ಮುಂಡಗೋಡ: ತಾಲೂಕಿನ ಮಳಗಿ ಭಾಗದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನ ನಡೆಸಿದ್ದ ಹಾನಗಲ್ ಮೂಲದ ಸಲ್ಮಾನ್ ಖಾನ್ ಆಲೂರು ಎಂಬಾತನನ್ನು ಬಂಧಿಸಿದ್ದಾರೆ.
ಮಳಗಿ ಸಮೀಪ ಸುಮಾರು ಎರಡು ಕೆಜಿ ಯಷ್ಟು ಗಾಂಜಾ ಸಮೇತ ರೆಡ್ ಹ್ಯಾಂಡ್ ಆಗಿ ಮುಂಡಗೋಡ ಪೊಲೀಸರು ಹಿಡಿದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ
ಈ ವೇಳೆ ಮುಂಡಗೋಡ ಪೊಲೀಸ್ ಠಾಣೆ ಸಿಪಿಐ ಬಿ ಏಸ್ ಲೋಕಾಪುರ, ಪಿಎಸ್ಐ ಯಲ್ಲಾಲಿಂಗ ಕುನ್ನುರು, ಕ್ರೈಮ್ ವಿಭಾಗದ ಪಿ ಏಸ್ ಐ ಹನಮಂತಪ್ಪ ವಡಗುಂಟಿ,ತಿರುಪತಿ ಹೊನ್ನಳ್ಳಿ,ಬಸವರಾಜ್ ಲಮಾಣಿ ಹಾಗೂ ಸಂಜು ರಾಥೋಡ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.



















