ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಸವ ಕೇಂದ್ರದ ವತಿಯಿಂದ ವಚನಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಕಲಬುರ್ಗಿ: ಜೇವರ್ಗಿ ಪಟ್ಟಣದ ಶ್ರೀ ಸಾಯಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಮನಸುಗಳ ಕಡೆಗೆ ನಮ್ಮ ನಡೆ ಎಂಬ ಧ್ಯೇಯ ವಾಕ್ಯದೊಂದಿಗೆ ತಾಲೂಕ ಬಸವ ಕೇಂದ್ರ ವತಿಯಿಂದ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಸಹಾಯಕ ಪ್ರಾಧ್ಯಾಪಕರಾದ ಡಾಕ್ಟರ್ ಗಣಪತಿ ಸಿನ್ನೂರ್ ಮಾತನಾಡಿ, ವಚನಗಳಲ್ಲಿ ಜೀವನವಿದ್ದು ಇವುಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ, ಯುವಕರು ಈ ದೇಶದ ಶಕ್ತಿಯಾಗಿದ್ದು ಶಿಕ್ಷಣದಿಂದ ವ್ಯಕ್ತಿತ್ವದ ಅಭಿವೃದ್ಧಿ ಯಾಗುತ್ತದೆ, ಒಬ್ಬ ವ್ಯಕ್ತಿಯನ್ನು ಯೋಗ್ಯ ವ್ಯಕ್ತಿ ಮಾಡುವುದಕ್ಕಿಂತ, ಒಳ್ಳೆಯ ವ್ಯಕ್ತಿ ಮಾಡುವ ಅವಶ್ಯಕತೆ ಇದೆ, ಮಾನವನ ಬಡತನವನ್ನು ನಿವಾರಿಸಲು ಇರುವುದು ಒಂದೇ ದಾರಿ ಅಂದರೆ ಅದು ಶಿಕ್ಷಣದಿಂದ ಮಾತ್ರ ನಮ್ಮ ದೇಹದಲ್ಲಿ ಮೂರು ರೀತಿಯಲ್ಲಿ ಆರೋಗ್ಯದ ಪರಿಸ್ಥಿತಿ ಚೆನ್ನಾಗಿರಬೇಕು.
ಅವು ಯಾವುವೆಂದರೆ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮದ ಆರೋಗ್ಯ ಈ ಮೂರು ಬಹುಮುಖ್ಯವಾಗಿ ನಮ್ಮಲ್ಲಿ ಒಳ್ಳೆ ಸ್ಥಿತಿಯಿಂದ ಕೂಡಿರಬೇಕು ಎಂದರು ಮುಂದುವರೆದು ಮಾತನಾಡಿದವರು ಜೀವನದಲ್ಲಿ ಶೂನ್ಯ ಸಂಪಾದನೆ ಎಂದರೆ ಮನಸ್ಸಿನ ಕೆಟ್ಟ ಭಾವನೆಯನ್ನು ಹಂತ ಹಂತವಾಗಿ ಅಳೆದು ಶೂನ್ಯ ಭಾವದ ಕಡೆಗೆ ಓಲುಮೆ ತೋರುವುದಾಗಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಹಾಂತೇಶ್ ಸಾಹು ಹರವಾಳ, ಶ್ರೀ ಸಾಯಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿಗಳಾದ ಶಿವರಾಜ್ ಗುತ್ತೇದಾರ್, ಸೊನ್ನ ಬಿ ಈಡ್ ಕಾಲೇಜಿನ ಪ್ರಾಂಶುಪಾಲರಾದ ಸದಾನಂದ ಪಾಟೀಲ್, ಬಸವ ಕೇಂದ್ರ ತಾಲೂಕು ಘಟಕ ಅಧ್ಯಕ್ಷರಾದ ಶರಣಬಸವ ಕಲ್ಲಾ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅಮೀನಪ್ಪ ಹೊಸಮನಿ, ನಿಂಗಣ್ಣ ಹಳಿಮನಿ, ಮಲ್ಕಣಗೌಡ ಹೆಗ್ಗಿನಾಳ, ಕಂಟೆಪ್ಪ ಮಾಸ್ಟರ್ ಹರವಾಳ, ಈರಣ್ಣ ಭೂತಪುರ್, ಕಾಲೇಜಿನ ಉಪನ್ಯಾಸಕರುಗಳಾದ ಭೀಮಯ್ಯ ಗುತ್ತೇದಾರ್,
ಉಮೇಶ್ ಚಿಗರಳ್ಳಿ, ಬಸಯ್ಯಸ್ವಾಮಿ ಹಿರೇಮಠ, ವಿಶ್ವನಾಥ್ ಶಕಾಪುರ್, ಮಾಸುಮ್ ಅಲಿ, ತುಕಾರಾಂ ಸಾಗರ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ನಾಗಣ್ಣ ಜೈನಾಪುರ್ ನಿರೂಪಿಸಿದರು ಪವಿತ್ರ ರೆಡ್ಡಿ ವಂದಿಸಿದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ