ಬೀದರ್: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಜೈ ಭಾರತ್ ಮಾತಾ ಸೇವಾ ಸಮಿತಿ ಬೀದರ್ ಜಿಲ್ಲಾ ಘಟಕ ವತಿಯಿಂದ ಅದ್ದೂರಿ ಕಲ್ಯಾಣ ಕರ್ನಾಟಕ ಉತ್ಸವ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ವೀರ ದೇಶಭಕ್ತರ ಭಾವಚಿತ್ರಗಳು ಮೆರವಣಿಗೆಯನ್ನು ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.ಇದಕ್ಕಿಂತ ಮುಂಚೆ ವೇದಿಕೆ ಕಾರ್ಯಕ್ರಮವು ನಡೆಯಿತು ವೇದಿಕೆ ಮೇಲೆ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಹವಾ ಮಲ್ಲಿನಾಥ್ ಮಹಾರಾಜರು ನಿರುಗುಡಿ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕರು ವಹಿಸಿದ್ದರು. ಅತಿಥಿಗಳಾಗಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಶೈಲೇಂದರ ಬೆಲ್ದಳೆ ಅವರು ವಹಿಸಿದ್ದರು. ಹಾಗೂ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ ವೈಜಿನಾಥ ಝಳಕೆ,ಸಮಿತಿಯ ಭಾಲ್ಕಿ ತಾಲೂಕು ಅಧ್ಯಕ್ಷರಾದ ಶ್ರೀ ಪಪ್ಪು ಪಾಟೀಲ್ ಖಾನಾಪುರ ಇದ್ದರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರಿಗೆ ಸನ್ಮಾನ್ಯ ಕಾರ್ಯಕ್ರಮವನ್ನು ಇದೇ ವೇದಿಕೆ ಮೇಲೆ ನಡೆಯಿತು ತದನಂತರ ಮೆರವಣಿಗೆಯು ಬೀದರನ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಲ್ಕಾಪುರ ಆಶ್ರಮದಲ್ಲಿ ಕೊನೆಗೊಂಡಿತು ಅಲ್ಲಿ ಬಂದಂತಹ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು ಇದೇ ಸಂದರ್ಭದಲ್ಲಿ ಸಮಿತಿಯ ಭಾಲ್ಕಿ ತಾಲೂಕು ಅಧ್ಯಕ್ಷರಾದ ಶ್ರೀ ಪಪ್ಪು ಪಾಟೀಲ್ ಖಾನಾಪುರ್ ಅವರನ್ನು ನಮ್ಮ ವರದಿಗಾರರು ಸಂಪರ್ಕಿಸಿದಾಗ ಪರಮ ಪೂಜ್ಯರು ನಡೆಸಿಕೊಡುವಂತಹ ಈ ಒಂದು ದೇಶ ಭಕ್ತಿಯ ಜಾಗೃತಿ ಮೂಡಿಸುವಂತಹ ಕಾರ್ಯವು ನಿಜಕ್ಕೂ ಬೆಲೆಕಟ್ಟಲಾಗದಂತಹದು ಅವರು ಈ ನಮ್ಮ ದೇಶಕ್ಕೆ ಅಮೂಲ್ಯ ಕೊಡುಗೆ ಎಂದು ಹೇಳಲು ಇಚ್ಛಿಸುತ್ತೇನೆ ಈ ಸಂದರ್ಭದಲ್ಲಿ ಸ್ವತಂತ್ರ ಹೋರಾಟಗಾರರನ್ನು ಸ್ಮರಿಸುವುದು ನಮ್ಮ ಜವಾಬ್ದಾರಿ ಎಂದು ಪೂಜ್ಯರು ತಿಳಿಸಿಕೊಟ್ಟಿದ್ದಾರೆ. ಇದರಿಂದ ನಾವು ಪರಮ ಪೂಜ್ಯರಿಗೆ ಸದಾ ಚಿರಋಣಿಗಳಾಗಿದ್ದೇವೆ ಎಂದು ಹೇಳಲು ಸಂತೋಷ ಪಡುತ್ತೇನೆ.
ವರದಿ-ಮಹಾನ್ ಕೋಟೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.