ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಆರೋಗ್ಯ ಸಚಿವರನ್ನು ಶಾಸಕ ಎಂ.ಆರ್.ಮಂಜುನಾಥ್ ಆತ್ಮೀಯವಾಗಿ ಬರಮಾಡಿಕೊಂಡರು ನಂತರ ಸಿಕಲ್ ಸೆಲ್ ಅನಿಮಿಯಾ ಮತ್ತು ಜೆರೊಡರ್ಮಾ ಪಿಮೆಂಟೊಸಂ ಎಂಬ ವಿರಳ ಚರ್ಮ ರೋಗ ಪತ್ತೆಯಾಗಿರುವ ಕುರಟ್ಟಿ ಹೊಸೂರು,ಚರ್ಮ ರೋಗಕ್ಕೆ ತುತ್ತಾಗಿರುವವರಿಗೆ ಸೂಕ್ತ ಔಷಧಿಯನ್ನು ನೀಡುವಂತೆ ಮತ್ತು ಸಮಸ್ಯೆಯಿಂದ ಬಳಲುತ್ತಿರುವರಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಕೌದಳ್ಳಿಯಲ್ಲಿ ಒಂದು ಪ್ರಾರ್ಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲು ಸಚಿವರಲ್ಲಿ ಕೇಳಿದಾಗ ಅಗತ್ಯಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು ಅಲ್ಲದೆ ಇದು ಅತ್ಯಂತ ವಿರಳ ಚರ್ಮ ರೋಗದ ಇದರ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರ ನಿಮ್ಮ ಜೊತೆಗೆ ಸದಾ ಇರುತ್ತದೆ ಎಂದು ಸಾರ್ವಜನಿಕರಿಗೆ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮಂಜೇಶ್, ಚಿನ್ನವೆಂಕಟ್,ವಿಜಯಕುಮಾರ್,ಎಸ್ ಆರ್ ಮಹದೇವ್,ಗೋಪಾಲ್,ನಾಯ್ಕ ತಮ್ಮಯ್ಯ , ವೆಂಕಟೇಶ್ ಮತ್ತಿತರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.