆದೆ ಬೇಕು ಸಾಮಾನ್ಯವಾಗಿ ರಾಜಕೀಯದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಟೀಕೆಗಳಿಗೆ ಗುರಿಯಾಗುವುದು ಸಹಜ. ಆದರೆ ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಯುತವಾಗಿ ನಡೆದುಕೊಳ್ಳುವುದು ಒಬ್ಬ ನಿಜವಾದ ನಾಯಕರ ಲಕ್ಷಣ. ಆ ಗುಣವನ್ನು ಖಾದರ್ ಅವರು ಮತ್ತೆ ಸಾಬೀತುಪಡಿಸಿದ್ದಾರೆ.

ನಾವು ಹೇಗೆ ಬೆಳೆಯಬೇಕು ಎಂದರೆ, ನಮ್ಮನ್ನು ಧಿಕ್ಕರಿಸುವವರೇ ಕೂಡ ನಮ್ಮ ನಡೆ-ನುಡಿಗಳನ್ನು ಮೆಚ್ಚುವಂತಾಗಬೇಕು. ಇಂದು ಸದನದಲ್ಲಿ ನಡೆದದ್ದು ಅಕ್ಷರಶಃ ಅಂತಹದ್ದೇ ಒಂದು ಅಪೂರ್ವ ಕ್ಷಣವಾಗಿದೆ. ಸಾಮಾನ್ಯವಾಗಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ಕಟುವಾದ ವಾಗ್ವಾದಗಳು ನಡೆಯುವುದು ರಾಜಕೀಯದ ಭಾಗವೇ ಆಗಿದೆ. ಆದರೆ ಇಂದು ವಿರೋಧ ಬಣದಲ್ಲಿ ಕೂತವರೇ ಸ್ಪೀಕರ್ ಅವರ ನಿರ್ಧಾರವನ್ನು ಮೆಚ್ಚಿಕೊಂಡು ಅಭಿನಂದನೆಯ ಮಹಾಪೂರ ಹರಿಸಿದರು.

ಇದು ಒಂದು ಸಾಮಾನ್ಯ ಘಟನೆ ಅಲ್ಲ :

ಇದು ನಾಯಕತ್ವದ ಸಾರ್ಥಕತೆಯನ್ನು ತೋರಿಸುವ ಕ್ಷಣ.
ಈ ಗೌರವದ ಹಿಂದೆ ಇರುವ ಮುಖ್ಯ ಕಾರಣ ಅವರ ವಿಶಾಲ ಮನೋಭಾವನೆ, ನಿಷ್ಕಲ್ಮಶ ಸೇವಾಭಾವ ಮತ್ತು ದೂರದೃಷ್ಟಿಯ ಕಾರ್ಯವೈಖರಿ. ರಾಜಕೀಯದಲ್ಲಿ ವ್ಯಕ್ತಿಯ ಸ್ವಾರ್ಥಕ್ಕಿಂತ ಸಮಾಜದ ಹಿತವೇ ಮುಖ್ಯವೆಂಬ ತತ್ವವನ್ನು ಶ್ರೀ ಖಾದರ್ ಅವರು ಸದಾ ಪಾಲಿಸುತ್ತಿದ್ದಾರೆ.

ಸದನವನ್ನು ಶಿಸ್ತಿನಿಂದ ಮತ್ತು ಗೌರವದಿಂದ ನಡೆಸುವುದು ಸ್ಪೀಕರ್‌ನ ಪ್ರಮುಖ ಜವಾಬ್ದಾರಿ. ಈ ಜವಾಬ್ದಾರಿಯನ್ನು ಅವರು ಸಮತೋಲನದಿಂದ ನಿರ್ವಹಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿರೋಧ ಪಕ್ಷದವರಿಂದಲೇ ಅಭಿನಂದನೆಯ ಧ್ವನಿ ಕೇಳಿಬಂದಾಗ, ಅದು ಒಬ್ಬ ನಾಯಕರ ಸಾಧನೆಯ ದೊಡ್ಡ ಮಾನ್ಯತೆ. ವಿರೋಧ ಬಣದಲ್ಲಿ ಕೂತವರೇ ಮೆಚ್ಚುವಂತಾಗಿದ್ದರೆ, ಅವರು ಇಟ್ಟ ಹೆಜ್ಜೆ ಎಷ್ಟೊಂದು ಪ್ರಭಾವ ಬೀರಿದೆ ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ. ಈ ಘಟನೆ ರಾಜಕೀಯದಲ್ಲಿ ಸಂಸ್ಕೃತಿ, ಸಹಿಷ್ಣುತೆ ಮತ್ತು ಪರಸ್ಪರ ಗೌರವದ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸುತ್ತದೆ.

ಮಂಗಳೂರಿನ ಹೆಮ್ಮೆಯ ಪುತ್ರರಾದ ಯು. ಟಿ. ಖಾದರ್ ಅವರ ಈ ನಡೆ ಇಡೀ ಮಂಗಳೂರಿನ ಜನತೆಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಬದಲಾವಣೆಯ ದಾರಿ ಯಾರಾದರೂ ಆರಂಭಿಸಬೇಕು; ಅದನ್ನು ನಮ್ಮಿಂದಲೇ ಆರಂಭಿಸಬೇಕು ಎಂಬ ಸಂದೇಶವನ್ನು ಅವರು ತಮ್ಮ ಕಾರ್ಯಗಳ ಮೂಲಕ ಸ್ಪಷ್ಟವಾಗಿ ತೋರಿಸುತ್ತಿದ್ದಾರೆ.

ಸರಳ ಸಜ್ಜನ ನಡೆ ನುಡಿಯ ಶ್ರೀ ಖಾದರ್ ಅವರು ನನ್ನ ಹುಟ್ಟೂರು ಮಂಗಳೂರು ಸಮೀಪದ ಮುಡಿಪು ಕುರ್ನಾಡು ಏರಿಯಾದಲ್ಲಿ ಇತ್ತೀಚೆಗೆ ಹಿಂದು ಜನಾಂಗದ ರಾಜಕೀಯ ನಾಯಕರೊಬ್ಬರು ನಿಧನರಾದಾಗ ದೂರದ ಬೆಂಗಳೂರಿಂದ ಬಂದು ತೀರಿ ಹೋದ ಹಿಂದೂ ಜನಾಂಗದವರ ಪ್ರಾರ್ಥಿವ ಶರೀರವನ್ನು ತಾವೇ ಸ್ವತಃ ಎಲ್ಲರೊಂದಿಗೆ ಎತ್ತಿ ಹಿಡಿದು ನಡೆದ ಅವರ ಉದಾತ್ತ ಮನೋಭಾವಕ್ಕೆ ಸಮಾಜವೇ ತಲೆ ಬಾಗುವಂತಿದೆ ಎಂಬುದು ಎಷ್ಟು ಜನರಿಗೆ ಅರಿವಾಗಬಹುದು ಎಂದು ವಿವರಿಸುವುದು ಕಷ್ಟ ಸಾಧ್ಯ.

ಒಟ್ಟಿನಲ್ಲಿ, ಶ್ರೀ ಯು. ಟಿ. ಖಾದರ್ ಅವರ ನಾಯಕತ್ವವು ಕೇವಲ ರಾಜಕೀಯವನ್ನೇ ಅಲ್ಲ, ಸಮಾಜದ ಮೌಲ್ಯಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಸಾಗುತ್ತಿದೆ. ಇಂತಹ ನಾಯಕತ್ವ ಇನ್ನಷ್ಟು ಬೆಳೆಯಲಿ, ಅವರ ಕಾರ್ಯಗಳು ಇನ್ನೂ ಹಲವರಿಗೆ ಪ್ರೇರಣೆಯಾಗಲಿ ಎಂಬುದು ಎಲ್ಲರ ಆಶಯವಾಗಿದೆ.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!