ಹಾಸನ:ಅರಕಲಗೂಡು ಪಟ್ಟಣದ ಹೃದಯ ಭಾಗದಲ್ಲಿರುವ ರಾಷ್ಟ್ರಕವಿ ಕುವೆಂಪುರವರ ಉದ್ಯಾನವನದಲ್ಲಿ ಯಾವುದೇ ಸ್ವಚ್ಛತೆ ಇಲ್ಲದೆ, ನಿರ್ವಹಣೆ ಮಾಡದೆ ಪಟ್ಟಣ ಪಂಚಾಯಿತಿಯ ನಿರ್ಲಕ್ಷದಿಂದ ಅಭಿವೃದ್ಧಿ ಕಾಣದಾಗಿದೆ ಈ ಉದ್ಯಾನವನದಲ್ಲಿ ಸಾವಿಗಾಗಿ ಕಾದು ಕುಳಿತಿರುವ ವಿದ್ಯುತ್ ಕಂಬಗಳು ಮತ್ತು ತುಕ್ಕು ಹಿಡಿದ ಆಟಿಕೆ ಸಾಮಾನುಗಳು ದಿನನಿತ್ಯ ವಾಯುವಿಹಾರಕ್ಕೆ ಮಹಿಳೆಯರು ವಯಸ್ಕರು ಮಕ್ಕಳು ಆಗಮಿಸುತ್ತಿದ್ದು ಸ್ವಚ್ಛತೆ ಕಾಣದಿರುವ ಉದ್ಯಾನ ಈ ಉದ್ಯಾನವನ ಕಂಡು ಅಧಿಕಾರಿಗಳ ವಿರುದ್ಧ ಇಡೀ ಶಾಪ ಹಾಕುವಂತಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಉದ್ಯಾನವನವನ್ನು ಸ್ವಚ್ಛತೆ ಮಕ್ಕಳ ಆಟಿಕೆ ವಿದ್ಯುತ್ ಕಂಬಗಳು ಇದರ ಬಗ್ಗೆ ಗಮನಹರಿಸಿ ಕೂಡಲೇ ಅಧಿಕಾರಿಗಳು ನಿರ್ವಹಣೆ ಕಡೆ ಗಮನ ಹರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
