ಮನಸಕೊಟ್ಟ ಮಧ್ಯದಾಗ ಮುನಿಸಿಕೊಂಡ್ರ
ಹ್ಯಾಂಗ ಗೆಳತಿ ಏನೇನೋ ಹೇಳಿ ನೀ ಸುಮ್ನ ಕುಂತಿ
ಹಾಂಗ ಇರಬೇಕ ಹಿಂಗ ಇರಬೇಕ ಅಂತ ಭಾಳ್ ಹೇಳಿದ್ದಿ
ಈಗ ಅದನ್ನ ನೆನಿಸಿಕೊಂಡ್ರ ಬರುದಿಲ್ಲಾ ಗೆಳತಿ ನಿದ್ದಿ….!!
ಕುಂತಾಗ ನಿನ ಚಿಂತಿ ನಿಂತಾಗೂ ನಿನ ಬ್ರಾಂತಿ
ಅಚ್ಚಳಿಯದೇ ಉಳಿದೈತಿ ಮನದಾಗ ನಿನ ಮೋತಿ
ಕೋತಿ ಕೋತಿ ಎಂದು ಕರೆದ ಆ ರೀತಿ
ನೆನೆದಾಗೊಮ್ಮೆ ಅನ್ಸುತ್ತೆ ಮರೆಯಾಯಿತಾ ನಂಪ್ರೀತಿ….!!
ಎಲ್ಯರಾ ಅದಿನೀನ ಇಲ್ಲದೇ ಕಳಿಲಾರೆ ಅನುದೀನ
ಐತೊ ಇಲ್ಲೋ ಮನದಾಗ ನಮ್ಮಿಬ್ಬರ ಕೂನ
ನೀ ಕುಂತರ ಹಿಂಗ ದಿನಾ ಮೌನ
ನಡಿದುಲ್ಲಾ ಗೆಳತಿ ಮುಂದಿನ ಜೀವನ…!!
ಮದುವೆ ಮಾಡ್ತೀನಿ ಅಂದಾರ ಮನಿಯಾಗ ನಿಂತ
ಆದ್ರೂ ಅಭಿಪ್ರಾಯ ತಿಳಿಲಿಲ್ಲ ನಿಂದು ಇನ್ನೂ ಸ್ವಂತ
ತಡಯಾಕಂತ ಕೇಳಿಲ್ಲ ನಾ ನಿನಗ್ಯಾವತ್ತ
ಆದ್ರೂ ಬಿಡುದಿಲ್ಲ ನೀನಾ ನನ ಜೀವದ ಸ್ವತ್ತ….!!
ಬಂದರ ಬರಲಿ ಜೀವಕ್ಕ ಅದ್ಯಾವುದೇ ಕುತ್ತ
ನಿನ ಸಲುವಾಗಿ ತೋರಿಸತೇನ ನಾ ತಾಕತ್ತ
ಇಂತದಕ್ಕೇನೂ ಕಡಿಮಿಲ್ಲ ನನ್ನತ್ರ ಗಮ್ಮತ್ತ
ಹೊತ್ತೀನಿ ಕನಸ ನಿನ ಸುತ್ತ ಇರಬೇಕ ಮೂರಹೊತ್ತ….!!
- ಹನುಮಂತ ದಾಸರ
ಯುವ ಕವಿ ಧಾರವಾಡ.