ಕಲಬುರಗಿ:ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗಿರುವುದಕ್ಕೆ ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ಸ್ವಾಗತಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,ಮಹಿಳಾ ಮೀಸಲಾತಿ ಮಾಡಿರುವುದು ಸಂತೋಷದ ವಿಚಾರ.ಇಡೀ ದೇಶವೇ ಹೊಸ ಯುಗಕ್ಕೆ ಸಾಕ್ಷಿಯಾಗಿದೆ ಎಂದರು ಇದೊಂದು ಅದ್ಭುತ ಕಲ್ಪನೆಯಾಗಿದೆ.ಇದೆಲ್ಲವೂ ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಮತ್ತು ಸರಕಾರದ ಚಿಂತನೆಯಾಗಿದೆ.ಇದು ಮಹಿಳೆಯರ ಸಮಯ ಸ್ವಾತಂತ್ರ್ಯ ಪೂರ್ವದಲ್ಲಿ ಸರೋಜನಿ ನಾಯ್ಡು ಅವರು ಹೋರಾಟ ಮಾಡಿದ್ದರು.ಸದ್ಯ ಪ್ರದಾನಿ ಮೋದಿ ಅವರು ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದಾರೆ.2010 ರಲ್ಲಿ ಪಾರ್ಲಿಮೆಂಟ್ ನಲ್ಲಿ ಚರ್ಚೆಯಾಗಿತ್ತು.ಇಂದು ಮೋದಿ ಅವರು ಮಹಿಳೆಯರಿಗೆ ಒಳ್ಳೆಯ ಸ್ಥಾನವನ್ನು ಕೊಟ್ಟಿದ್ದಾರೆ.ಹೊಸ ಜಗತ್ತಿಗೆ ಸ್ವಾಗತ,ನಮ್ಮ ಕನಸಿನ ಭಾರತಕ್ಕೆ ಸ್ವಾಗತ ಎಂದು ಹರ್ಷ ವ್ಯಕ್ಯಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.