ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚೈತ್ರದ ಚಿಗುರು

ಬರುತಿದೆ ಮತ್ತೆ ಯುಗಯುಗಾದಿ
ಹೊಸ ಚೈತ್ರಕೆ ಹಾಡಿದೆ ನಾಂದಿ
ಕೊರೆಯುವ ಚಳಿ ಹೋಗಿದೆ ಓಡಿ
ವಧುವರರಿಗೆ ಮಾಡಿದೆ ಮೋಡಿ

ಚೈತ್ರ ಕಾಲ ಬಂದಿತು ನಲಿಯುತ
ಮೈತ್ರಿ ಕೂಟದಲಿ ಝೇಂಕಾರ
ಧಾತ್ರಿ ಹಸಿರುಟ್ಟು ಕಂಗೊಳಿಸುತ
ನೇತ್ರಗಳಿಗೆ ರಸದೌತಣ ಶೃಂಗಾರ.

ಮಾವು ಚಿಗುರುತ ನಲಿಯುತಿರಲು
ಬೇವು ಹೂಬಿಟ್ಟು ವಿಜೃಂಭಿಸಿದೆ
ಜೀವನವೇ ಸುಂದರ ಗೊಳಿಸಿರಲು
ನೋವು ಮರೆತು ನಗುನಗುತಿದೆ

ಒಲವಿನಲಿ ನಲಿದಿವೆ ಕೋಗಿಲೆ, ಗಿಳಿ
ನಲಿವಿನ ಶಾಲೆ ಪ್ರಣಯಿಗಳ ಲೀಲೆ
ಕಲಿಸುತಿರೆ ಪ್ರೇಮಪಾಠ ಮರಬಳ್ಳಿ
ಸಲಿಗೆಯಲಿ ಸರಸವಾಡಿ ಅಪ್ಪುತಲಿ

ಎಲ್ಲೆಡೆ ಹಚ್ಚುಹಸಿರು ತುಂಬಿ ಧರೆ
ಹಳೆಯ ಬೇರಿಗೆ ಹೊಸ ಚಿಗುರು
ನವವಧುವಿನ ವದನದಿ ನಾಚಿಕೆತೆರೆ
ಬಯಸಿದೆ ಎಳೆಮಾವಿನ ಒಗರು.

ಕಾಲಕೆ ಕೂಡಿ ಬಂದಿದೆ ಮಧುಮಾಸ
ನವಜೋಡಿ ಮುಖದಲಿ ಮಂದಹಾಸ
ಮುದದಿ ಸೆಳೆಯಲು ಪ್ರೇಮ ಪಾಶ
ಮದುವೆ ಸವಿಗನಸಿಗೆ ಮನಕೆ ತೋಷ

✍🏻ಸ್ನೇಹದ ಸಂಕೋಲೆ ಪುಷ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!