ಕಲಬುರಗಿ/ಜೇವರ್ಗಿ ಸುದ್ದಿ:ಶ್ರೀ ಬಸವ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಬಸವಶ್ರೀ ಪದವಿ ಮಹಾವಿದ್ಯಾಲಯ ಜೇವರ್ಗಿ ತಾಲೂಕಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಕುರಿತು
ಈ ಕಾರ್ಯಕ್ರಮದಲ್ಲಿ ಬಲ ಭೀಮ ಕೋರಿ ಮಾತನಾಡಿದರು ಸಪ್ಟೆಂಬರ್ 5 ಡಾ.ರಾಧಾಕೃಷ್ಣನ್ ಅವರ ಜನ್ಮದಿನದ ಪ್ರಯುಕ್ತವಾಗಿ ಭಾರತ ಸರ್ಕಾರದ ವತಿಯಿಂದ ಶಿಕ್ಷಕರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಡಾಕ್ಟರ್ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಅಷ್ಟೇ ಅನ್ನೋದು ನಮ್ಮ ದೇಶದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿ ಭಾರತ ರತ್ನ ಪ್ರಶಸ್ತಿ ಪಡೆದಿದ್ದಾರೆ ಅಷ್ಟೇ ಅಲ್ಲದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ ವಿಶ್ವದ ಸರ್ವಶ್ರೇಷ್ಠ ತತ್ವಜ್ಞಾನಿ ಡಾ.ರಾಧಾಕೃಷ್ಣನ ಅವರು ಅಂತರಾಷ್ಟ್ರೀಯ ಸೋವಿಯತ್ ಒಕ್ಕೂಟದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಆದ್ದರಿಂದ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವಂತ ವಿಷಯ ಶಿಕ್ಷಕರಾಗಿ ಒಬ್ಬ ಸಮತಾವಾದಿಯಾಗಿ ಎಲ್ಲರಿಗೂ ಸಮಾನತೆಯ ಶಿಕ್ಷಣ ಕೊಡುವ ಪ್ರತಿಯೊಬ್ಬರನ್ನು ಪ್ರಗತಿಯತ್ತ ಒಯ್ಯುವ ಸಾಮರ್ಥ್ಯ ರಾಧಾಕೃಷ್ಣನ್ ಅವರಿಗೆ ಇತ್ತು ಅವರ ಕೆಲಸದಲ್ಲಿ ಪ್ರಾಮಾಣಿಕತೆ ಇತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವಿತ್ತು ಆಧ್ಯಾತ್ಮಿಕ ವಿಚಾರದಲ್ಲಿ ಆಳವಿತ್ತು ಇವರ ತತ್ವ ಜ್ಞಾನಕ್ಕೆ ವಿಶ್ವ ಮಾನ್ಯತೆ ಇತ್ತು ಹಿರಿಯರಲ್ಲಿ ಗೌರವವಿತ್ತು ಕಿರಿಯರಲ್ಲಿ ಪ್ರೀತಿ ಇತ್ತು ಬಂಧುಗಳಲ್ಲಿ ವಾತ್ಸಲ್ಯವಿತ್ತು ಗೆಳೆತನದಲ್ಲಿ ವಿಶ್ವಾಸವಿತ್ತು ಕರ್ತವ್ಯದ ನಿಷ್ಠೆ ಇತ್ತು ರಾಜಕೀಯದಲ್ಲಿ ನಿಷ್ಠೆ ನಿಯಮವಿತ್ತು ಪ್ರತಿಯೊಂದು ವಿಷಯದಲ್ಲಿ ಅಪಾರವಾದ ಪಾಂಡಿತ್ಯವಿತ್ತು ಭಾಷಣದಲ್ಲಿ ಆಕರ್ಷಣೆಯಿತ್ತು ವಿವೇಚನೆಯಲ್ಲಿ ಬುದ್ಧಿ ಇತ್ತು ವಾದದಲ್ಲಿ ಅರ್ಥವಿತ್ತು ಆಡಳಿತದಲ್ಲಿ ನೀತಿ ಇತ್ತು ಮಾತಿನಲ್ಲಿ ಸತ್ಯವಿತ್ತು ವಿನಯ ವಿತ್ತು ಈ ಎಲ್ಲಾ ಗುಣಗಳು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೈಗೂಡಿಸಿಕೊಂಡಿದ್ದರು ಆದ್ದರಿಂದ ಪ್ರತಿಯೊಬ್ಬರೂ ನಮ್ಮ ದೇಶದ ಮಹಾನ್ ಮೇಧಾವಿ ತತ್ವಜ್ಞಾನಿ ಅಪಾರವಾದ ಪಾಂಡಿತ್ಯ ಹೊಂದಿರುವ ನಮ್ಮ ದೇಶದ ಉಪರಾಷ್ಟ್ರಪತಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಮಕ್ಕಳಿಗೆ ಕಿವಿ ಮಾತು ಹೇಳಿದರು ಈ ಸಂದರ್ಭದಲ್ಲಿ ಲಿಂಗರಾಜ ಕೋರಿ,ರಾಜಕುಮಾರ್,
ಅಯ್ಯಣ್ಣ ಶಿವಪುರ,
ಸಂಜಯಕುಮಾರ,ಬಸವರಾಜ್ ಪಾಟೀಲ್,
ವಿದ್ಯಾ ಹಿರೇಮಠ,ಕಾವೇರಿ
ಭೀಮಾಬಾಯಿ ಮಣ್ಣೂರ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.