ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಐದು ತರಹದ ಸಿರಿಧಾನ್ಯ ಬಳಸಿ ಶ್ರೀ ಗಣಪತಿಯ ಚಿತ್ರವನ್ನು ಬಿಡಿಸುವ ಕಲಾವಿದ ಗಣೇಶ

ಹಾವೇರಿ:ಗಣೇಶ ಚತುರ್ಥಿಯ ಅಂಗವಾಗಿ ಹಾವೇರಿಯ ಕಲಾವಿದ ಯಾವುದೇ ಬಣ್ಣಗಳನ್ನು ಬಳಸದೆ ಐದು ತರಹದ ಸಿರಿಧಾನ್ಯ ಬಳಸಿ ಶ್ರೀ ಗಣಪತಿಯ ಚಿತ್ರವನ್ನು ಬಿಡಿಸಿದ್ದಾರೆ.
ಹಾವೇರಿಯ ಚಿನ್ನ ಬೆಳ್ಳಿ ಕೆಲಸಗಾರ ಹವ್ಯಾಸಿ ಯುವ ಕಲಾವಿದ ಗಣೇಶ ವೆಂಕಟೇಶ ರಾಯ್ಕರ್ ಅವರು ರಾಗಿ,ನವಣೆ,ಹಾರಕ,ಸಾಮೆ,ಕೊರಲೆ, ಕಾಳಮೇಣಸುಗಳನ್ನು ಉಪಯೋಗಿಸಿ ಎಂಟು ದಿನದಲ್ಲಿ ಅವರ ಎಲ್ಲಾ ಕೆಲಸ ಮುಗಿದ ಮೇಲೆ ರಾತ್ರಿ ವೇಳೆ 2 ಗಂಟೆ ಸಮಯ ಮೀಸಲಿಟ್ಟು ಚಿತ್ರವನ್ನು ಬಿಡಿಸಿದ್ದಾರೆ.
ಶ್ರೀ ಗಣಪತಿಯ ಚಿತ್ರವನ್ನು ಬಿಡಿಸಲು 2840 ರಾಗಿ , 329 ನವಣೆ,44 ಹಾರಕ,65 ಸಾಮೆ,33 ಕೊರಲೆ,2 ಕಾಳಮೆಣಸು ಬಳಸಿದ್ದಾರೆ.ಸಿರಿಧಾನ್ಯಗಳನ್ನೇ ಯಾಕೆ ಬಳಸಿ ಚಿತ್ರವನ್ನು ಚಿತ್ರಿಸುತ್ತಾರೆ ಎನ್ನುವ ಪ್ರಶ್ನೆಗೆ ಅವರು ಹೇಳಿದ ಉತ್ತರವಿದು “ಹಿಂದಿನ ಕಾಲದಲ್ಲಿ ಸಿರಿಧಾನ್ಯದ ಮಹತ್ವ ತಿಳಿದು ಅದನ್ನೇ ಬಳಸುತ್ತಿದ್ದರು ಅದರಿಂದ ಆರೋಗ್ಯವಾಗಿದ್ದರು ಆದರೆ ಈಗಿನ ಕಾಲದಲ್ಲಿ ಬಹುತೇಕ ಜನರಿಗೆ ಅದರ ಮಹತ್ವ ಗೊತ್ತಿಲ್ಲ ಆದ ಕಾರಣ ನಾನು ಸಿರಿಧಾನ್ಯದಲ್ಲಿ ಚಿತ್ರ ರಚಿಸಿ ಸಿರಿಧಾನ್ಯದಲ್ಲಿ ಎಷ್ಟು ಸುಂದರ ಚಿತ್ರ ರಚನೆ ಆಗುತ್ತೆ ಅಂದರೆ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಬಾರದು ಎನ್ನುವ ಉದ್ದೇಶದಿಂದ ಸಿರಿಧಾನ್ಯದ ಚಿತ್ರ ರಚಿಸಿ ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.
ಗಣೇಶ ಅವರು ಆರಂಭದಲ್ಲಿ ಮಣ್ಣಿನಲ್ಲಿ ಗಣಪತಿಯ ವಿಗ್ರಹಗಳನ್ನು ಮಾಡುತ್ತಿದ್ದರು ಆದರೆ ಅವರು ಜಗತ್ತಿಗೆ ಏನಾದರೂ ಒಂದು ಹೊಸತನ್ನು ತೋರಿಸಬೇಕು ವಿಶೇಷವಾಗಿ ಏನನ್ನಾದರೂ ಮಾಡಬೇಕು ಎಂದು ಯೋಚಿಸಿದಾಗ ಹೊಳೆದದ್ದೇ ಸಿರಿಧಾನ್ಯಗಳಲ್ಲಿ ಬಿಡಿಸುವ ಚಿತ್ತಾರ .
‘ಕಲೆಯಲ್ಲಿ ಸ್ವಂತಿಕೆ ಇರಬೇಕು ಎಂದು ನನ್ನದೇ ಆದ ಪ್ರತ್ಯೇಕ ಶೈಲಿಯನ್ನು ರೂಢಿಸಿಕೊಂಡು ಸಿರಿಧಾನ್ಯಗಳ ಮೂಲಕ ಚಿತ್ರಗಳನ್ನು ಬಿಡಿಸುವ ಹವ್ಯಾಸದಲ್ಲಿ ಮಗ್ನನಾಗಿದ್ದೇನೆ ಎಂದರು ಇವರ ಈ ಚಿತ್ರವು ಅವರ ಬಂಗಾರದ ಅಂಗಡಿಯಲ್ಲಿ ನೋಡ ಸಿಗುತ್ತದೆ.ಗಣೇಶ್ ಅವರು ಬಹುಮುಖ ಪ್ರತಿಭೆ . ಸಿರಿಧಾನ್ಯ ಚಿತ್ರಕಲೆ,ಬಂಗಾರದ ಸೂಕ್ಷ್ಮ ಕಲೆ,ಯುವ ಕ್ರೀಡಾಪಟು ಇವರು ಈ ಹಿಂದೆ ಕೂಡ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ದೇವಿ ಚಿತ್ರವನ್ನು ರಚಿಸಿ ಗಮನ ಸೆಳೆದಿದ್ದರು ಇಷ್ಟೇ ಅಲ್ಲದೆ ಹಲವು ಚಿತ್ರಗಳನ್ನು ರಚಿಸಿ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಅವರದಾಗಿಸಿಕೊಂಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ