ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಬದುಕಿನುದ್ದಕ್ಕೂ ಚಿತ್ರ ಕಲೆಯನ್ನೇ ಆಯ್ಕೆ ಮಾಡಿಕೊಂಡ: ಸಂಗಣ್ಣ ಮಲಗೊಂಡ

ಯಾದಗಿರಿ: ಶಹಾಪುರ ತಾಲೂಕಿನ ದೋರನಳ್ಳಿ ಗ್ರಾಮದ ಸಂಗಣ್ಣ ಮಲಗೊಂಡ ಇವರ ಜನನ 4/3/1949 ತಂದೆ ನಿಂಗಪ್ಪ ಮಲಗೊಂಡ, ತಾಯಿ ಶ್ರೀಮತಿ ಸೀತಮ್ಮ ಮಲಗೊಂಡ ಇವರ ಮಗನಾದ ಸಂಗಣ್ಣ ಮಲಗೊಂಡ ಅವರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ ಹಾಗೂ ಡಿಪ್ಲೋಮಾ ಇನ್ ಪೈನ್ ಆಟ್ಸ ವೃತ್ತಿ ಸರ್ಕಾರಿ ನೌಕರರು, ಆಕೃತಿ ರಚನಾಕಾರ, ನೀರಾವರಿ ಇಲಾಖೆ ಕೆ.ಬಿ.ಜೆ.ಎನ್.ಎಲ್ ಸೇವೆ ಸಲ್ಲಿಸುತ್ತಾ 2007 ರಲ್ಲಿ ನಿವೃತ್ತಿ ಹೊಂದುತ್ತಾರೆ.
ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಹೊಂದಿದ ಮೇಲೆಯು ಇವರ ಚಿತ್ರ ಕಲೆ ಮುಂದುವರೆಯುತ್ತದೆ.
ಜೀವನ ಆಯ್ಕೆ ಮಾಡಿ ಕೊಂಡ ಮಾನದಂಡಗಳು ರಚನೆ: ಶಿವಶರಣರ ಚಿತ್ರಗಳು ಬಿಡಿಸುವುದು.
ಜನೋಪಯೋಗಿ: ಸಮಾಜದಲ್ಲಿ ಭಕ್ತಿ ಭಾವನೆಗಳು ತುಂಬುವುದು.
ಭವಿಷ್ಯದ ಚಿಂತನೆ: ಆದರ್ಶ ಸಮಾಜದ ನಿರ್ಮಾಣ ಮಾಡುವುದು.
ಸೃಜನ್ ಶೀಲತೆ ಅನಾವರಣರ: ಚಿತ್ರ ಕಲೆಯಲ್ಲಿ ಹೊಸತನ್ನವನು ಹುಟ್ಟು ಹಾಕುವುದು.
ನಾವೀನ್ಯತೆ: ದಿನನಿತ್ಯ ಹೊಸ ಹುಡುಕಾಟದಲ್ಲಿ ತೊಡಗುವುದು.
ಇತರ ಕ್ಷೇತ್ರಗಳಲ್ಲಿ ಪರಿಣತಿ: ಪುಸ್ತಕ ಪ್ರಾಧಿಕಾರ – ಕಥೆ-ಕಾವ್ಯ, ಕಾದಂಬರಿ, ನಾಟಕ, ಅಲ್ಲದೆ ಹಿರಿಯ ಕಥೆಗಾರರು ಪುಸ್ತಕಗಳಿಗೂ ಚಿತ್ರಗಳನ್ನು ಇಳಿಸಿಕೊಟ್ಟು ಓದುಗರ ಗಮನ ಸೆಳೆದಿದ್ದಾರೆ. 250 ಕ್ಕೂ ಹೆಚ್ಚು ಪುಸ್ತಕಗಳಿಗೆ ಒಳಚಿತ್ರಗಳು ಹಾಗೂ ಮುಖಪುಟಕ್ಕೆ ಚಿತ್ರಗಳನ್ನು ಬರೆದುಕೊಟ್ಟಿದ್ದಾರೆ.
ಇವರಿಗೆ ಒಲಿದು ಬಂದ ಪ್ರಶಸ್ತಿಗಳು
1) ಕೊಂಡಗೂಳಿ ಶ್ರೀ ಪ್ರಶಸ್ತಿ 2006-07
2) ಮಹಾಂತ ಶ್ರೀ ಪ್ರಶಸ್ತಿ ತನ್ನ 2011
3) ಸಗರನಾಡು ಸಿರಿ ಪ್ರಶಸ್ತಿ 2011
4) ಜಿಲ್ಲಾ ರಾಜ್ಯೋಸ್ತವ ಪ್ರಶಸ್ತಿ 2011
5) ಚೈತನ್ಯ ಶ್ರೀ ಪ್ರಶಸ್ತಿ 24/3/2013
6) ಕಲ್ಯಾಣ ನಾಡು ಕಲಾರಾಧನ ಪ್ರಶಸ್ತಿ 20/11/2013
7) ಡಾ|| ಪಂ.ಪುಟ್ಟರಾಜ ಕೃಪಾಶ್ರೀ ಪ್ರಶಸ್ತಿ 8/6/2014
8) ಕರ್ನಾಟಕ ರತ್ನ ಪ್ರಶಸ್ತಿ 22/5/2016
9) ಬಸವರತ್ನ ಕಾಯಕ ಪ್ರಶಸ್ತಿ 2016
10) ಸರಸ್ವತಿ ಕಲಾ ಚೇತನ ಪ್ರಶಸ್ತಿ 25/9/2016
11) ವಿಜಯ ಮಹಾಂತೇಶ್ವರ ಪ್ರಶಸ್ತಿ 1979
12) ಸಗರ ಕಲಾಚಕ್ರವರ್ತಿ ಪ್ರಶಸ್ತಿ 26/11/2016
13) ಸಗರನಾಡು ನುಡಿ ಶ್ರೀ ಪ್ರಶಸ್ತಿ 11/12/2016
14) ಚೈತನ್ಯ ಶ್ರೀ ಕಲಾ ಪ್ರಶಸ್ತಿ 18/6/2017
15) ಜಿಲ್ಲಾ ಹಿರಿಯ ನಾಗರಿಕ ಪ್ರಶಸ್ತಿ 4/10/2017 ಶಾಂತಿ
16) ವಿಜಯಪುರದ ಬಸವರತ್ನ ಪ್ರಶಸ್ತಿ 2018
17) ಶ್ರೀ ಮಾಚಿದೇವ ಪ್ರಶಸ್ತಿ 2022 ಇವರಿಗೆ ಒಲಿದು ಬಂದ ಪ್ರಶಸ್ತಿಗಳು.
ಆದರೆ ಯಾದಗಿರಿ ಜಿಲ್ಲಾ ಆಡಳಿತ ಹಾಗೂ ರಾಜ್ಯ ಸರ್ಕಾರ ಇಂತಹ ಒಳ್ಳೆಯ ಚಿತ್ರ ಕಲಾಕಾರರನ್ನು ಗುರುತಿಸಿದೆ ಇರುವುದು ದುರದೃಷ್ಟಕರ ಸಂಗತಿ ಕೂಡಲೇ ಈ ಕಲೆಗಾರನಿಗೆ ರಾಜ್ಯ ಸರ್ಕಾರ ಇವರಿಗೆ ರಾಜ್ಯ ಪ್ರಶಸ್ತಿ ನೀಡ ಗೌರವಿಸಬೇಕು ದೋರನಳ್ಳಿ ಗ್ರಾಮಸ್ಥರು ಹೇಳುತ್ತಾರೆ.
ಸಂಗಣ್ಣ ಮಲಗೊಂಡ ಅವರ ಧರ್ಮ ಪತ್ನಿ ಭಾಗೀರಥಿ ಮಲಗೊಂಡ 500 ಕ್ಕೂ ಹೆಚ್ಚು ಕೌದಿ ಒಲಿದು ಉಚಿತವಾಗಿ ನೀಡಿದ ಮಹಾತಾಯಿ ಈಗಿನ ತಂತ್ರಜ್ಞಾನ ಯುಗದಲ್ಲಿ ಹೆಣ್ಣು ಮಕ್ಕಳು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಕಾಲದಲ್ಲಿ ಕೂಡಾ ಕೌದಿ ಒಲಿಯುವುದು ಕಾಯಕ ಎಂದು ತೋರಿಸಿ ಕೊಟ್ಟ ದೋರನಳ್ಳಿ ಗ್ರಾಮದ ಭಾಗೀರಥಿ ಮಲಗೊಂಡ ಅವರೇ ಸಾಕ್ಷಿ.
ಭಾಗೀರಥಿ ಮಲಗೊಂಡ ಬಾಲ್ಯದ ದಿನಗಳಲ್ಲಿ ಕೌದಿ ಒಲಿಯುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮನೆಯ ಕೆಲಸ ಮುಗಿದ ಕೂಡಲೇ ಸುಮ್ಮನೆ ಕೂಡದ ಮಹಾತಾಯಿ ಕೌದಿ ಒಲಿಯುವ ಕಲೆಯಲ್ಲೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಕೌದಿಯ ವಿಶೇಷತೆ: ಭಾಗೀರಥಿ ಮಲಗೊಂಡ ಇವರು ಕೌದಿಯಲ್ಲಿ ರಾಮಾಯಣ ಮಹಾಭಾರತ, ರಾಮನ ತೊಟ್ಟಿಲು, ಸೀತೆಯ ಚಿತ್ರ, ಲವಕುಶ ಚಿತ್ರ, ಪಗಡೆಯಾಟ, ಹಾಗೂ ಕೃಷಿಗೆ ಸಂಬಂಧಿಸಿದ ಚಿತ್ರಗಳು ಕೂಡ ಮೂಡಿಬಂದಿವೆ.
ನಿಸರ್ಗ ಸೌಂದರ್ಯ ಚಿತ್ರಗಳು ಕೊಳಲು, ಬಾಸಿಂಗ, ದಂಡಿ, ಸೂರ್ಯ, ಚಂದ್ರ, ನಕ್ಷತ್ರ, ನವಿಲು, ಗಿಳಿ, ಆನೆ, ಗಿಡ ಬಳ್ಳಿ, ಬಾಳೆಗೊನೆ, ಗುಬ್ಬಿ , ಹಕ್ಕಿ,
ಇನ್ನು ಅನೇಕ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ಕೌದಿಯಲ್ಲಿ ಬಿಡಿಸಿದ್ದಾರೆ.
ಜೀವನ ಉದ್ದಕ್ಕೂ ಭಾಗೀರಥಿ ಮಲಗೊಂಡ ಇವರು ಕೌದಿ ಒಲಿಯುವ ಕಲೆಯಲ್ಲೆ ಗುರುತಿಸಿ ಕೊಂಡಿರುವ ಇವರು ಸುಮಾರು 500 ಕ್ಕೂ ಹೆಚ್ಚು ಕೌದಿಗಳನ್ನು ಸಿದ್ದಪಡಿಸಿ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಮತ್ತು ಹೊಸದಾಗಿ ಮದುವೆಯಾಗಿ ಜೋಡಿಗಳಿಗೆ ಉಚಿತ ಕೌದಿ ನೀಡಿದ್ದಾರೆ. ಮತ್ತು ತವರುಮನೆ ಬಾಣಂತನಕ್ಕೆ ಬಂದ ಹೆಣ್ಣು ಮಕ್ಕಳಿಗೆ ಕೌದಿ, ಕುಲಾಯಿ, ನೀಡುವ ಈ ಮಹಾತಾಯಿ ದೋರನಳ್ಳಿ ಗ್ರಾಮದಲ್ಲಿ ತಮ್ಮದೇ ಆದ ಕೌದಿ ಒಲಿಯುವ ಕಲೆ ಬಳಸಿಕೊಂಡು ಬಂದಿರುವ ಇವರಿಗೆ ಜಿಲ್ಲಾ ಆಡಳಿತ ಹಾಗೂ ರಾಜ್ಯ ಸರ್ಕಾರ ಇಂತಹ ಹಳ್ಳಿ ಪ್ರತಿಭೆಗೆ ಗುರುತಿಸುವಂತೆ ಆಗಬೇಕು ಎಂದು ಸುತ್ತ ಮುತ್ತಲಿನ ಹೆಣ್ಣು ಮಕ್ಕಳ ಆಗ್ರಹವಾಗಿದೆ.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ