ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಅಸ್ಸಾಂ ಹಾಗೂ ಇನ್ನಿತರ ಕಡೆಗಳಿಂದ ಬಂದತಹ ವಲಸೆ ಕಾರ್ಮಿಕರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ – ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಮಡಿಕೇರಿ ಹಾಗೂ ಕೊಡಗು ಜಿಲ್ಲೆಯ ಇತರೆಡೆ ಅಸ್ಸಾಂ ಹಾಗೂ ಇನ್ನಿತರ ಕಡೆಗಳಿಂದ ಬಂದತಹ ವಲಸೆ ಕಾರ್ಮಿಕರಿಂದ ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಮಾರುಕಟ್ಟೆಯಲ್ಲಿ ಮಾರುತ್ತಿರುವ ತಂಬಾಕು ಉತ್ಪನ್ನಗಳ ಹಾಗೂ ಇನ್ನಿತರ ವಸ್ತುಗಳ ಮಾರಾಟದಿಂದಾಗಿ ಕೊಡಗು ಜಿಲ್ಲೆಯ ಜನತೆಯ ಮೇಲೆ ಆಗುತ್ತಿರುವ ದುಷ್ಪರಿಣಾಮ ಹಾಗೂ ಕೆಲವು ಗ್ರಾಮಿಣ ಭಾಗದಲ್ಲಿ ಸಂಜೆಯ ಸಮಯ ಮದ್ಯಪಾನ ಸೇವಿಸಿ ಸ್ಥಳಿಯರಿಗೆ ಕಿರಿ ಕಿರಿ ಉಂಟು ಮಾಡಿತ್ತಿರುವುದು ಕಂಡು ಬರುತ್ತಿದೆ. ಜಿಲ್ಲೆಯ ಹಲವು ಮಾರುಕಟ್ಟೆಯಲ್ಲಿ ಇವರುಗಳು ವ್ಯಾಪಾರಕ್ಕೆ ಇಳಿದು ಅಶುಚಿತ್ವವಾದ ತಿಂಡಿ ತಿನಿಸುಗಳನ್ನು ಮಾರುತ್ತಿದ್ದಾರೆ ಹಾಗೂ ಇದಕ್ಕೆ ಯಾವುದೇ ಆಹಾರ ಇಲಾಖೆಯ ಪರವಾನಿಗೆ ಇಲ್ಲದೇ ರಾಜಾರೋಷವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದಲ್ಲದೇ ತಂಬಾಕು ಉತ್ಪನ್ನಗಳಾದ ಗುಡ್ಕ ಬೀಡಿ ಸಿಗರೇಟ್‌ಗಳನ್ನು ಕೂಡ ಮಾರುತ್ತಿದ್ದಾರೆ , ಇವರುಗಳಲಿ ಕೆಲವರು ಅಪರಾಧ ಪ್ರಕರಣಗಳಲ್ಲಿ ಕೂಡ ಭಾಗಿಯಾಗಿದ್ದು ಮುಂದಿನ ದಿನಗಳಲ್ಲಿ ಕೊಡಗಿಗೆ ಮಾರಕವಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಕೆಲ ದಿನಗಳ ಹಿಂದೆ ಸ್ಥಳೀಯ ವಾಹನ ಚಾಲಕನ ಮೇಲೆ ಹಲ್ಲೆ ಖಂಡಿಸಿ ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಹಾಗು ಕೊಡಗು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಇವರುಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಇವರ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ರವಿಗೌಡ ಉಪಾಧ್ಯಕ್ಷರಾದ ನಾಗೇಶ್, ಕಾರ್ಯದರ್ಶಿಗಳಾದ ಅಕ್ಷಿತ್, ಮಹಿಳಾ ಘಟಕದ ಕಾರ್ಯದರ್ಶಿಗಳಾದ ಲಿಲ್ಲಿಗೌಡ, ಎನ್‌ಸಿಐಬಿ ಯ ಜಾನ್ಸನ್ ಪ್ರವೀಣ್, ಸಮಿತಿ ಸದಸ್ಯರುಗಳಾದ ಪುನೀತ್, ಕಿರಣ್ ಹಾಗೂ ಇನ್ನೂ ಇತರರು ಪಾಲ್ಗೊಂಡಿದ್ದರು.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!