
ಗದಗ: ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಸುಮಾರು 12 ವರ್ಷಗಳಿಂದ ಹೂಳು ತುಂಬಿದಂತಹ ಗ್ರಾಮದ ಕುಡಿಯುವ ನೀರಿನ ಸಾರ್ವಜನಿಕ ಕೆರೆಯ ಕೋಡಿಯನ್ನು ಸಂಕಲ್ಪ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗದಗ ವತಿಯಿಂದ ಪುನರ್ಚೇತನ ಕಾರ್ಯವನ್ನು ಗ್ರಾಮದ ಗ್ರಾಮಸ್ಥರ ಸಹಕಾರದಿಂದ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಊರಿನ ಪ್ರಮುಖ ರೈತರು ಯುವಕರು ಎಲ್ಲರ ಸಹಭಾಗಿತ್ವದೊಂದಿಗೆ ಊರ ಕೆರೆಯ ಕೋಡಿಯ ಕೆಲಸವನ್ನು ಯಾವುದೇ ತೊಂದರೆ ಆಗದ ಹಾಗೆ ನೆರವೇರಿದೆ ಈ ಗ್ರಾಮದ ಸುಮಾರು 2000 ಕುಟುಂಬಗಳಿಗೆ ನೀರಿನ ಸೌಕರ್ಯ ಒದಗಿಸಿ ಕೊಟ್ಟಂತೆ ಆಗುತ್ತದೆ ಹಾಗೂ ಈ ಇಲ್ಲಿ ಬರುವ ಫಲವತ್ತವಾದ ಮಣ್ಣನ್ನು ರೈತರು ತಮ್ಮ ಜಮೀನಿನಲ್ಲಿ ಬದುವಿಗೆ ಹಾಗೂ ತಗ್ಗುಗಳಿಗೆ ಹಾಕಿಸಿಕೊಂಡು ಮತ್ತು ಮುಂದಿನ ದಿನಮಾನಗಳಲ್ಲಿ ಈ ಬೆಳೆಗಳನ್ನು ತೆಗೆಯಲು ತುಂಬಾ ಫಲವತ್ತು ಆದ ಮಣ್ಣು ಇದೆ ಎಂದು ಹೇಳಲು ಇಚ್ಚಿಸುತ್ತಾರೆ ಮತ್ತು 1-2 ವರ್ಷ ನಮಗೆ ಗೊಬ್ಬರದ ಖರ್ಚು ಕಡಿಮೆಯಾಗುತ್ತೆ ಎಂದು ರೈತರ ಮುಖದಲ್ಲಿ ಸಂತಸವನ್ನು ತಂದಂತ ಈ ಸಂಕಲ್ಪ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಊರಿನ ವತಿಯಿಂದ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ವರದಿ : ಹನುಮಪ್ಪ ಹ. ದಾಸರ




















