ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘವು ಪ್ರಸಕ್ತ 2022-23ನೇ ಸಾಲಿನಲ್ಲಿ 10.52 ಲಕ್ಷ ರೂಗಳ ನಿವ್ವಳ ಲಾಭಗಳಿಸಿದೆ ಎಂದು ಮುಖ್ಯ ಕಾಯ೯ ನಿವಾ೯ಹಣಾಧಿಕಾರಿ ಸಿ.ದೊಡ್ಡವೀರಶೆಟ್ಟಿ ತಿಳಿಸಿದರು.
ಸಂಘದ ಸಮುದಾಯ ಭವನದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಸವ೯ ಸದಸ್ಯರ ವಾಷಿ೯ಕ ಮಹಾಸಭೆಯಲ್ಲಿ ಮಾತನಾಡಿದ ಅವರು ಈ ಭಾಗದಲ್ಲಿ ಗಿರಿಜನ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಕಾ೯ರ ಅರಣ್ಯದಲ್ಲಿ ದೊರೆಯುವ ಕಿರು ಉತ್ಪನ್ನಗಳನ್ನು ಸಂಗ್ರಹಿಸುವ ಅವಕಾಶ ನೀಡಿದ್ದು ಆ ಮೂಲಕ ಕುಟುಂಬ ನಿವಾ೯ಹಣೆಗೆ ಆಧಾರವಾಗಿರುತ್ತದೆ ಎಂದರು.
ಪ್ರಸಕ್ತ ವಷ೯ದಲ್ಲಿ ಗಿರಿಜನರಿಂದ 43.59 ಲಕ್ಷ ರೂ ಕಿರು ಉತ್ಪನ್ನಗಳನ್ನು ಖರೀದಿಸಿ ಅವುಗಳನ್ನು ವ್ಯಾಪಾರ ವಹಿವಾಟು ಮಾಡಲಾಗಿದೆ ಅದರಲ್ಲಿ ಎಲ್ಲಾ ಖಚು೯ ವೆಚ್ಚಗಳನ್ನು ಕಳೆದು 10,52,060/- ಲಕ್ಷ ರೂಗಳು ನಿವ್ವಳ ಲಾಭಾಂಶ ಬಂದಿದೆ ಇದರಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮಂದಿ ಗಿರಿಜನ ಮಕ್ಕಳಿಗೆ ಲಾಭಾಂಶದಲ್ಲಿ ಬೋನಸ್ ರೂಪದಲ್ಲಿ ಸಹಾಯಧನ ನೀಡಲಾಗುತ್ತದೆ ಅಲ್ಲದೆ 18 ವಷ೯ ತುಂಬಿದ ಗಿರಿಜನರಿಗೆ ಸಂಘದಲ್ಲಿ ಸದಸ್ಯವನ್ನು ಉಚಿತವಾಗಿ ನೀಡಲಾಗುತ್ತಿದ್ದು ಇದರ ಪ್ರಯೋಜನೆ ಪಡೆಯುವಂತೆ ತಿಳಿಸಿದರು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಎಸಿಎಫ್ ಶಶಿಧರ್ ಮಾತನಾಡಿ ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಜೀವನ ರೂಪಿಸಿಕೊಳ್ಳುವುದರ ಮೂಲಕ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಹೆಚ್ಚಿನ ಒತ್ತು ನೀಡಬೇಕು ಹನೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರು ವಾಸವಾಗಿದ್ದು,ಪ್ರಸಕ್ತ ಸಾಲಿನಲ್ಲಿ 5660 ಮಂದಿ ಸದಸ್ಯತ್ವ ಪಡೆದಿದ್ದಾರೆ. ಸೋಲಿಗ ಸಮುದಾಯದ ಜನರಿಗೆ ಅರಣ್ಯ ಇಲಾಖೆ ವತಿಯಿಂದ ಜೀವನೋಪಾಯಕ್ಕಾಗಿ ಅರಣ್ಯ ಪ್ರದೇಶದಲ್ಲಿ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಎಂದರು.
ಈ ದಿಸೆಯಲ್ಲಿ ಹನೂರಿನಲ್ಲಿ ಸಂಘವನ್ನು ಸ್ಥಾಪಿಸಲಾಗಿದ್ದು,ಗಿರಿಜನರು ಸಂಗ್ರಹಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಪ್ರತಿ ವರ್ಷ ಸಂಘವು ಅಭಿವೃದ್ಧಿಯನ್ನು ಹೊಂದುತ್ತಿರುವುದು ಮೆಚ್ಚುಗೆಯ ಸಂಗತಿ ಈ ಹಿನ್ನಲೆ ಈ ವರ್ಷ ಸಂಘದಿಂದ ಮಾರಾಟ ಮಾಡಲಾದ ಅರಣ್ಯ ಕಿರು ಉತ್ಪನ್ನಗಳಿಂದ 10.52 ಲಕ್ಷ ರೂ ಲಾಭ ಗಳಿಸಿದೆ ಇದರಲ್ಲಿ ಆಡಳಿತಾತ್ಮಕ ವೆಚ್ಚ ಸವಕಳಿ ವೆಚ್ಚ ಇನ್ನಿತರ ವೆಚ್ಚ ಕಳೆದು 2.86,315/- ಲಕ್ಷ ರೂ. ಲಾಭ ಹೊಂದಿದೆ ಹಾಗಾಗಿ ಸಂಘ ಅಭಿವೃದ್ಧಿಯತ್ತ ಮುನ್ನೆಡೆಯುತ್ತಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಆದ್ದರಿಂದ ಪ್ರತಿಯೊಬ್ಬರೂ ಪರಸ್ಪರ ಸಹಕಾರ ನೀಡುತ್ತಾ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಹಾಗೆಯೇ ಅರಣ್ಯ ಸಂರಕ್ಷಣೆಗೂ ಹೆಚ್ಚಿನ ಒತ್ತು ನೀಡಬೇಕು. ಎಂದರಲ್ಲದೆ ನಿಮ್ಮಲ್ಲಿ ಯಾವುದೇ ಸಮಸ್ಯೆ ಇದ್ದರೂ ಬರವಣಿಗೆ ಮೂಲಕ ಮನವಿ ಸಲ್ಲಿಸಿ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಭೆಯಲ್ಲಿ 2023-24ನೇ ಸಾಲಿನ ಅಂದಾಜು ಆಯವ್ಯಯ ಮಂಡನೆ ಲೆಕ್ಕ ಪರಿಶೋಧಕರನ್ನು ಆಯ್ಕೆಯ ವಿಚಾರ,ಬೈಲಾ ತಿದ್ದುಪಡಿ ಸಂಬಂಧ ಸೇರಿದಂತೆ ಸಂಘದ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕರಿಯಪ್ಪ ನಾಗ ರಂಗೇಗೌಡ ಸಿದ್ದಮರಿ ಶಿವಣ್ಣ ಗಣೇಶ ಬಸವಣ್ಣ ತಿರುಮಮ್ಮ ಮಹದೇವಮ್ಮ ಹಾಗೂ ನೌಕರರಾದ ಬಸವರಾಜು ಕುಳ್ಳಯ್ಯ ಹಾಜರಿದ್ದರು.
ವರದಿ ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.