ಕಲಬುರಗಿ:ಮುಸ್ಲಿಂ ವೃತ್ತಿಪರರ ಸಂಘವು ಕೆಬಿಎನ್ ವಿವಿಯ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ಶಿಬಿರ ಶುಕ್ರವಾರ ಕೆಬಿಎನ್ ವಿವಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶನಿವಾರದ ಉದ್ಯೋಗ ಮೇಳದ ಸಂದರ್ಶನಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ದಪಡಿಸುವುದು ಈ ತರಬೇತಿಯ ಉದ್ದೇಶವಾಗಿತ್ತು.
ಯೋಜನಾ ವ್ಯವಸ್ಥಾಪಕ ಜಿಲ್ಹಾನಿ ಇವರು ವಿದ್ಯಾರ್ಥಿಗಳಿಗೆ ಸಂದರ್ಶನದ ತಂತ್ರಗಳು,ಸ್ವವಿವರ ತಯಾರಿಕೆ,ಉಡುಗೆ,ಪಾದರಕ್ಷೆ,ಭಾಷಾ,ಸಂವಹನ ಕೌಶಲ್ಯ,ಆತ್ಮ ವಿಶ್ವಾಸ,ಸಾಧ್ಯತೆ ಪ್ರಶ್ನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಜೊತೆಗೆ ವಿವರಿಸಿದರು.
ವಿದ್ಯಾರ್ಥಿಗಳನ್ನು ವೇದಿಕೆಗೆ ಆಹ್ವಾನಿಸಿ ಅಣುಕು ಸಂದರ್ಶನವನ್ನು ನಡೆಸಿದರು ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗುವ ಪ್ರತಿ ವಿವರ ಈ ತರಬೇತಿಯಲ್ಲಿತ್ತು.
ವಿದ್ಯಾರ್ಥಿ ಮಾಜೀದ ಪ್ರಾರ್ಥಿಸಿದರೆ,ಜೈವಿಕ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ.ಮುಜೀಬ ನಿರೂಪಿಸಿದರು.
ಕೆಬಿಎನ್ ವಿವಿಯ ಇಂಜಿನಿಯರಿಂಗ್,ಮೆಡಿಕಲ್, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ:ಅಪ್ಪಾರಾಯ ಬಡಿಗೇರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.