ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತುಂಗಭದ್ರಾ ನದಿ ತಟದಲ್ಲಿರುವ ಬಾಗೇವಾಡಿ ಗ್ರಾಮವು ಸಿರುಗುಪ್ಪ ನಗರ ಕೇಂದ್ರದಿಂದ ಕೇವಲ ಹತ್ತು ಕಿಲೋ ಮೀಟರ್ ದೂರವಿದ್ದು ನಗರಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ತೀವ್ರ ಬಸ್ಸಿನ ತೊಂದರೆಯಾಗಿದೆ
ಈ ಗ್ರಾಮಕ್ಕೆ ಆಗಮಿಸುವ ಬಸ್ಸುಗಳು ವತ್ತಮುರಣಿ ಹಚ್ಚೊಳ್ಳಿ ಚಿಕ್ಕಬಳ್ಳಾರಿ ಕುಡುದರಹಾಳು ಮಾರ್ಗವಾಗಿ ಆಗಮಿಸುವುದರಿಂದ ಅಲ್ಲಿಂದಲೇ ಬಹುತೇಕ ಎಲ್ಲಾ ಬಸ್ ಗಳ ಆಸನಗಳು ಭರ್ತಿಯಾಗಿರುತ್ತವೆ ಅಲ್ಲದೆ ನಿಂತು ಪ್ರಯಾಣ ಮಾಡಲಿಕ್ಕೂ ಆಗದಷ್ಟು ಬಸ್ ಗಳು ಭರ್ತಿಯಾಗಿರುತ್ತವೆ
ಈ ಬಾಗೇವಾಡಿ ಗ್ರಾಮದಿಂದ ಸಿರುಗುಪ್ಪ ನಗರಕ್ಕೆ ಆಗಮಿಸಲು ಶಾಲಾ ಮಕ್ಕಳು ಅಲ್ಲದೆ ಅನೇಕರಿಗೆ ತುಂಬಾ ತೊಂದರೆಯಾಗುತ್ತಿದೆ ಗರ್ಭಿಣಿ ಸ್ತ್ರೀಯರು ವೃದ್ಧರು ಮಹಿಳೆಯರು ಹಾಗೂ ವಿಶೇಷ ಚೇತನರಿಗೆ ಬಸ್ಸುಗಳನ್ನು ಹತ್ತಲು ಆಗುತ್ತಲೇ ಇಲ್ಲ ಕಾರಣ ವಾಹನಗಳಲ್ಲಿ ಜೋತು ಬೀಳುವ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ತುಂಬಿರುತ್ತಾರೆ ಇಂದು ಇಂತಹುದೇ ಘಟನೆ ನಡೆದು ವಿಶೇಷಚೇತನ ವ್ಯಕ್ತಿಯೊಬ್ಬ ತನಗೆ ಬಸ್ಸಿನಲ್ಲಿ ಪ್ರಯಾಣ ಮಾಡಲು ಆಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸುತ್ತ ಬಸ್ಸಿಗೆ ಅಡ್ಡ ನಿಂತು ಪ್ರತಿಭಟನೆ ಮಾಡಿದ ಘಟನೆ ಜರುಗಿತು ಈ ಸಂದರ್ಭದಲ್ಲಿ ನಿರ್ವಾಹಕ ಚಾಲಕ ಮತ್ತು ವ್ಯಕ್ತಿಗೆ ಮಾತುಗಳ ಚಕಮಕಿ ನಡೆಯಿತು
ಘಟನೆ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಸೂಕ್ತ ಸಮಯಕ್ಕೆ ಬಸ್ ಗಳ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ನೀಡಬೇಕೆಂದು ಪ್ರಯಾಣಿಕರ ಆಗ್ರಹ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.