ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಸಮಗ್ರ ಕೃಷಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಡಾ.ಶಾಮರಾವ್ ಕುಲಕರ್ಣಿ (ಬೇಸಾಯ ಶಾಸ್ತ್ರ ವಿಭಾಗ) ಅವರು ತೊಗರಿ ಮತ್ತು ಹತ್ತಿಯ ಬೇಸಾಯ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ಅದೇ ರೀತಿಯಾಗಿ ಡಾ.ಶಿವಪ್ಪ ಕರಡಿ (ತೋಟಗಾರಿಕೆ ವಿಭಾಗ) ಇವರು ಮೆಣಸಿನಕಾಯಿ ಬೇಸಾಯ ಕ್ರಮಗಳನ್ನು ವಿವರಿಸಿದರು,ಡಾ.ನಾಗರಾಜ್ (ಸಸ್ಯ ರೋಗ ಶಾಸ್ತ್ರ ವಿಭಾಗ) ಅವರು ಹತ್ತಿ,ತೊಗರಿ ಮತ್ತು ಮೆಣಸಿನಕಾಯಿ ಬೆಳೆಯ ರೋಗಗಳ ಮತ್ತು ಅದರ ನಿರ್ವಹಣಾ ಕ್ರಮಗಳನ್ನು ವಿವರಿಸಿದರು . ರೈತರೊಂದಿಗೆ ಸಂಭಾಷಣೆ ಮಾಡಿ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಿದರು.ಡಾ.ದೊಡ್ಡಬಸಪ್ಪ ಪಾಟೀಲ,ಡಾ.ಮಲ್ಲಿಕಾರ್ಜುನ ಮತ್ತು “ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ”ದ ಸಹ ಸಂಯೋಜಕರಾದ ಡಾ.ಜನಾರ್ಧನ ಕಾಂಬಳೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಅದೇ ರೀತಿಯಾಗಿ ಕಾಂಗ್ರೆಸ್ ಮುಖಂಡರು ಲಾಲ್ ಪಟೇಲ್ ಯರಗಲ್ ಶಾಂತಪ್ಪ ಕೊಂಡ ಅಲ್ಲಾ ಪಟೇಲ್ ಹೊಸಮನಿ ಜಗ್ಗು ಗೌಡ ಕೊಡಮನಹಳ್ಳಿ ಸುಲ್ತಾನ್ ಪಟೇಲ್ ರಂಜಣಗಿ ಭೀಮರಾಯ ಅಸಗಿ ವ್ಯವಸಾಯ ಸಹಕಾರ ಸೇವಾ ಸಂಘ ಬಿಳವಾರ ವಲಯ ಅಧ್ಯಕ್ಷರು ರಾಜು ಹಿರೇಮಠ ಹಾಗೂ ಮಾಧ್ಯಮ ವರದಿಗಾರರು ಮೈಬೂಬ್ ಪಟೇಲ್ ನಡುವಿನಮನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.