ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ನುಲಿಯ ಚಂದಯ್ಯನವರ ಬದುಕು ನಮ್ಮೆಲ್ಲರಿಗೂ ಆದರ್ಶನೀಯವಾಗಿದೆ:ಶಾಸಕ ಎಂ.ಆರ್.ಮಂಜುನಾಥ್

ಹನೂರು: ಕಾಯಕ ತತ್ವದಲ್ಲಿ ನಂಬಿಕೆ ಇಟ್ಟು ಆದರ್ಶ ಬದುಕು ಬದುಕಿದ ಬಸವಾದಿ ಶರಣರ ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನ ಹೊಂದಿದ ನುಲಿಯ ಚೆನ್ನಯ್ಯನವರ ಬದುಕು ನಮ್ಮೆಲ್ಲರಿಗೂ ಆದರ್ಶನೀಯವಾಗಿದೆ ಎಂದು ನೂಲಿನ ಚೆನ್ನಯ್ಯ ಅವರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಾಮರಾಜನಗರ ಇವರ ಸಂಯುಕ್ತಾಶ್ರಯದಲ್ಲಿ ಹನೂರು ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಶಿವಶರಣ ನೂಲೆಯ ಚೆನ್ನಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದುಕು ಮತ್ತು ಭೂಮಿಯ ಬಗ್ಗೆ ಬಹಳ ತುಂಬಾ ಕಾಳಜಿ ಉಳ್ಳ ವ್ಯಕ್ತಿ ನುಲಿಯ ಚಂದಯ್ಯ ನವರು ಆಗಿನ ಅನುಭವ ಮಂಟಪ ಅನ್ನೋ ಸಂಸತ್ನಲ್ಲಿ ಮಂತ್ರಿ ಆಗಿದ್ದ ಮಹಾನ್ ವ್ಯಕ್ತಿಯಾಗಿದ್ದರು ನುಲಿಯ ಚಂದಯ್ಯರವರು 12 ನೇ ಶತಮಾನದ ಆಡಳಿತ ನಮಗೆಲ್ಲ ಸ್ಫೂರ್ತಿ ಆಗಬೇಕು ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಬರೆಯಲಿಲ್ಲ ಅಂದಿದ್ರೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕುತ್ತಿರಲಿಲ್ಲ ಆದ್ದರಿಂದ ಈ ಮಹಾನ್ ಪುರುಷರು ನಮಗೆ ಸ್ಫೂರ್ತಿಯಾಗಿದ್ದಾರೆ ಹನೂರು ಕ್ಷೆತ್ರದಲ್ಲಿ ಶೈಕ್ಷಣಿಕವಾಗಿ ಹಾಗು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯದ ಜನರನ್ನು ಮೆಲ್ಲೆತ್ತಲು ನಾನು ಅವಿರತ ಶ್ರಮಿಸಲು ಸಿದ್ಧನಾಗಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರ ತುಂಬಾ ಮುಖ್ಯವಾಗಿದೆ. ಈ ವೇದಿಕೆಯಲ್ಲಿ ನೀವು ನೀಡಿದ ಬೇಡಿಕೆಯನ್ನು ಸಾಧ್ಯವಾದಷ್ಟು ಇದೇರಿಸುತ್ತೇನೆ ಎಂದು ಭರವಸೆ ನೀಡಿದರು. ಕ್ಷೆತ್ರದ ಅಭಿವೃದ್ಧಿಯನ್ನು ನಾನು ಚಾಲೆಂಜ್ ಆಗಿ ಸ್ವೀಕರಿಸುತ್ತಿದ್ದೇನೆ. ನಿಮ್ಮೆಲ್ಲರ ಜೊತೆ ಕಷ್ಟ ಸುಖಗಳಿಗೆ ಬಾಗಿಯಾಗಿ ಕೆಲಸ ಮಾಡುತ್ತೇನೆ ಎಂದರು.

ಕಿರಣ್ ಕುಮಾರ್ ಕೊಟ್ಟಿಗೆರೆ ರವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಶಿವಶರಣ ನುಲಿಯ ಚಂದಯ್ಯ ಜೀವನ ಮತ್ತು ಕಾಯಕ ತತ್ವದ ಬಗ್ಗೆ ವಿವರವಾಗಿ ತಿಳಿಸಿದರು
ಜಿಲ್ಲಾ ಕುಳುವ ಸಂಘದ ಅಧ್ಯಕ್ಷರಾದ ಎನ್ ಮಾದೇಶ್ ರವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಂತಹ ಸಂವಿಧಾನದ ಅಡಿಯಲ್ಲಿ ನಮಗೆ ನ್ಯಾಯ ಸಿಕ್ಕಿದೆ ಪ್ರತಿಯೊಬ್ಬ ತಂದೆ ತಾಯಿಂದರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಾಜದ ಮುಖ್ಯ ವಾಹಿನಿಗೆ ಬರಲಿಕ್ಕೆ ಶ್ರಮವಹಿಸಬೇಕು ನಾವೆಲ್ಲ ಮುಂದೆ ಬರಬೇಕಾದರೆ ಸಂಘಟನೆ ಶಿಸ್ತು ಹೋರಾಟದ ಮುಖಾಂತರ ಸರ್ಕಾರದ ಸೌಲತ್ತು ಪಡೆಯಲಿಕ್ಕೆ ಸಾಧ್ಯವಾಗುತ್ತದೆ ಜಿಲ್ಲಾ ಆಡಳಿತ ನಮ್ಮ ನೂಲಿ ಚೆನ್ನಯ್ಯನವರ ಪ್ರತಿಯೊಂದು ಶಾಲಾ ಕಾಲೇಜು ಕಚೇರಿಗಳಲ್ಲಿ ಅವರ ಭಾವಚಿತ್ರವನ್ನು ಹಾಕಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯ ರಸ್ತೆಯ ಮೂಲಕ ವಾದ್ಯ ಮೇಳಗಳ ಜೊತೆ ನುಲಿಯ ಚಂದಯ್ಶ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಆಚರಣೆಯ ನಡೆಯಿತು ಕುಳುವ ಸಮುದಾಯದ ಹೆಣ್ಣು ಮಕ್ಕಳಿಂದ ಕುಂಭಮೇಳಗಳನ್ನು ಒತ್ತು ಕಾರ್ಯಕ್ರಮಕ್ಕೆ ಬಂದರು ಪಟ್ಟಣದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಲಿಗೆ ಮಾಲಾರ್ಪಣೆ ಮಂಜುನಾಥ್ ಹಾಗೂ ಕುಳುವ ಸಂಘದ ಮುಖಂಡರುಗಳು ಮಾಲಾರ್ಪಣೆ ಮಾಡಿದರು .

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಆನಂದ್ ಮಹೇಶ್ ನಾಯ್ಕ, ಸಂಪತ್ ಕುಮಾರ್, ಮಮ್ತಾಜ್ ಬೇಗಂ, ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಚಂದ್ರಣ್ಣ, ಹನೂರು ತಹಸಿಲ್ದಾರ್ ಗುರುಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಕರ್ನಾಟಕ ರಾಜ್ಯ ಕುಳುವ ಸಂಘದ ಜಿಲ್ಲಾಧ್ಯಕ್ಷ ಮಾದೇಶ್, ಜಿಲ್ಲೆ ಕುಳುವ ಸಂಘದ ಅಧ್ಯಕ್ಷ ಏನ್ ಮಾದೇಶ್ ಜಿಲ್ಲಾ ಕಾರ್ಯ ಅಧ್ಯಕ್ಷರಾದ ಶ್ರೀನಿವಾಸ್. ಕುಳುವ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ಬಂಜೇಜಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್. ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಏಕಲವ್ಯ. ಹಾಗೂ ಜಿಲ್ಲೆಯ ವಿವಿಧ ಗ್ರಾಮದ ಕುಳುವ ಸಂಘದ ಜನ ಪ್ರತಿನಿಧಿಗಳು ಹಾಗೂ ಸದಸ್ಯರುಗಳು ಗ್ರಾಮದ ಮುಖಂಡರುಗಳು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ