ಕೊಡಗು : ಕುಶಾಲನಗರದ ಬೈಚನಹಳ್ಳಿಯ ಭವಾನಿ ಲೇಔಟ್ ನ ರಸ್ತೆಯು ನಿನ್ನೆ ಸುರಿದ ಮಳೆಗೆ ಕೆಸರುಮಯವಾಗಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದ್ದು ಇಲ್ಲಿ ಯಾವುದೇ ರಸ್ತೆ ನಿರ್ಮಾಣವಾಗದೆ ಕೇವಲ ಮಣ್ಣಿನ ರಸ್ತೆಯಲ್ಲೇ ಸ್ಥಳೀಯರು ಸಂಚರಿಸುವ ಪರಿಸ್ಥಿತಿ ಬಂದಿದೆ ಹಾಗೂ ಇಲ್ಲಿ ಯಾವುದೇ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಇದಕ್ಕೆ ಸಂಬಂಧಪಟ್ಟ ಪಂಚಾಯಿತಿ ಹಾಗೂ ಸಿಇಓ ಅವರು ಕೂಡಲೇ ಇದನ್ನು ಪರಿಶೀಲನೆ ಮಾಡಿ ಇಲ್ಲಿಯ ನಿವಾಸಿಗಳಿಗೆ ಉತ್ತಮ ರೀತಿಯ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಮತ್ತು ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮನವಿ ಮಾಡಿದ್ದಾರೆ.
ವರದಿ ಪ್ರಿತುನ್ ಎ. ಪಿ.




















