ಕಲಬುರಗಿ/ಯಡ್ರಾಮಿ:ಜಯ ಕರ್ನಾಟಕ ಸಂಘಟನೆ ಯಡ್ರಾಮಿ ತಾಲೂಕ ಘಟಕದ ವತಿಯಿಂದ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಚಂದ್ರು ಮಲ್ಲಾಬಾದ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ
ಯಡ್ರಾಮಿಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮವನ್ನು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತೇಶ ಪುರಾಣಿಕ ಅವರು ನೆರೆವೇರಿಸಿದರು.
ನಂತರ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ತಾಲೂಕ ಆಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಯಡ್ರಾಮಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು,
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಮೈಬುಬು ಬಿರಾಳ,ಮೌನೇಶ ಪಾಟೀಲ,ರಾಚು ತಳವಾರ,ವೀರೇಶ ಪಾಟೀಲ ಕಡುಕೋಳ,ಹಮೀರ ಅಲಿ,ಅಮರ ಕುಸ್ತಿ,ಸೋಮು ಬಿರಾದಾರ,ಮಲ್ಲನ ಗೌಡ ನಂದಿಹಳ್ಳಿ,ಚಂದ್ರಶೇಖರ ಬಳಬಟಿ,ಮೌನೇಶ ಬಡಿಗೇರ,ಬರತ್ ದೊರೆ,ಪ್ರಕಾಶ್ ಮಾರಡಗಿ,ಸುರೇಶ್ ಶಿವಪುರ,ಸುನಿಲ್ ನಂದಿಹಳ್ಳಿ,ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಪದಾಧಿಕಾರಿಗಳು,ನಗರ ಘಟಕ, ವಲಯ ಘಟಕ ಹಾಗೂ ಗ್ರಾಮ ಘಟಕದ ಎಲ್ಲಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.