ಸಿಂಧನೂರಿನ ಪಾರ್ವತಿ ನಗರದ 29ನೇವಾರ್ಡನ ಉದ್ಯಾನವನ್ನು ಹಸಿರೀಕರಣಗೊಳಿಸಲು ವನಸಿರಿ ಫೌಂಡೇಶನ್ ವತಿಯಿಂದ ಸಸಿ ನಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ನಗರದ ಉದ್ಯಾನವನದಲ್ಲಿ ಪಂಚವಾಟಿ ಸಸಿಗಳನ್ನು ನೆಟ್ಟು ವಿಶೇಷ ಪೂಜೆ ಸಲ್ಲಿಸುವ ಮೂಲಕ 100ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪಂಚವಟಿ ಸಸಿಗಳನ್ನು ನೆಟ್ಟು ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೀನುಗಾರಿಕೆಯ ಅಧಿಕಾರಿ ಶಿವಪ್ಪ ಗದ್ದಿ ಮಾತನಾಡಿ ಪಾರ್ವತಿ ನಗರದ ಉದ್ಯಾನವನ್ನು ಬದಲಾವಣೆ ಮಾಡುವ ಮೂಲಕ ಹಸಿರೀಕರಣಗೊಳಿಸಬೇಕೆಂದು ವನಸಿರಿ ಫೌಂಡೇಶನ್ ನೇತೃತ್ವದಲ್ಲಿ ಹಾಗೂ ನಗರ ನಿವಾಸಿಗಳೊಂದಿಗೆ 100ಸಸಿಗಳನ್ನು ನೆಡುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ.ಇಲ್ಲಿನ ಉದ್ಯಾನವನ್ನು ಹಸಿರೀಕರಣ ಮಾಡುವುದರಿಂದ ದಿನನಿತ್ಯ ವಾಯುವಿಹಾರ ಮಾಡಲು ಸಹಾಯವಾಗುತ್ತದೆ,ಶುದ್ದಗಾಳಿ ಪಡೆಯಲು ಸಹಕಾರಿಯಾಗಿದೆ.ವನಸಿರಿ ಫೌಂಡೇಶನ್ ತಂಡದ ಇಂತಹ ಕಾರ್ಯಗಳಲ್ಲಿ ದಿನನಿತ್ಯ ತೊಡಗಿರುವುದು ತುಂಬಾ ಶ್ಲಾಘನೀಯ,ಪ್ರತಿಯೊಬ್ಬರೂ ತಮ್ಮ ತಮ್ಮ ಹತ್ತಿರದ ಉದ್ಯಾನವನದಲ್ಲಿ ಸಸಿಗಳನ್ನು ಬೆಳೆಸಿ ಸ್ವಚ್ಛಗೊಳಿಸಿ ಸುಂದರವಾಗಿ ಕಾಣುವಂತೆ ಮಾಡಬೇಕು ವನಸಿರಿ ತಂಡ ಶಾಲಾ ಕಾಲೇಜು,ದೇವಸ್ಥಾನ,ಸ್ಮಶಾನಗಳಲ್ಲಿ ಸಸಿಗಳನ್ನು ನೆಡುತ್ತಿರುವುದಲ್ಲದೆ ಇಂದು ಉದ್ಯಾನವನ್ನು ಉಳಿಸುವ ನಿಟ್ಟಿನಲ್ಲಿ ಸಸಿಗಳನ್ನು ನೆಡುತ್ತಿರುವು ತುಂಬಾ ಶ್ಲಾಘನೀಯ ಇವರ ಪರಿಸರ ಸೇವೆ ಅಗಾಧವಾದದ್ದು ನಾವುಗಳೆಲ್ಲರೂ ಇವರ ಜೊತೆಗೆ ಕೈಜೋಡಿಸಿದರೆ ಪ್ರತಿಯೊಂದು ಉದ್ಯಾನವನ್ನು ಹಸಿರೀಕರಣ ಮಾಡುವುದರಲ್ಲಿ ಸಂಶಯವಿಲ್ಲ ಪ್ರತಿಯೊಬ್ಬರೂ ಉದ್ಯಾನವನಗಳನ್ನು ಉಳಿಸಿ ಬೆಳಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ,ನಿವಾಸಿಗಳಾದ ಬಸನಗೌಡ ನಾಡಂಗಿ,ಪಂಪಾಪತಿ ಯಾದವ್,ಹುಸೇನಮ್ಮ ಬಳ್ಳಾರಿ,ಜಗದೀಶ ಅಚ್ಚಲಕರ್,ಪ್ರವೀಣ ಸ್ಥಾವರಮಠ,ಸಿದ್ದಯ್ಯ ಸ್ವಾಮಿ ವಿ.ಎ,ಸೂರ್ಯನಾರಾಯಣ ರೆಡ್ಡಿ,ಕೇದಾರನಾಥ ಸ್ವಾಮಿ,ಸೋಮಶೇಖರಯ್ಯ ಸ್ವಾಮಿ ಕಲ್ಮಠ,ಚಂದ್ರಶೇಖರ ಹಿರೇಮಠ,ವಿಠ್ಠಲ ರಾವ್,ವನಸಿರಿ ಫೌಂಡೇಶನ್ ಸದಸ್ಯರಾದ ಅಮರಯ್ಯ ಪತ್ರಿಮಠ,ರಂಜಾನ್ ಸಾಬ್, ಮುದಿಯಪ್ಪ ಹೊಸಹಳ್ಳಿ ಕ್ಯಾಂಪ್,ಚನ್ನಪ್ಪ ಕೆ.ಹೊಸಹಳ್ಳಿ ಹಾಗೂ ನಗರದ ನಿವಾಸಿಗಳು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.