ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಳೆಯ ವಿದ್ಯಾರ್ಥಿಗಳೇ ವಿಶ್ವವಿದ್ಯಾಲಯದ ಬೆನ್ನೆಲುಬು:ಡಾ.ನಿಶಾತ ಆರೀಫ್ ಹುಸೇನಿ

ಕಲಬುರಗಿ:ಯಾವುದೇ ವಿಶ್ವವಿದ್ಯಾಲಯದ ಗುಣಮಟ್ಟ ಹಳೆಯ ವಿದ್ಯಾರ್ಥಿಗಳಿಂದಲೇ ತಿಳಿಯುತ್ತದೆ ಹಳೆಯ ವಿದ್ಯಾರ್ಥಿಗಳ ಯಶಸ್ಸು ವಿವಿಗಳ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ ಎಂದು ಖಾಜಾ ಬಂದಾನವಾಜ್ ವಿವಿಯ ಕಲಾ, ಭಾಷಾ,ಮಾನವಕತೆ,ಸಮಾಜ ವಿಜ್ಞಾನ ಹಾಗೂ ವಿಜ್ಞಾನ ನಿಕಾಯದ ಡೀನ್ ಡಾ.ನಿಶಾತ ಆರೀಫ್ ಹುಸೇನಿ ಹೇಳಿದರು.
ನಗರದ ಖಾಜಾ ಬಂದಾನವಾಜ ವಿವಿಯಲ್ಲಿ ಶನಿವಾರ ಆಯೋಜಿಸಿದ್ದ ‘ಹಳೆಯ ವಿದ್ಯಾರ್ಥಿಗಳ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಬಿಎನ್ ವಿಶ್ವಾವಿದ್ಯಾಲಯವು ಕೆಲವೇ ವರ್ಷಗಳಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಹೆಸರನ್ನು ಪಡೆದಿದೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿದೆ ಎಂದರು ಅತಿ ಶೀಘ್ರದಲ್ಲೇ ವಿವಿಯು ಇನ್ನೂ ಅನೇಕ ಕಟ್ಟಡಗಳನ್ನೊಳಗೊಂಡು ಅತ್ಯುತ್ತಮ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ ಸತತ ಪರಿಶ್ರಮ ಉನ್ನತ ಯಶಸ್ಸಿಗೆ ಎಡೆಮಾಡಿ ಕೊಡುತ್ತದೆ,ಆದ್ದರಿಂದ ವಿದ್ಯಾರ್ಥಿಗಳಿಗೆ ಕಲಿಕಾ ಜೀವನ ಅಮೂಲ್ಯವಾದುದ್ದು ಎಂದರು.
ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ನೂರ್ಜಹಾನ್ (ಅಧ್ಯಕ್ಷ),ಸಮೀನಾ ಬೇಗಂ (ಉಪಾಧ್ಯಕ್ಷ),ನೀಲಾ ಪರ್ವೀನ್ (ಕಾರ್ಯದರ್ಶಿ),ಕಮ್ರಾನ್ ಜೆಸ್ಮೀಲ್ (ಖಜಾಂಚಿ),ರಫೀಕ್,ಗೌಸಿಯಾ,ನಿದಾ ಅಂಜುಮ್, ಮದಿಹಾ ಹಫ್ಸಾ ಮರ್ಯಮ್ ಇವರನ್ನು (ಸದಸ್ಯರು)ಗಳನ್ನಾಗಿ ನೇಮಿಸಲಾಯಿತು.
ಹಳೆಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಕೆಬಿಎನ್ ವಿವಿಯ ಡೀನ್ ಡಾ. ನಿಶಾತ ಆರೀಫ್ ಹುಸೇನಿ ಪ್ರಮಾಣ ವಚನ ಭೋದಿಸಿದರು.
ಹಳೆಯ ವಿದ್ಯಾರ್ಥಿಗಳಾದ ಸಮೀನಾ,ಘೌಸಿಯಾ, ತಹಸೀನ್,ಹುಮೇರಾ ಬೇಗಂ,ಸಾರಾ ಶಹಕರ್
ಜವೇರಿಯಾ ಫರೋಕಿ,ಅಲಿಯಾ ತಹ್ಸೀನ್, ದರಾಕ್ಷನ್ ಅಹ್ಮರ್,ಜುಬೈರ್,ಶಾಕಿರ್ ಜಮಾಲ್, ಸೈಯದ್ ಶಾರುಖ್ ಮತ್ತು ರಫೀಕ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಹಫೀಜ್ ಮೊಹಮ್ಮದ್ ಅಫ್ರೋಜ್ ಪ್ರಾರ್ಥಿಸಿದರೆ, ವಿದ್ಯಾರ್ಥಿನಿ ನಿದಾ ಸ್ವಾಗತಿಸಿದರು ಡಾ.ಅತಿಯಾ ಸುಲ್ತಾನ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಇಕ್ರಾ ಸುಲ್ತಾನ ಮತ್ತು ಸಫುರಾ ಫಾತಿಮಾ ನಿರೂಪಿಸಿದರು ಸುಮ್ಮಿಯ್ಯಾ ವಂದಿಸಿದರು.
ಇದೇ ವೇಳೆ ಎಲ್ಲಾ ಬ್ಯಾಚಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಫಿ ಮತ್ತು ಜೈವಿಕ ತಂತ್ರಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ.ಮುಜೀಬ್ ಕೆಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದರು.
ಕೆಬಿಎನ್ ವಿವಿಯ ಕಲಾ,ಭಾಷಾ,ಮಾನವೀಕತೆ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಎಲ್ಲಾ ಹಳೆಯ ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಹಾಜರಿದ್ದರು.
ಅಲ್ಲದೆ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರನ್ನಾಗಿ ಡಾ. ನಿಶಾತ ಆರೀಫ್ ಹುಸೇನಿ, ಸಂಚಾಲಕ ಡಾ.ಜಹಾನಾರ,ಡಾ.ಅತಿಯಾ ಸುಲ್ತಾನ, ಡಾ.ಮುಜೀಬ್,ಡಾ.ಶೈಖ್ ತಬಸ್ಸುಮ್,ಡಾ.ಸನಾ ಇಜಾಜ್,ಡಾ.ವಿನೋದ್ ಪಾಟೀಲ್,ಡಾ.ತಿಲಕ ಗಸ್ತಿ, ಡಾ.ಮೈಮುನ ಸರಡಗಿ,ಡಾ.ಹೀನಾ,ಕುಡ್ಸಿಯ ಪರ್ವೀನ್ ಮತ್ತು ಮನಿಷಾ ಪಾಟೀಲರನ್ನು ಸದಸ್ಯರನ್ನಾಗಿ ನೇಮಿಸಲಾಯಿತು.
ವರದಿ:ಅಪ್ಪಾರಾಯ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ