ಬೀದರ್:ಮನುಷ್ಯ ಬದಲಾವಣೆಯಾಗಬೇಕಾದರೆ ಶಿಕ್ಷಣವು ಅತಿ ಅವಶ್ಯಕ ಆ ಶಿಕ್ಷಣವನ್ನು ನಮಗೆ ನಿಸ್ವಾರ್ಥದ ಭಾವದಿಂದ ಧಾರೆಯರೆಯುವರು ಶಿಕ್ಷಕರು.ಶಿಕ್ಷಣ ನಿಂತ ನೀರಲ್ಲ ಅದು ಹರಿಯುವ ನೀರು ವಿದ್ಯಾರ್ಥಿಗಳ ಹಡಗೆಂಬ ಭವಿಷ್ಯದ ಜೀವನಕ್ಕೆ ನಾವಿಕರಾಗಿದ್ದಾರೆ ಶಿಕ್ಷಕರು,ಗುರು ದೇವೋಭವ ಎಂಬಂತೆ ಕಾಲೇಜಿನ ವಿದ್ಯಾರ್ಥಿಗಳು ಉತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಲ್ಲಾ ಉಪನ್ಯಾಸ ಬಳಗಕ್ಕಾಗಿ ಏರ್ಪಡಿಸಿ ಎಲ್ಲಾ ಶಿಕ್ಷಕರಿಗೆ ಗುರುವಂದನೆಯನ್ನು ಮಾಡಿದರು ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಎಲಿಜಬೆತ್ ಸ್ವರೂಪರಾಣಿ ಮಾತನಾಡಿ ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾದದ್ದು ಅವನು ವಿದ್ಯಾರ್ಥಿಗಳ ಜೀವನದ ಜೊತೆ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುವವರು ಆಗಿದ್ದಾರೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಲ್ಲದೆ ಮುಂದಿನ ಭವಿಷ್ಯ ಜೀವನದಲ್ಲಿ ಕೂಡಾ
ಗುರುಗಳಿಗೆ ಚಿರಋಣಿಗಳಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕ ಬಳಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಮಹಾನ್ ಕೋಟೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.