ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿದ್ದು ಅದರ ಕಾಮಗಾರಿಯು ಸುಮಾರು ವರ್ಷಗಳಿಂದ ಕುಂಟುತ್ತ ಸಾಗುತ್ತಿದೆ ಇದಕ್ಕೆ ಕಾರಣ ಲಿಂಗಸುಗೂರು ಕ್ಷೇತ್ರದ ರಾಜಕಾರಣ,ಎಲ್ಲಾ ತಾಲೂಕಿನಲ್ಲಿ ಒಂದು ರಾಜಕಾರಣವಾದರೆ ಲಿಂಗಸುಗೂರು ತಾಲೂಕಿನಲ್ಲಿ ರಸ್ತೆ ರಾಜಕಾರಣ ಮಾಡಲು ಹೊರಟಿದೆ.ನೆನೆ ಗುದಿಗೆ ಬಿದ್ದ ರಸ್ತೆ ಕಾಮಗಾರಿವು ಇನ್ನೂ ಅರ್ಧಂಬರ್ಧ ನಡೆಯುತ್ತಿದೆ, ಇದಕ್ಕೆ ಇಂದಿನ ಅಧಿಕಾರಿಗಳು ರಾಜಕಾರಣಿಗಳು ಪ್ರಭಾವಿ ವ್ಯಕ್ತಿಗಳಿಂದ ಈ ರಸ್ತೆ ಕಾಮಗಾರಿಯು ತೀವ್ರ ಹಿನ್ನಡೆಯಾಗಿಸಾಗುತ್ತಿದೆ,ಲಿಂಗಸುಗೂರು ಪಟ್ಟಣದ ಪ್ರಮುಖ ರಸ್ತೆಯನ್ನು ಇಲ್ಲಿನ ವ್ಯಾಪಾರಿಗಳು ಕಟ್ಟಡ ಮಾಲೀಕರು ರಸ್ತೆ ಒತ್ತುವರಿ ಮಾಡಿಕೊಂಡು ಮಹಡಿಗಳ ಕಟ್ಟಡಗಳನ್ನು ನಿರ್ಮಿಸಿದ್ದಾರೆ,ಇದರಿಂದ ಸಾರ್ವಜನಿಕರಿಗೆ ವಾಹನ ಸಂಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ, ರಸ್ತೆ ಅಗಲೀಕರಣಕ್ಕೆ ವಿರೋಧ ಮಾಡುವರು,ಬಸ್ ನಿಲ್ದಾಣದ ಎದುರಿನ ಕಟ್ಟಡ ಮಾಲೀಕರಿಗೆ ತಮ್ಮ ವ್ಯಾಪಾರದ ಲಾಭ ಮಾತ್ರ ಬೇಕು ರಸ್ತೆ ಸಂಚಾರ ಸುಗಮವಾಗುವುದು ಬೇಕಿಲ್ಲ,ಕಾಮಗಾರಿ ಮೊದಲು ಅಂದಾಜು ಪತ್ರಿಕೆಯಲ್ಲಿ ನಮೂದಿಸಿರುವ ಅಳತೆ ರಸ್ತೆ ಮಧ್ಯದಿಂದ ಹಿಡಿದು 75 ಅಡಿಗಳವರೆಗೆ ಅಗಲಿಕರಣ ಮಾಡುವುದು,ಆದರೆ ನಮ್ಮ ಕಟ್ಟಡಗಳು ಉಳಿದಿಲ್ಲವೆಂದು ಮಾಲೀಕರವಾದ ಇದರಿಂದ ಲಿಂಗಸೂರು ಪುರಸಭೆಯಲ್ಲಿನ ಆಡಳಿತವು ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಠರಾವು ಪಾಸ್ ಮಾಡಿ 50 ಅಡಿ ಅಗಲಿಕರಣ ಮಾಡಲು ಒಪ್ಪಿಗೆ ಸೂಚಿಸಿತು ಅದರಂತೆ ಲಿಂಗಸುಗೂರಿನ ಲೋಕೋಪಯೋಗಿ ಇಲಾಖೆಯ ಇಂಜಿನಿಯರಗಳು,ತಾಲೂಕು ಆಡಳಿತ ಅಧಿಕಾರಿಗಳು ಕಾಮಗಾರಿಯನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ರಸ್ತೆ ಅಗಲೀಕರಣವು ಕೆ.ಇ.ಬಿ ನಂತರದ ಕಟ್ಟಡಗಳಾದ SKRL ಪ್ಯಾಲೇಸ್, ಕೃಷ್ಣ ಪಾರಡೇಸ್,ಅಭಿಲಾಷ ಕ್ಲಾತ್,ಅಮರೇಶ್ವರ ಆಗ್ರೋ,ಬಸವೇಶ್ವರ ಆಗ್ರೋ,ಬಸವೇಶ್ವರ ಕ್ಲಾತ್ ಸ್ಟೋರ್,ಆನಂದ್ ಲಾಡ್ಜ್,ಸ್ವದೇಶಿ ಬೇಕರಿ, ಮಲಬಾರ್ ಕಿರಾಣಿ ಸ್ಟೋರ್,ಆಮಂತ್ರಣ ಹೋಟೆಲ್,ಅಪೋಲೋ ಮೆಡಿಕಲ್, ಮಹಾಂತೇಶ್ ಕಿರಾಣಿ,ಪೊಲಬಾವಿ ಟೈಕ್ಸ್,ಅಮರ್ ಲಾಡ್ಜ್,ಕಿಸಾನ್ ಪುಟ್ ವೇರ್ ಇನ್ನಿತರ ಕಟ್ಟಡಗಳ ಮಾಲೀಕರು ತಾವು ಒತ್ತುವರಿ ಮಾಡಿಕೊಂಡ ಕಟ್ಟಡ ತೆರವುಗೊಳಿಸಲು ಬಿಗಿ ಹಿಡಿತ ಸಾಧಿಸಿದ್ದಾರೆ. ಕೇವಲ 43 ರಿಂದ 45 ಎಷ್ಟು ಮಾತ್ರ ರಸ್ತೆ ಅಗಲೀಕರಣ ನಡೆಯುತ್ತಿದೆ,ನೆಪಕ್ಕೆ ಮಾತ್ರ ಕೇವಲ ಒಂದೆರಡು ಮೆಟ್ಟಿಲುಗಳನ್ನು ಮಾತ್ರ ಡೆಮೋಲಿಶ್ ಮಾಡಿರುತ್ತಾರೆ ಆದರೆ ಮೇಲಿನ ಕಟ್ಟಡಗಳನ್ನು ತೆರವುಗೊಳಿಸಿರುವುದಿಲ್ಲ ಕೂಡಲೇ ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಯಾವುದೇ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗದೆ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ-ಬಸವರಾಜ್ ಬಡಿಗೇರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.