ಅಫಜಲಪುರ:ದೇಶದ ವಾಸ್ತುಶಿಲ್ಪ ಕಲೆಗೆ ಭಗವಾನ್ ಶ್ರೀ ವಿಶ್ವಕರ್ಮರ ಕೊಡುಗೆ ಅಪಾರವಾದದ್ದು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊಬ್ಬುರ (ಬಿ)ಯ ಅತಿಥಿ ಶಿಕ್ಷಕಿಯಾದಂತಹ ಶ್ರೀಮತಿ ನಾಗಮ್ಮ ಎಮ್ ಪಂಚಾಳ ಅವರು ಹೇಳಿದರು.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊಬ್ಬುರ ಬಿ ಯಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಆಚರಣೆಯ ಶುಭ ಸಂದರ್ಭದಲ್ಲಿ ಉಕ್ಕಿನ ಮನುಷ್ಯ ಸರ್ಧಾರ ವಲ್ಲಭಬಾಯಿ ಪಟೇಲ್ ಹಾಗೂ ಭಗವಾನ್ ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು ದೇಶದ ವಾಸ್ತು ಶಿಲ್ಪ ಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರವಾದದ್ದು,ವಿಶ್ವಕರ್ಮರ ಕೆಲಸ ಕಾರ್ಯಗಳು ಮೆಚ್ಚುವಂತಹವು ಎಂದು ವಿಶ್ವಕರ್ಮರನ್ನು ಕೊಂಡಾಡಿದರು.
ವೇದಿಕೆ ಮೇಲೆ ಮುಖ್ಯೋಪಾಧ್ಯಾಯರಾದ ಝಾಕೀರ್ ಹುಸೇನ್,ಎಸ್ ಡಿ ಎಮ್ ಸಿ ಅದ್ಯಕ್ಷ ಬಸವರಾಜ ಅಂತರಗಂಗಿ,ಸದಸ್ಯ ಹುಣಚಪ್ಪ ಇಟಗೊಂಡ,ಬಾಬುರಾವ,ಶಿಕ್ಷಕರಾದ ಗುರಪ್ಪ, ಕರುಣಾಕರ್ ಕುಲಕರ್ಣಿ ಹಾಗೂ ಇತರ ಶಿಕ್ಷಕ ವೃಂದದವರು ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ:ಅಪ್ಪಾರಾಯ ಬಡಿಗೇರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.