ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ಹೆಸರುವಾಸಿಯಾದ ಅಪ್ಪು ವಿದ್ಯಾಧಾಮ ಶ್ರೀ ಮಣಿಕಂಠ ಬಳ್ಳಾರಿ(ರಿ.) ಈ ನಾಡು ಮೆಚ್ಚುವ ಕೆಲಸ ಮಾಡುತ್ತಿದೆ ಈ ಸಂಸ್ಥೆಯ ಮಾಲೀಕರಾದ ಡಾ.ಮಹಾಂತೇಶ್ ಚಲವಾದಿ ಶಿಕ್ಷಕರು ಅನಾಥ, ಏಕಪಾಲಕ,ವಿಕಲಚೇತನ,ಬಡ ಮಕ್ಕಳಿಗೆ ಉಚಿತ ಶಿಕ್ಷಣ ತರಬೇತಿ ನೀಡಿ ಇಂಥ ಬಡ ಮಕ್ಕಳ ಪ್ರತಿಭೆಯನ್ನು ರಾಜ್ಯ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುತ್ತಿದ್ದಾರೆ ಇವರ ಹತ್ತಿರ ಸುಮಾರು ನೂರು ಮಕ್ಕಳಿಗೆ ಉಚಿತ ಶಿಕ್ಷಣವನ್ನು ಮೂರು ವರ್ಷದಿಂದ ಕಲಿಸುತ್ತಿದ್ದಾರೆ ಅದರಲ್ಲೂ ವಿಶೇಷ ಪ್ರತಿಭೆ ಇರುವ ಎರಡು ಬಡ ಆಶಾ ಕಾರ್ಯಕರ್ತೆಯ ಮಕ್ಕಳು ಏಷ್ಯಾ ಖಂಡದಲ್ಲಿರುವ ಎಲ್ಲಾ ಓಲ್ಡ್ ರೆಕಾರ್ಡ್ ಬ್ರೇಕ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ ಅಮೆರಿಕ ಸಂಸ್ಥೆಯಿಂದ ಓಲ್ಡ್ ಟ್ಯಾಲೆಂಟ್ ಪ್ರಶಸ್ತಿ ಪಡೆದು ಇಂಟರ್ನ್ಯಾಷನಲ್ ಕ್ರಪೆಷರ್ನ್ ಅಂಡ್ ಹ್ಯೂಮನ್ ರೈಟ್ಸ್ ಕೌನ್ಸಿಲ್ ನಿಂದ ಗೌರವ ಡಾಕ್ಟರೇಟ್ ಪಡೆದ ಡಾ.ಶಿವರಾಜ್, ಡಾ.ಸಂಜನಾ ಎಂಬ ಅಣ್ಣ ತಂಗಿ ನಮ್ಮ ದೇಶಕ್ಕೆ ಕೀರ್ತಿ ತಂದಿರುವುದು ಸಂತಸದ ವಿಷಯ ಇಂಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿ ಈ ಮಕ್ಕಳ ಪ್ರತಿಭೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದ ಡಾ. ಮಹಾಂತೇಶ್ ಚಲವಾದಿ ಶಿಕ್ಷಕರ ಪರಿಶ್ರಮಕ್ಕೆ ನಮ್ಮ ಊರಿನ ಜನರು ಶುಭ ಕೋರುತ್ತಿದ್ದಾರೆ,ಇಷ್ಟೆಲ್ಲಾ ಸಾಧನೆ ಮಾಡಿರುವ ಮಕ್ಕಳಿಗೆ ನಮ್ಮ ಕರ್ನಾಟಕ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು,ಇಂತಹ ಎಷ್ಟು ಬಡ ಪ್ರತಿಭೆಗಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ,ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡಿದೆ ತಾಲೂಕಿನ ಎಂ.ಎಲ್.ಎ ಹಾಗೂ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ ಈ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿ ಗೌರವಿಸಬೇಕು, ಮಕ್ಕಳ ಸಾಧನೆಗೆ ಪ್ರಮುಖ ಪಾತ್ರವಹಿಸಿದ ಡಾ.ಮಾಂತೇಶ್ ಚಲವಾದಿ ಶಿಕ್ಷಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಬೇಕೆಂದು ಲಿಂಗಸುಗೂರು ತಾಲೂಕಿನ ಹಾಗೂ ನಮ್ಮ ನಾಡಿನ ಬಹಳಷ್ಟು ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.
ವರದಿ-ಬಸವರಾಜ್ ಬಡಿಗೇರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.