ತ
ಶಹಾಪುರ:ವಕೀಲರ ಸಂಘದ ವತಿಯಿಂದ ಇಂದು ನ್ಯಾಯಾಲಯದ ಆವರಣದಲ್ಲಿ ಜನನ,ಮರಣ ನೋಂದಣಿ ಕಾಯ್ದೆ ಕೇಂದ್ರ ಸರ್ಕಾರ ಕಳೆದ 1ರಿಂದ ಜಾರಿಗೆ ತಂದಿರುವುದು ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಆಗ್ರಹಿಸಿ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ನೋಂದಣಿ ಕಾಯ್ದೆ ಜಾರಿಗೊಳಿಸುವ ಮುಂಚೆ ನಿಗದಿಪಡಿಸಿದ ಕಾಲಾವಧಿಯಲ್ಲಿ ನೋಂದಣಿ ಮಾಡದಿದ್ದರೆ ಜನನ ಮರಣ ಪ್ರಮಾಣ ಪತ್ರಗಳನ್ನು ನ್ಯಾಯಾಲಯದಲ್ಲಿ ಕಕ್ಷಿದಾರರು ಪಡೆದುಕೊಳ್ಳುತ್ತಿದ್ದರು ಈ ತಿದ್ದುಪಡೆ ಕಾಯ್ದೆ ಉಪ ವಿಭಾಗಾಧಿಕಾರಿಗಳ ಬಳಿ ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರಮಾಣಪತ್ರ ಪಡೆಯಲು ಕಾಲ ಅವಕಾಶ ನೀಡಿದೆ.
ಸರಕಾರದ ನಡೆ ಸರಿಯಾದುದಲ್ಲವೆಂದು ಅಖಿಲ ಭಾರತೀಯ ವಕೀಲರ ಒಕ್ಕೂಟದ ತಾಲೂಕ ಘಟಕದ ಸಂಚಾಲಕರಾದ ಆರ್.ಚನ್ನಬಸ್ಸು ಹಾಗೂ ಸಯ್ಯದ್ ಇಬ್ರಾಹಿಂ ಸಾಬ್ ಜಮಾದಾರ ಹೇಳಿದರು. ಇಲ್ಲಿಯವರೆಗೆ ಆಯಾ ನ್ಯಾಯಾಲಯಕ್ಕೆ ಸ್ಪಷ್ಟವಾಗಿ ಮಾಹಿತಿ ಬಂದಿರುವುದಿಲ್ಲ ಜನನ,ಮರಣ ನೋಂದಣಿ ಅರ್ಜಿಯನ್ನು ದಾಖಲಿಸಿಕೊಳ್ಳುತ್ತಿಲ್ಲ.
ಪ್ರಮಾಣ ಪತ್ರಗಳನ್ನು ಪಡೆಯಲು ದಾಖಲೆಗಳು ಮತ್ತು ತಗಲುವ ವೆಚ್ಚ ಹಾಗೂ ಎಷ್ಟು ದಿನದಲ್ಲಿ ಪ್ರಮಾಣ ಪತ್ರ ನೀಡಬೇಕು ಎಂಬ ಸ್ಪಷ್ಟವಾದ ಮಾಹಿತಿ ಕಕ್ಷಿದಾರರಿಗೆ ಇಲ್ಲದಂತಾಗಿದೆ ಇದು ಬಹಳಷ್ಟು ತೊಂದರೆಯಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ್,ಹಿರಿಯ ವಕೀಲರಾದ ಹನುಮೇಗೌಡ ಮರಕಲ್,ರಮೇಶ್ ದೇಶಪಾಂಡೆ,ವಿಶ್ವನಾಥರಡ್ಡಿ ಸಾಹು,ಯುಸುಫ್ ಸಿದ್ದಿಕಿ,ಮಲ್ಕಪ್ಪ ಪಾಟೀಲ್,ಸಿದ್ದು ಪಸ್ಪೂಲ್, ಜೈಲಾಲ ತೋಟದ ಮನೆ,ಶರಣಪ್ಪ ಹೊಸಮನಿ, ರಮೇಶ್ ಸೇಡಂಕರ್,ಶರಬಣ್ಣ ರಸ್ತಾಪುರ,ಮಲ್ಲಪ್ಪ ಪೂಜಾರಿ,ಸಂದೀಪ್ ದೇಸಾಯಿ,ದೇವರಾಜ ಚಟ್ಟಿ,ವಿನೋದ್ ದೊರಿ, ಚೇತನ್ ಹಿರೇಮಠ,ಅಮರೇಶ ಇಟಗಿ, ಭೀಮರಾಜ,ನಾಗರಡ್ಡಿ,ಚೆನ್ನಬಸಪ್ಪ ಬೆನಕ, ಮಲ್ಲರಾಯ,ರಾಜೇಂದ್ರ ಸಾಗರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್