ಬಳ್ಳಾರಿ / ಕಂಪ್ಲಿ : ನಿವೇದಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಹತ್ತನೇ ತರಗತಿ ಮಕ್ಕಳ ಬಿಳ್ಕೊಡುಗೆ ಸಮಾರಂಭ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲೆಯ ವ್ಯವಸ್ಥಾಪಕ ಕೆ ರಾಮು ಮಾತನಾಡಿ, ಮಕ್ಕಳಿಗೆ ಹತ್ತನೇ ತರಗತಿಯ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಕೆಲವು ಸೂಚನೆಗಳನ್ನು ನೀಡಿದರು.
ಇದೇ ವೇಳೆ ಮಾತನಾಡಿದ ಮುಖ್ಯಗುರು ಹೆಚ್. ಮರಿಯಪ್ಪ ಶಾಲೆಯಲ್ಲಿ ಸತತವಾಗಿ 8ವರ್ಷ ನೂರಕ್ಕೆ ನೂರು ಫಲಿತಾಂಶ ಪಡೆದಿದ್ದೇವೆ. ಅದೇ ರೀತಿಯಾಗಿ ಈ ವರ್ಷವೂ ಸಹ ಅದೇ ರೀತಿಯ ಫಲಿತಾಂಶವನ್ನು ಪಡೆಯುವ ವಿಶ್ವಾಸವಿದೆ. ಮಕ್ಕಳಿಗೆ ಮೌಲ್ಯದ ಶಿಕ್ಷಣ ಬಹಳ ಮುಖ್ಯವಾಗಿದೆ ವಿದ್ಯಾಭ್ಯಾಸಕ್ಕೆ ತಂದೆ-ತಾಯಿಯ ಹಾಗೂ ಶಿಕ್ಷಕರ ಸಹಕಾರ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು. 2024-25ನೇ ಸಾಲಿನ ಅತಿ ಹೆಚ್ಚು ಅಂಕ ಪಡೆದ ಶ್ರೀ ಗೌರಿ 606/625 ಶೇಕಡಾ 96.96% ಅಂಕವನ್ನು ಪಡೆದ ಹಾಗೂ ಪುಷ್ಪ ದ್ವಿತೀಯ ಕನ್ನಡ ವಿಷಯದಲ್ಲಿ 100/100 ಅಂಕಕ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಶಾಲಾ ವತಿಯಿಂದ ಕಿರು ಕಾಣಿಕೆ ನೀಡಲಾಯಿತು.
ಶ್ರೀ ಗೌರಿ ಮಾತನಾಡಿ, ನಿವೇದಿತ ಶಾಲೆ ನಮ್ಮಗೆ ಮೌಲ್ಯ ಶಿಕ್ಷಣವನ್ನು ನೀಡಿದೆ ಇಲ್ಲೆಲ್ಲಾ ಶಿಕ್ಷಕರು. ಶಿಕ್ಷಕಿಯರು ಆಡಳಿತ ಮಂಡಳಿಯವರು ಒಂದು ಕುಟುಂಬದಂತೆ ನಮ್ಮನ್ನು ನೋಡಿಕೊಂಡು ಒಳ್ಳೆಯ ವಿದ್ಯಾಭ್ಯಾಸವನ್ನು ಕೊಟ್ಟಿದ್ದಾರೆ ಆದ್ದರಿಂದ ನನಗೆ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಮಾತಾ ಮೊಂಟಸರಿ ಸಂಸ್ಥೆ (ರಿ.) ನಿವೇದಿತ ಶಾಲೆ ಕಂಪ್ಲಿಯ ಉಪಾಧ್ಯಕ್ಷರಾದ ಬಸವರಾಜ್ ಹಾಗೂ ಮುಖ್ಯ ಶಿಕ್ಷಕಿಯಾದ ಎಂ. ಪುಷ್ಪ ಮತ್ತು ಶಿಕ್ಷಕ/ ಶಿಕ್ಷಕಿಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















