ಕನ್ನಡದ ಶಾಲು ಹಾಕಿ ಮೈಸೂರು ಪೇಟ ತೊಡಿಸಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿದ ಕನ್ನಡಿಗರು.
ಗೋವಾ: ಗೋವಾದ ಬಿಚ್ಚುಲಿಯಂನಲ್ಲಿ 16ನೇ ಬಾರಿಗೆ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನು
ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಮತ್ತು ಕರ್ಮಭೂಮಿ ಕನ್ನಡ ಸಂಘ ಬಿಚ್ಚುಲಿಯಂ ಜಂಟಿಯಾಗಿ ಆಯೋಜಿಸಲಾಗಿತ್ತು.
ಅದ್ದೂರಿ ಮೆರವಣಿಗೆಗೆ ಶ್ರೀ ಪ್ರಮೋದ್ ಸಾವಂತ್ ಅವರು ಚಾಲನೆ ನೀಡಿದರು.
751 ಮಹಿಳೆಯರು ಪೂರ್ಣ ಕುಂಭ ಹೊತ್ತು ಗೋವಾದ ಮಹಿಳೆಯರು ಸಮ್ಮೇಳನಾಧ್ಯಕ್ಷ
ಶ್ರೀ ಸಂಗನಬಸಪ್ಪ ಬಿರಾದಾರ ಅವರನ್ನು ತೆರೆದ ಸಾರೋಟದಲ್ಲಿ ವೀರಗಾಸೆ ಡೊಳ್ಳು ಕುಣಿತ ಸಮಾಳ ಹಾಗೂ ಇತರೆ ಕಲಾತಂಡಗಳ ಅದ್ದೂರಿ ಮೆರವಣಿಗೆ ಮೂಲಕ ಸಭಾಂಗಣಕ್ಕೆ ತರಲಾಯಿತು. ಸಮ್ಮೇಳನಾಧ್ಯಕ್ಷ
ಶ್ರೀ ಸಂಗನಬಸಪ್ಪ ಬಿರಾದಾರವರು ಗೋವಾದ ಮುಖ್ಯಮಂತ್ರಿಗಳಿಗೆ ಕನ್ನಡದ ಶಾಲು ಹಾಕುವ ಮೂಲಕ ಅವರನ್ನ ಸ್ವಾಗತಿಸಿದರು.
ಸಂಚಾಲಕರಾದ ಮಹೇಶ್ ಬಾಬು ಸುರ್ವೆಯವರು ಗೋವಾದ ಮುಖ್ಯಮಂತ್ರಿಗಳಾದ ಶ್ರೀ ಪ್ರಮೋದ್ ಸಾವಂತ್ ಅವರನ್ನ ಮೈಸೂರು ಪೇಟ ತೊಡಿಸಿ ಹಾರ ನೆನಪಿನ ಕಾಣಿಕೆ ಫಲ ಪುಷ್ಪ ತಾಂಬೂಲಗಳೊಂದಿಗೆ ನೆರೆದಿದ್ದ ಸಹಸ್ರಾರು ಕನ್ನಡಿಗರ, ಪ್ರೇಕ್ಷಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹುಕ್ಕೇರಿಯ ಶ್ರೀ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ ,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷ ಸೋಮಣ್ಣ ಬೇವಿನಮರ ,
ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ಹಾಪ್ ಕಾಮ್ಸ್ ಅಧ್ಯಕ್ಷ ಮಹಾದೇವಪ್ಪ ಕಟ್ಟಗಿ , ಗೋವಾದ ಬಿಚ್ಚುಲಿಯಂನ ಮಾಜಿ ನಗರಸಭಾ ಸದಸ್ಯ ಭಗವಾನ್ ಹಲಮನಕರ್ , ಕರ್ಮ ಭೂಮಿ ಕನ್ನಡ ಸಂಘದ ಅಧ್ಯಕ್ಷ ಶ್ರೀ ಹನುಮಂತರೆಡ್ಡಿ ಶಿರೂರು , ಕರ್ನಾಟಕ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ ಎಲ್ ಕುಂದರಗಿ ,
ಉಪಾಧ್ಯಕ್ಷ ರವೀಂದ್ರ ತೋಟಗೇರ್, ಕಾರ್ಯದರ್ಶಿ ಜೀ ನಂದೀಶ್ ಬೆಂಗಳೂರು ,ಸಹ ಕಾರ್ಯದರ್ಶಿ ಪ್ರಕಾಶ್ ಅಳ್ಳೂಳ್ಳಿ ಬೆಳಗಾವ್ , ಮದ್ದು ಕರ್ಮ ಭೂಮಿ ಕನ್ನಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ

















