ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹೌದು, ಬದಲಾಸಬೇಕಾದದು ಜೀವನಶೈಲಿನ್ನು, ಆಹಾರ ಪದ್ದತಿಯನ್ನಲ್ಲ

ಗುರುಗಳು ಮನೆಗೆ ಬಂದಿದ್ದರು.

ಗುರುಗಳು ಮನೆಗೆ ಬಂದಿದ್ದರು.
ಮನೆಯಲ್ಲಿ ಸಿರಿಧಾನ್ಯದ ಉಪ್ಪಿಟ್ಟು ಮಾಡಿದ್ದೆವು.
ಎರಡನೇ ತುತ್ತು ಬಾಯಿಗಿಡುತ್ತಿದ್ದಂತೆ ಗುರುಗಳು ಇದಾವ ಧಾನ್ಯ ಎಂದು ಕೇಳಿದರು.
ಮಿಲ್ಲೆಟ್ಸ್. ಇದು ‘ಸಾಮೆ’ ಅಂದೆ.
ಇದನ್ನೇಕೆ ತಿನ್ನುತ್ತಿದ್ದೀಯ ಎಂದು ಕೇಳಿದರು.
ಆರೋಗ್ಯಕ್ಕೆ ಒಳ್ಳೆಯದಂತೆ, ತೆಳ್ಳಗಾಗುತ್ತಾರಂತೆ, ರಕ್ತದೊತ್ತಡ ಕಡಿಮೆ ಆಗುತ್ತದಂತೆ ಅಂದೆ.
ಗುರುಗಳು ನಕ್ಕರು.
ನಿಮ್ಮ ಮನೆಯ ಹಿರಿಯರ ಫೋಟೋ ಇದೆಯಾ ಅಂತ ಕೇಳಿದರು.
ನಮ್ಮ ಕುಟುಂಬದ ಹಿರಿಯರ ಫೋಟೋ ಕೊಟ್ಟೆ.
ಇದಕ್ಕೂ ಹಳೆಯ ತಲೆಮಾರಿನ ಫೋಟೋ ಇದ್ದರೆ ಕೊಡು ಅಂದರು.
ನಮ್ಮಪ್ಪ, ದೊಡ್ಡಪ್ಪ, ಚಿಕ್ಕಪ್ಪಂದಿರ ಫೋಟೋ ಕೊಟ್ಟೆ.

ಅದನ್ನೇ ದಿಟ್ಟಿಸುತ್ತಾ ಗುರುಗಳು ಹೇಳಿದರು,
ಇವರೆಲ್ಲ ತೆಳ್ಳಗೇ ಇದ್ದಾರಲ್ಲ! ಇವರು ಸಾಮೆ ತಿನ್ನುತ್ತಿದ್ದರೇ?

ಇವರಿಗಿಂತ ಹಿರಿಯರೂ ತೆಳ್ಳಗೇ ಇದ್ದಿರಬೇಕು. ಅವರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ ಅಲ್ಲವೇ?
ಈ ಜಗತ್ತಿನಲ್ಲಿ ಕೇವಲ ಐದು ವರ್ಷಗಳ ಹಿಂದೆ ಯಾರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ.

ಇಪ್ಪತ್ತು ವರ್ಷಗಳ ಹಿಂದೆ ಎಲ್ಲರೂ ತೆಳ್ಳಗೇ ಇದ್ದರು. ಆರೋಗ್ಯವಂತರಾಗಿಯೂ ಇದ್ದರು. ಅಲ್ಲವೇ? ಎಂದರು.
ತಲೆಯಾಡಿಸಿದೆ.

ಗುರುಗಳು ನಗುತ್ತಾ ಹೇಳಿದರು ಅಂದರೆ ನಿನ್ನ ಅತಿ ತೂಕದ ಸಮಸ್ಯೆಗೆ ಕಾರಣ ಅನ್ನ ಅಲ್ಲ. ನಿನ್ನ ಜೀವನ ವಿಧಾನ. ನಿಮ್ಮಪ್ಪ ದುಡೀತಿದ್ದರು. ನಿನ್ನ ತಾತ ನಡೀತಿದ್ದರು. ಓಡಾಡುತ್ತಿದ್ದರು. ಬೆವರುತ್ತಿದ್ದರು. ದೇಹವನ್ನು ದಂಡಿಸುತ್ತಿದ್ದರು. ಶ್ರಮ ಪಡುತ್ತಿದ್ದರು. ನಿಮ್ಮ ಮನೆಯಿಂದ ಮತ್ತೊಂದು ಮನೆಗೆ ಹೋಗುವುದಕ್ಕೆ ಬೈಕು ಹತ್ತುತ್ತಿರಲಿಲ್ಲ. ಯಾವತ್ತೂ ಇಡೀ ದಿನ ಕೂತುಕೊಂಡೇ ಕಾಲ ಕಳೆಯುತ್ತಿರಲಿಲ್ಲ. ತಲೆ ಬಗ್ಗಿಸಿ ಮೊಬೈಲ್ ನೋಡುತ್ತಾ ಬದುಕು ದಿನ ಸವೆಸುತ್ತಿರಲಿಲ್ಲ. Chips ತಿನ್ನುತ್ತಾ ಕ್ರಿಕೆಟ್ ನೋಡುತ್ತಿರಲಿಲ್ಲ. ಆಟ ಆಡುತ್ತಿದ್ದರು. ಮೂಟೆ ಹೊರುತ್ತಿದ್ದರು. ನೀರು ಸೇದುತ್ತಿದ್ದರು. ಹೌದಾ?
ತಲೆಯಾಡಿಸಿದೆ.

ಅಂದರೆ ನೀನು ಬದಲಾಯಿಸಬೇಕಾದದ್ದು ನಿನ್ನ ಆಹಾರವನ್ನಲ್ಲ. ಜೀವನ ಶೈಲಿಯನ್ನು. ನಾನು ಪಂಜಾಬಿನುದ್ದಗಲ ಓಡಾಡಿದ್ದೇನೆ. ಅಲ್ಲಿ ನೂರು ನೂರೈವತ್ತು ಕೇಜಿ ತೂಗುವ ಮಂದಿ ಸಾಕಷ್ಟು ಮಂದಿ ಇದ್ದಾರೆ. ಅವರು ಗೋಧಿ ತಿನ್ನುವವರು. ಆದರೂ ಬೊಜ್ಜು ಬೆಳೆಸಿಕೊಂಡಿದ್ದಾರೆ. ಅಂದರೆ ಬೊಜ್ಜು ಇಳಿಸುವುದಕ್ಕೆ ಗೋಧಿ ತಿಂದು ಪ್ರಯೋಜನ ಇಲ್ಲ. ಸಣ್ಣಗಾಗುವುದಕ್ಕೆ ಸಿರಿಧಾನ್ಯ ತಿಂದು ಪ್ರಯೋಜನ ಇಲ್ಲ. ಸಿರಿಧಾನ್ಯವನ್ನು ಒಂದು ಗಂಟೆ ನೀರಲ್ಲಿ ನೆನೆಸಿಟ್ಟು ನೋಡು. ಅದು ನೆನೆಯುವುದಿಲ್ಲ. ನೀರನ್ನು ಹೀರುವುದಿಲ್ಲ. ಒಂದು ಪಾವು ಅಕ್ಕಿ ಅನ್ನ ಆಗಬೇಕಿದ್ದರೆ ಎರಡೂವರೆ ಪಾವು ನೀರು ಬೇಕು. ಸಿರಿಧಾನ್ಯ ಅದರ ಅರ್ಧದಷ್ಟು ನೀರಲ್ಲಿ ಬೇಯುತ್ತದೆ. ನೀರು ಹೀರಿಕೊಳ್ಳದ ಧಾನ್ಯ ಒಳ್ಳೆಯದಲ್ಲ. ಒಂದು ವರ್ಷ ಸಿರಿಧಾನ್ಯವನ್ನೇ ತಿಂದು ನೋಡು. ಥೈರಾಯ್ಡ್ ಗ್ರಂಥಿ ಇನ್ನಿಲ್ಲದಂತೆ ಏನೇನನ್ನೋ ಸ್ರವಿಸಲು ಶುರುಮಾಡುತ್ತದೆ.
ಹೋಗಲಿ, ಸಿರಿಧಾನ್ಯ ನೀರಿಲ್ಲದ ಪ್ರದೇಶದಲ್ಲೂ ಬೆಳೆಯಬಲ್ಲ, ಅತಿ ಕಡಿಮೆ ಖರ್ಚಲ್ಲಿ ಬೆಳೆಯುವಂಥ ಧಾನ್ಯ. ಅದಕ್ಕೆ ಅಕ್ಕಿಯ ಮೂರು ಪಟ್ಟು ಬೆಲೆ ಯಾಕಿದೆ ಹಾಗಿದ್ದರೆ?
ಅಕ್ಕಿಯೊಳಗನ್ನವನು ಮೊದಲು ಕಂಡ ಜ್ಞಾನಿ, ಸಿರಿಧಾನ್ಯವನ್ನೇಕೆ ನಮ್ಮ major staple food ಅಂತ ನಿರ್ಧರಿಸಲಿಲ್ಲ? ಯಾಕೆಂದರೆ ಅದು ಆರೋಗ್ಯವಂತ ಆಹಾರ ಅಲ್ಲವೇ ಅಲ್ಲ. ಅದನ್ನು ಈಗ ಮಾರ್ಕೆಟಿಂಗ್ ಸಂಸ್ಥೆಗಳೂ ವೈದ್ಯರೂ ಸೇರಿ promote ಮಾಡುತ್ತಿದ್ದಾರೆ. ನಾವು ನಮ್ಮ ಸುತ್ತಮುತ್ತ ಏನು ಬೆಳೆಯುತ್ತೇವೋ ಅದೇ ನಮಗೆ ಶ್ರೇಷ್ಠವಾದ ಆಹಾರ
ಆಹಾರ ಪದ್ದತಿ ಬದಲಾಯಿಸಬೇಡ, ಜೀವನ ಶೈಲಿ ಬದಲಾಯಿಸು. ಎಲ್ಲವೂ ಬದಲಾಗುತ್ತದೆ.
ಕುಂತಲ್ಲೇ ಕೂತು, ಕೈ ಕಾಲುಗಳನ್ನು ಮೈಯನ್ನು ಹೇಗೆ ಬಳಸಬೇಕೋ ಹಾಗೆ ಬಳಸದೇ, ಆ ಕೊರತೆ ನೀಗಿಕೊಳ್ಳಲು ಸಿರಿಧಾನ್ಯ ತಿನ್ನುತ್ತೇನೆ ಅನ್ನೋದು ಪರಮ ದಡ್ಡತನ ಅಂದರು.

ಆವತ್ತೇ ರಾತ್ರಿ ಬಿಸಿಬಿಸಿ ಅನ್ನಕ್ಕೆ ಘಮಘಮಿಸುವ ಸಾರು, ಒಂದು ಮಿಳ್ಳೆ ತುಪ್ಪ ಹಾಕಿಕೊಂಡು ಹೊಟ್ಟೆ ತುಂಬ ತಿಂದೆ.
ಸಿರಿಧಾನ್ಯಕ್ಕೆ ಹುಚ್ಚಿಗೆ ಬಲಿಯಾಗುತ್ತಿದ್ದವನನ್ನು ಗುರುಗಳು ಬಂದು ಕಾಪಾಡಿದರು.

ಹೌದು, ಬದಲಾಸಬೇಕಾದದು ಜೀವನಶೈಲಿನ್ನು, ಆಹಾರ ಪದ್ದತಿಯನ್ನಲ್ಲ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ