ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯುಗಾದಿ

ಆಗಸದಲ್ಲಿ ಮೂಡುತಿದೆ ರವಿಯ ಹೊಂಗಿರಣ
ಮುಂಭಾಗಿಲಲ್ಲಿ ಕಂಗೊಳಿಸುತ್ತಿದೆ ತಳಿರು ತೋರಣ
ಎಲ್ಲರ ಮನೆಯಲ್ಲೂ ಸಂತಸದ ವಾತಾವರಣ
ನಮಗಿಂದು ಹೊಸ ವರುಷದ ಉಲ್ಲಾಸದ ಕ್ಷಣ

ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಬಾಳಿನ ತಮವ ಕಳೆದು ನವ ಚೈತನ್ಯವ ತರುತಿದೆ
ಬೇವು ಬೆಲ್ಲವ ಮೆಲ್ಲುತ ಸಮಾನತೆಯ ಸಾರುತಿದೆ
ಋತುಚಕ್ರದ ನಿಯಮಕ್ಕೆ ಸಿದ್ದನಾಗು ಎನ್ನುತಿದೆ

ಮರಗಿಡಗಳಲಿ ಚೈತ್ರಮಾಸದಿ ಹೊಸಚಿಗುರು ಮೂಡುತಿದೆ
ಇಂಪಾದ ರಾಗದಲಿ ಕೋಗಿಲೆಗಳು ಹಾಡುತಿವೆ
ಹೊಸ ವಸ್ತ್ರವ ಧರಿಸಿ ಮುಗ್ದ ಮಕ್ಕಳು ನಲಿದಾಡುತಿವೆ
ಮೃಷ್ಟಾನ್ನವ ಸವಿಯುತ ಮನೆಮಂದಿಯೆಲ್ಲ ನಗುವ ಸೂಸುತಿವೆ

ಹಿಂದುಗಳಲಿ ಹೊಸದಿಗಂತದ ಆರಂಭ
ಬದುಕಿನಲಿ ಕಷ್ಟ ಸುಖಗಳ ಸಿಹಿಕಹಿಯ ಪ್ರಾರಂಭ
ದ್ವೇಷ ಕೇಡು-ಕಿಚ್ಚು ಮದ-ಮತ್ಸರವ ಮರೆತು ಬಾಳೋಣ
ನಮ್ಮೊಳಗಿನ ಅಜ್ಞಾನವೆಂಬ ಅಂಧಕಾರವ ಕಳೆಯೋಣ

ಜೀವನದಿ ಕಷ್ಟಗಳು ಕರಗಿ ಸುಖ ನೆಮ್ಮದಿ ಪ್ರಾಪ್ತಿಯಾಗಲಿ
ಹೆಜ್ಜೆಯಿಡಿ ಧೈರ್ಯದಿ ಸಾಧನೆಯ ಪಥದಲಿ
ಹೆದರದೆ ಮುಂದೆ ಸಾಗಿ ಕಲ್ಲುಮುಳ್ಳಿನ ಹಾದಿಯಲಿ
ಬೇವು ಬೆಲ್ಲದಂತೆ ಸಮನಾಗಿರಲಿ ನೋವುನಲಿವು ಎಲ್ಲರ ಬಾಳಲಿ.

✍️ಪ್ರಿತುನ್ ಪೂವಣ್ಣ, (ವಿರಾಜಪೇಟೆ), ಜಿ. ಕೊಡಗು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!