ಯುಗಾದಿ
ಬಂದಿದೆ ಬಂದಿದೆ ಹೊಸಯುಗಾದಿ
ತಂದಿದೆ ತಂದಿದೆ ಹೊಸ ಚೈತನ್ಯದ ಹಾದಿ
ಶಿಶಿರವನ್ನು ದೂರ ಮಾಡುತ್ತಾ
ವಸಂತವನ್ನು ಸಿಂಪಡಿಸುತ್ತಾ
ಜೀವನದಲ್ಲಿ ಕಷ್ಟ ಸುಖಗಳು ಸಹಜ
ಬೇವು ಬೆಲ್ಲದಂತೆ ಸಮವಾಗಿ ಸ್ವೀಕರಿಸು ಮನುಜ
ಬಾಗಲಿಗೆ ಕಟ್ಟೋಣ ತಳಿರು ತೋರಣವು
ಎಲ್ಲರ ಬಾಳಲಿ ತರುವುದು ಸಂಭ್ರಮವು
ದಕ್ಷಿಣದಿಂದ ಉತ್ತರ ಪಥಕ್ಕೆ ಸೂರ್ಯನ ಪಯಣವು
ಅಜ್ಞಾನ ಓಡಿಸಿ ಜ್ಞಾನ ಬೆಳಗಿಸುವ ಸಂಕೇತವು
ಹೊಸ ವರ್ಷ ಹೊಸ ಜೀವನಕ್ಕೆ ನಾಂದಿಯಾಗಲಿ
ಎಲ್ಲರ ಬಾಳನು ಬೆಳಗಿಸುವ ನಂದಾದೀಪವಾಗಲಿ!!
- ಪುಷ್ಪ ಆದಿನಾರಾಯಣ ,
ಮಧುಗಿರಿ.

















