ಸುಕ್ಷೇತ್ರ ಮರಿ ಕಲ್ಯಾಣದ ಹೆಸರುವಾಸಿಯಾದ ಕಲ್ಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಜೇರಟಗಿ ಗ್ರಾಮದ ಅಗಸಿ ಬಾಗಿಲು ಹಾಗೂ (ಕಮಾನು )ದ್ವಾರಬಾಗಿಲು ಕುಂಭ ಕಳಸಗಳ ಮೆರವಣಿಗೆಯೊಂದಿಗೆ ಹಾಗೂ ರುದ್ರಾಭಿಷೇಕ ಮಹಾಪೂಜೆಯೊಂದಿಗೆ ಸಮಸ್ತ ಜೇರಟಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟನೆಯಾಗುತ್ತಿದ್ದು ಕಾರ್ಯಕ್ರಮಕ್ಕೆ ಹರ ಗುರು ಚರಮೂರ್ತಿಗಳು ಹಾಗೂ ರಾಜಕಾರಣಿಗಳು ಮತ್ತು ದೂರದ ಊರುಗಳಿಂದ ಜೇರಟಗಿ ಗ್ರಾಮದ ಆರಾಧ್ಯದೈವ ಶ್ರೀ ಗುರು ರೇವಣಸಿದ್ದೇಶ್ವರ ಹಾಗೂ ಚೆನ್ನಬಸವೇಶ್ವರರ ಭಕ್ತಾದಿಗಳು ಆಗಮಿಸಲಿದ್ದು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯುತ್ತದೆ ಇಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮದ ಸಮಸ್ತ ಗ್ರಾಮಸ್ಥರು ಆಗಮಿಸಬೇಕೆಂದು ಗ್ರಾಮದ ಅಗಸಿ ನಿರ್ಮಾಣ ಮಾಡಿರುವಂತಹ ನಿಷ್ಟಿ ದೇಶಮುಖ್ ಅವರ ಪರಿವಾರದಿಂದ ಹಾಗೂ (ಕಮಾನು) ದ್ವಾರಬಾಗಿಲು ನಿರ್ಮಾಣ ಮಾಡಿರುವಂತಹ ಜೇರಟಗಿ ಗ್ರಾಮದ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ಹಾಗೂ ಸಮಸ್ತ ಪದಾಧಿಕಾರಿಗಳು ಆಗಮಿಸುವಂತೆ ಸ್ವಾಗತ ಕೋರಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.