ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹಿರಿಯರನ್ನು ಆಧರಿಸಿ,ಗೌರವಿಸೋಣ..!!

ಇತ್ತೀಚಿನ ದಿನಗಳಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣುವಂತಹ ಮನೋಭಾವ ಕಡಿಮೆಯಾಗುತ್ತಿದೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ರೇಮಂಡ್ಸ ಲಿಮಿಟೆಡ್ ಒಡೆಯನಾದ ಡಾ||ವಿಜಯಪಥ್ ಸಿಂಘಾನಿಯಾ ಸಾವಿರಾರು ಕೋಟಿಗಳ ಒಡೆಯನಾಗಿದ್ದರೂ ಕೂಡಾ ಇಂದು ಪುಡಿಗಾಸಿಗೆ ಪರದಾಡುತ್ತಿದ್ದಾರೆಂದರೆ ಅದಕ್ಕೆ ಅವರ ಮಗನೇ ಕಾರಣ ತಂದೆಯ ಎಲ್ಲಾ ಆಸ್ತಿಯನ್ನು ಕಿತ್ತುಕೊಂಡು ಮನೆಯಿಂದ ಹೊರಹಾಕಿದ್ದಾನೆ. ಹಾಗೂ ಇನ್ನೊಂದು ಮನಕಲಕುವ ಉದಾಹರಣೆ ಎಂದರೆ ಇತ್ತೀಚೆಗೆ ನಾವು ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಒಂದು ಸುದ್ದಿಯನ್ನು ಓದಿ ಸ್ತಂಭಿಭೂತರಾಗಿದ್ದೆವಲ್ಲವೇ..? ವಿದೇಶದಲ್ಲಿದ್ದ ಮಕ್ಕಳು ತಂದೆಯ ಅಂತ್ಯಸಂಸ್ಕಾರಕ್ಕೆ ಬರಲಾಗದೇ ಯಾರೋ ಮಾಡಿ ಮುಗಿಸಿದ ದುಃಖಕರ ಸುದ್ದಿಯು ಮನಕರಗುವಂತೆ ಮಾಡಿ ಕಣ್ಣುಗಳು ತೇವವಾಗಿದ್ದು ಎಲ್ಲರಿಗೂ ಇನ್ನೂ ಚೆನ್ನಾಗಿ ನೆನಪಿದೆ ತಂದೆ- ತಾಯಿಗಳ,ಅಜ್ಜ- ಅಜ್ಜಿಯರ ಅಪಾರವಾದ,ಅಗಾಧವಾದ ಕಾಳಜಿ,ಮಮತೆ,ಪ್ರೀತಿ,ಒಲವು,ಅಂತಃಕರುಣೆಗೆ ಇಂದಿನ ಸಮಾಜದ ಯುವಜನಾಂಗ ಯಾಕಿಷ್ಟು ತಿರಸ್ಕಾರ ಮಾಡುತ್ತಿದೆ ಇಂದಿನ ಈ ದುಸ್ಥಿತಿಯ ಪ್ರಭಾವದಿಂದಾಗಿ ನಮ್ಮ ಸಂಸ್ಕೃತಿಯನ್ನು ಮರೆಯುವಂತಾಯಿತಲ್ಲ.
ಇಂತಹ ಉದಾಹರಣೆಗಳು ಈಗ ಸಾಕಷ್ಟು ಪ್ರಮಾಣದಲ್ಲಿ ಜರುಗುತ್ತಲಿದ್ದು ಸರ್ವೇಸಾಮಾನ್ಯವಾಗಿಬಿಟ್ಟಿವೆ ತಮ್ಮನ್ನು ಸಾಕಿ ಸಲುಹಿದ ತಂದೆ ತಾಯಿಗಳನ್ನೇ ಜೋಪಾನ ಮಾಡದ ಇವರು ಬೇರೆಯವರಿಗೆ ಹೇಗೆ ತಾನೇ ಒಳ್ಳೆಯವರಾಗಿರಲು ಸಾಧ್ಯ..?
ನವಮಾಸ ಹೊತ್ತು,ಲಾಲನೆ,ಪಾಲನೆ,ಪೋಷಣೆ ಮಾಡಿದ ಹೆತ್ತಮ್ಮನನ್ನು ಕಡೆಗಣಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಜೀವನದುದ್ದಕ್ಕೂ ಪ್ರಾಣವನ್ನೇ ಒತ್ತೆಯಾಗಿಟ್ಟು ಸಲುಹಿ,ಸಾಲ-ಶೂಲ ಮಾಡಿ ಉನ್ನತ ವ್ಯಾಸಂಗ ಕೊಡಿಸಿದ ತಂದೆಗೆ ವೃದ್ಧಾಶ್ರಮದ ಆಸರೆ ಕೊಡಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದೆನಿಸುವುದಿಲ್ಲವೇ..? ನಿನ್ನನ್ನು ಆರ್ಥಿಕವಾಗಿ ಸದೃಢನನ್ನಾಗಿಸಿದ್ದರ ಕೃತಜ್ಞತೆಯಿಲ್ಲವೇ? ದಡ ಸೇರಿದ ಮೇಲೆ ನಾವಿಕನ ಹಂಗೇಕೆ ಎಂಬಂತಾಗಿದೆ ಇಂದಿನವರ ಮನಸ್ಥಿತಿ.
ಮಕ್ಕಳು ದೊಡ್ಡವರಾದ ಮೇಲೆ ಯಾಕಿಷ್ಟು ಕ್ರೂರರಾಗುತ್ತಿದ್ದಾರೆ? ನೈತಿಕತೆಯ ಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದೆ.ಇದಕ್ಕೆಲ್ಲಾ ಕಾರಣವೇನಿರಬಹುದು ಎಂದು ವಿಶ್ಲೇಷಣೆ ಮಾಡುವುದು ಅತ್ಯಗತ್ಯವಾಗಿದೆ.
ಶೇ.೯೯ರಷ್ಟು ಪ್ರಕರಣಗಳು ಮದುವೆಯಾದ ಮೇಲೆಯೇ ಮಕ್ಕಳು ತಮ್ಮ ತಂದೆತಾಯಿಗಳನ್ನು ಮನೆಯಿಂದ ಹೊರಹಾಕುತ್ತಿದ್ದಾರೆಂಬ ಅಂಶ ಬೆಳಕಿಗೆ ಬಂದಿದೆ ಹಾಗಾದರೆ ಇದಕ್ಕೆಲ್ಲಾ ಸಂಕುಚಿತ ಮನೋಭಾವ,ಸ್ವಚ್ಛಂದವಾಗಿ ಬದುಕುಬೇಕೆಂಬ ಸ್ವಾರ್ಥತೆಯೇ ಕಾರಣ ಎಂದು ಎಲ್ಲಾ ಮನಃಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ ಇಂದು ಎಲ್ಲರೊಡನೆ ಒಂದಾಗಿ ಬದುಕುವ ವ್ಯವಧಾನ ಯಾರಿಗೂ ಇಲ್ಲದಂತಾಗಿದೆ ಕೂಡು ಕುಟುಂಬಗಳಲ್ಲಿರುವ ಸಂತೋಷ,ಪ್ರೀತಿ,ವಾತ್ಸಲ್ಯ, ಭಾವನಾತ್ಮಕ ಸಂಭಂದಗಳ ಬೆಲೆಯೂ ಇಂದಿನವರಿಗೆ ಗೊತ್ತಾಗುತ್ತಿಲ್ಲವೇಕೆ? ತಂದೆ ತಾಯಿಗಳನ್ನೇ ದೇವರೆಂದು ಪೂಜಿಸುತ್ತಿದ್ದ ಕಾಲ ಹೊರಟು ಹೋಯಿತೇ? ಇಂದಿನ ಯುವಪಿಳಿಗೆಗೆ ತಾವು ಕೂಡಾ ಮುಂದೊಂದು ದಿನ ವೃದ್ಯಾಪ್ಯ ಹಂತವನ್ನು ತಲುಪುತ್ತೆವೆಂಬ ಕನಿಷ್ಠ ಸಾಮಾನ್ಯ ಜ್ಞಾನವು ಇಲ್ಲವೇ?
“ಸೊಸಿ ಬಂದು ಒಂದು ವರುಷದಾಗ ನನ್ನ ಮಗ ಬ್ಯಾರಿ ಆದ” ಎಂಬ ಜಾನಪದ ಗೀತೆಯು ತಾಯಿಯ ಮನಕಲುಕುವ ನೋವನ್ನು ಎತ್ತಿತೋರಿಸುತ್ತಿದೆ ತನ್ನ ಮಗ ತನ್ನನ್ನು ಚೆನ್ನಾಗಿ ಜೋಪಾನ ಮಾಡುತ್ತಾನೆಂಬ ಆಕೆಯ ಕನಸನ್ನು ನುಚ್ಚು ನೂರಾಗಿಸುವ ಇಂಥಹ ಮಕ್ಕಳು ಇದ್ದೂ ಸತ್ತಂತೆಯೇ.

ಪರಿಹಾರೋಪಾಯಗಳು:-
ವಯಸ್ಸಾಗುತ್ತಾ ಹೋದಂತೆ ಗೊಂದಲ,ಖಿನ್ನತೆ, ಮಲಮೂತ್ರ ನಿಯಂತ್ರಣದಲ್ಲಿ ಇರದಿರುವುದು,ಕಿವಿ ಮಂದವಾಗುವುದು,ದೃಷ್ಟಿ ಕಡಿಮೆಯಾಗುವುದು, ಮರೆವು ಇಂಥ ಆರೋಗ್ಯ ಸಮಸ್ಯೆಗಳು ತೋರಿಬರಬಹುದು.ಇದಕ್ಕೆ ಕಾರಣ ವೃದ್ಧಾಪ್ಯವಾದರೂ ಈ ಸಮಸ್ಯೆಗಳಿಗೆ ಚಿಕಿತ್ಸೆಗಳಿವೆ. ಇಂಥದ್ದೇನಾದರೂ ತೋರಿಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ವೈದ್ಯರ ಬಳಿ ಹೋಗಲು ಮಕ್ಕಳೇ ಮೊದಲ ಹೆಜ್ಜೆ ತಕ್ಕೊಳ್ಳಬೇಕಾಗಬಹುದು.ಮಾತ್ರವಲ್ಲ ಸಮಯ ಸಂದಂತೆ ಈ ಮುಂಚೆ ಹೆತ್ತವರು ಸ್ವತಃ ಮಾಡಿಕೊಳ್ಳುತ್ತಿದ್ದ ಕೆಲಸಗಳನ್ನು ಮಕ್ಕಳೇ ನಿರ್ವಹಿಸಬೇಕಾಗಬಹುದು ವೃದ್ಧ ಹೆತ್ತವರನ್ನು ಅತ್ಯುತ್ತಮವಾಗಿ ಆರೈಕೆ ಮಾಡಲಿಕ್ಕಾಗಿ ಮಕ್ಕಳು ಬೇರೆಯವರೊಂದಿಗೆ ಅವರ ಪರವಾಗಿ ಮಾತಾಡಬೇಕಾಗಬಹುದು,ಅವರ ಕಾಗದಪತ್ರಗಳನ್ನು ನಿರ್ವಹಿಸಬೇಕಾಗಬಹುದು, ಅವರನ್ನು ಎಲ್ಲಿ ಬೇಕೋ ಅಲ್ಲಿ ಕರೆದುಕೊಂಡು ಹೋಗಬೇಕಾಗುತ್ತದೆ.
ತುಂಬಾ ಕುಟುಂಬಗಳಲ್ಲಿ ಹೆತ್ತವರ ಆರೈಕೆ ಮಾಡುವುದರಲ್ಲಿ ಹೆಚ್ಚಿನ ಜವಾಬ್ದಾರಿ ಹತ್ತಿರದಲ್ಲಿ ವಾಸಿಸುತ್ತಿರುವ ಮಗ ಅಥವಾ ಮಗಳ ಹೆಗಲ ಮೇಲೆ ಬೀಳಬಹುದು ಹಾಗಿದ್ದರೂ ಆ ಮಗ ಅಥವಾ ಮಗಳು ಸಹ ಸಮತೂಕ ಮನೋಭಾವ ಇಟ್ಟುಕೊಳ್ಳಬೇಕು ಹೆತ್ತವರ ಆರೈಕೆ ಮಾಡುವಾಗ ತಮ್ಮ ಸ್ವಂತ ಕುಟುಂಬದ ಅಗತ್ಯಗಳನ್ನು ಅವರು ಅಲಕ್ಷಿಸಬಾರದು ಮಾತ್ರವಲ್ಲ ಎಷ್ಟು ಸಮಯ,ಶಕ್ತಿ ವ್ಯಯಿಸಬಹುದು ಎಂಬ ವಿಷಯದಲ್ಲಿ ಪ್ರತಿಯೊಬ್ಬರಿಗೆ ಅವರದ್ದೇ ಆದ ಮಿತಿಗಳಿರುತ್ತವೆ. ಇಲ್ಲವೆ ಆರೈಕೆ ಮಾಡುತ್ತಿರುವ ಮಗ ಅಥವಾ ಮಗಳ ಪರಿಸ್ಥಿತಿ ಇದ್ದ ಹಾಗೇ ಇರಲಿಕ್ಕಿಲ್ಲ, ಬದಲಾಗಬಹುದು ಹಾಗಾಗಿ ಆರೈಕೆಯ ಏರ್ಪಾಡನ್ನು ಬದಲಾಯಿಸಬೇಕಾಗಬಹುದು.
ವಯಸ್ಸಾದ ಹೆತ್ತವರನ್ನು ಆರೈಕೆ ಮಾಡುವ ಜವಾಬ್ದಾರಿ ಒಂದು ಚಿಕ್ಕ ವಿಷಯವಲ್ಲ ಅದನ್ನು ಪೂರೈಸುವುದು ದಿನಕಳೆದಂತೆ ಕಷ್ಟವಾಗಬಲ್ಲದು, ಭಾವನಾತ್ಮಕವಾಗಿ ಬಳಲಿಸಬಲ್ಲದು ಅವರ ಆರೈಕೆ ಮಾಡುವಾಗ ಬರುವ ಸಮಸ್ಯೆಗಳನ್ನು ನಿಭಾಯಿಸಲು ಎಲ್ಲರಿಗೆ ಅನ್ವಯವಾಗುವ ನಿರ್ದಿಷ್ಟ ನಿಯಮಗಳಿಲ್ಲ ಹಾಗಿದ್ದರೂ ಮುಂಚಿತ ಯೋಜನೆ, ಪರಸ್ಪರ ಸಹಕಾರ,ಮುಕ್ತ ಸಂವಾದ ಮಾಡುವುದರಿಂದ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದ ಹೃತ್ಪೂರ್ವಕ ಪ್ರಾರ್ಥನೆ ಮಾಡುವ ಮೂಲಕ ಈ ಜವಾಬ್ದಾರಿಯನ್ನು ನೀವು ಉತ್ತಮವಾಗಿ ಹಾಗೂ ನಿಮ್ಮ ಪ್ರಿಯ ವೃದ್ಧ ಹೆತ್ತವರಿಗೆ ಗೌರವ ತೋರಿಸುವಂಥ ರೀತಿಯಲ್ಲಿ ಪೂರೈಸಲು ಸಾಧ್ಯವಿದೆ ಆಗ ಅವರಿಗೆ ಬೇಕಾದಂಥ ಕಾಳಜಿ,ಆರೈಕೆ ಸಿಗುತ್ತಿದೆ ಎಂಬ ಸಂತೃಪ್ತಿ ನಿಮಗಿರುವುದು ಮಾತ್ರವಲ್ಲ ಮುಖ್ಯವಾಗಿ ಹೆತ್ತವರನ್ನು ಸನ್ಮಾನಿಸುವ ನಿಮಗೆ ಸಂತೃಪ್ತ ಮನಶ್ಶಾಂತಿಯು ಸಿಗಬಲ್ಲದು.
ಅಷ್ಟೇ ಅಲ್ಲ ಈ ಭೂಮಿಯ ಮೇಲೆ ಹುಟ್ಟಿದ್ದು ಸಾರ್ಥಕವಾದಂತಾಗುತ್ತದೆ ಎಂಥಹ ಮಕ್ಕಳನ್ನು ಪಡೆದಿದ್ದೇನೆಂಬ ಹೆಮ್ಮೆ ಅವರದಾಗಲಿ.ಅವರ ಆಶೀರ್ವಾದದ ಪ್ರತಿಫಲವೇ ಸುಖ ಸಂಸಾರಕ್ಕೆ ಎಡೆಮಾಡಿಕೊಡುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಹಿರಿಯರನ್ನು ಆಧರಿಸಿ,ಗೌರವಿಸಿ.
ಯುವದಂಪತಿಗಳೆಲ್ಲರೂ ಹೀಗೇಯೇ ಪಾಲಕರನ್ನು ಮನೆಯಿಂದ ಹೊರಹಾಕುತ್ತಾ ಹೋದಲ್ಲಿ ಮುಂದೊಂದು ದಿನ ಪ್ರತಿಯೊಂದು ಊರುಗಳಲ್ಲಿ ನೂರಾರು ವೃದ್ಧಾಶ್ರಮಗಳನ್ನು ತೆರೆಯುವ ಕಾಲ ಸನ್ನಿಹಿತವಾಗಬಹುದು.
ಆದ್ದರಿಂದ ಮಕ್ಕಳಿಗೆ ಚಿಕ್ಕವರಿದ್ದಾಗಲೇ ಒಳ್ಳೆಯ ಸಂಸ್ಕಾರ,ಸಂಸ್ಕೃತಿಯನ್ನು ಕಲಿಸಿಕೊಡಬೇಕು ಅತ್ತೆ ಮಾವಂದಿರನ್ನು ಜೋಪಾನ ಮಾಡುವ ಸದ್ಭುದ್ದಿಯನ್ನು ಹೆಣ್ಣುಮಕ್ಕಳಿಗೆ ಪಾಲಕರು ಕಲಿಸಿಕೊಡಬೇಕು ಪ್ರಾಥಮಿಕ ಶಾಲಾ ಹಂತದಿಂದಲೇ ಗುರು ಹಿರಿಯರಿಗೆ ಗೌರವ ಕೊಡುವ,ಸಾಕಿ ಸಲುಹುವ ಪರಿಣಾಮಕಾರಿ ಪಠ್ಯಕ್ರಮ ಜಾರಿಗೆ ಬರಬೇಕಾಗಿದೆ ತನ್ನ ಜೀವನದಲ್ಲಿ ಅರ್ಧಾಂಗಿನಿಯಾಗಿ ಬಂದವಳನ್ನು ಕಡೆಗಣಿಸದೇ,ವಿಶ್ವಾಸಕ್ಕೆ ತೆಗೆದುಕೊಂಡು ಪರಸ್ಪರರು ಅರ್ಥೈಸಿಕೊಂಡು ಪಾಲಕರನ್ನು, ಪೋಷಕರನ್ನು,ಹಿರಿಯರನ್ನು ಗೌರವಯುತವಾಗಿ ಆಧರಿಸಿ‌.ಆಗ ಸುಖಸಂಸಾರ ನಮ್ಮದಾಗಿ ನೆಮ್ಮದಿ ಕಾಣುವುದರಲ್ಲಿ ಸಂಶಯವೇ ಇಲ್ಲ.
ಈ ನಿಟ್ಟಿನಲ್ಲಿ ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ದೃಢಸಂಕಲ್ಪ ಮಾಡೋಣ ಬನ್ನಿ..!ಎಲ್ಲರೂ ಕೈ ಜೋಡಿಸಿ, ಹಿರಿಯರ ಸೇವೆಗೆ ಸನ್ನದ್ಧವಾಗಲಿ ನಮ್ಮೆಲ್ಲರ ಮೈ-ಮನಗಳು…!
-ಶ್ರೀನಿವಾಸ.ಎನ್.ದೇಸಾಯಿ ಶಿಕ್ಷಕರು.
ಮೊ.ನಂ:9845808941

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

2 Responses

Leave a Reply

Your email address will not be published. Required fields are marked *

ಇದನ್ನೂ ಓದಿ