ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಸಭಾಂಗಣದಲ್ಲಿ ನಿನ್ನೆ ದಿನಾಂಕ: 17/03/2026 ರಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 51ನೇ ಜನ್ಮದಿನಾಚರಣೆ ನಿಮಿತ್ಯ ರಾಜ್ಯ ಮಟ್ಟದ ಕರ್ನಾಟಕ ರತ್ನ ಡಾ. ಪುನೀತ ರಾಜಕುಮಾರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಈ ಪ್ರಶಸ್ತಿಯು ಸರ್ಕಾರಿ , ಆರೋಗ್ಯ, ಮಾದ್ಯಮ, ಸಾಂಸ್ಕೃತಿಕ , ಕಾನೂನು ಕ್ಷೇತ್ರ ಸೇರಿದಂತೆ ಸಮಾಜ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೂನಿಯರ್ ಪುನೀತ್ ರಾಜ್ ಕುಮಾರ್ ಅಪ್ಪು ಸಕಲೇಶಪುರ, ಕ.ರ.ವೇ. (ಕಾವಲುಪಡೆ) ರಾಜ್ಯಾಧ್ಯಕರಾದ ಡಾ. ಎಚ್. ಸುರೇಶ , ರಾಜ್ಯ ಉಪಾಧ್ಯಕ್ಷರಾದ ವಿ.ಎಮ್. ಭಂಗೂರೆ, ಬೀದರ್ ಜಿಲ್ಲಾ ಅಧ್ಯಕ್ಷರಾದ ಅವಿನಾಶ ಬುಧರಕರ್, ಯುವ ಅಧ್ಯಕ್ಷ ಸ್ಟೀಫನ್ ಪೌಲ್, ಬಸವಕಲ್ಯಾಣ ತಾಲೂಕು ಅಧ್ಯಕ್ಷರಾದ ಸುರೇಶ ಜಮ್ಮು, ತಾಲೂಕು ಉಪಾಧ್ಯಕ್ಷರಾದ ಸುನೀಲ ಕೋರೆ, ಹಾಗೂ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















