ಯಾದಗಿರಿ/ಶಹಾಪುರ:ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕ ಘಟಕ ವತಿಯಿಂದ ನಿನ್ನೆ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀಮತಿ ರೇಣುಕಾ ಪಾಟೀಲ್ ಸಮನ್ವಯಾಧಿಕಾರಿಗಳು ಶಹಾಪುರ,ಶಾಂತಗೌಡ ಪಾಟೀಲ್ ನಿವೃತ್ತಿ ಉಪ ನಿರ್ದೇಶಕರು ಯಾದಗಿರಿ, ಶ್ರೀಮತಿ ಗೀತಾಂಜಲಿ ಮುಗುಳಿ ಜಿಲ್ಲಾ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ಸಂಘ ಯಾದಗಿರಿ,ಶ್ರೀಮತಿ ಜ್ಯೋತಿ ಲತಾ ತಡಬಿಡಿ ಮಠ ಉಪನ್ಯಾಸಕರು,ಡಾ|| ಶಂಕ್ರಮ್ಮ ಪಾಟೀಲ್ ಉಪನ್ಯಾಸಕರು ಮತ್ತು ರಾಯಪ್ಪಗೌಡ ಹುಡೇದ ತಾಲೂಕ ನೌಕರರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.ಸಂಘದ ವತಿಯಿಂದ ಪ್ರಾಸ್ತಾವಿಕ ನುಡಿಯನ್ನು ಶ್ರೀಮತಿ ವಿಜಯಲಕ್ಷ್ಮೀ ಹಂಗರಿಗಿ ಜಿಲ್ಲಾ ಗೌರವಾಧ್ಯಕ್ಷರು ಮಾತನಾಡಿದರು.
ಶ್ರೀ ಶಾಂತಗೌಡ ಪಾಟೀಲ್ ದಂಪತಿಗಳಿಗೆ ಸಂಘದ ವತಿಯಿಂದ ವಿಶೇಷ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಉತ್ತಮ ಕ್ರಿಯಾಶೀಲ ಶಿಕ್ಷಕರನ್ನು ಗುರುತಿಸಿ 8 ಜನ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.
ಶ್ರೀ ಶಾಂತಗೌಡ ಪಾಟೀಲ್ ಅವರು ನಮ್ಮ ತಾಲೂಕಿನಿಂದ ತಮ್ಮ ತವರು ಜಿಲ್ಲೆಗಳಿಗೆ ವರ್ಗಾವಣೆಗೊಂಡ ಎಲ್ಲಾ ಶಿಕ್ಷಕಿಯರಿಗೆ ಸನ್ಮಾನಿಸಿದರು ತಾಲೂಕ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಶಾಂತಾಬಾಯಿ ಯವರು ವರ್ಗಾವಣೆಗೊಂಡ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವದಿಂದ ಬೀಳ್ಕೊಡಲಾಯಿತು.
ಸಂಘದ ಕಾರ್ಯವೈಖರಿ ಹಾಗೂ ಒಳ್ಳೆಯ ಬೆಳವಣಿಗೆ ನೋಡಿ ಕಾರ್ಯಕ್ರಮಕ್ಕೆ ಬಂದ ಎಲ್ಲಾ ಶಿಕ್ಷಕ,ಶಿಕ್ಷಕಿಯರು ಹಾರೈಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.