ನಾನೊಂದು ಕಡೆದೂರ ನೀನೊಂದು ಕಡೆತೀರ
ನಮ್ಮಿಬ್ಬರ ನಡುವೆ ಇದೆ ಸನಿಹ ಅಜಗಜಾಂತರ.!!
ಹೃದಯ ಹೃದಯಕಂತರ
ಭಾವ ಬೆರೆಯುವ ಕಾತರ
ಮನಸಿಗೇಕೆ ಮುಜಗರ
ಆಸೆಗೊಂದೆ ಅವಸರ.!!
ಘನತೆ ಎಂಬ ಗಾಡಿಯು
ಸಮಸ್ಯೆ ಎಂಬ ನಾಡಿಯು
ದುಃಖದಲ್ಲಿ ಮಿಡಿಯಿತು
ಕಷ್ಟ ಕಡೆಗೆ ಕರೆಯಿತು.!!
ಗಳಿಕೆ ಎಂಬ ಮೋಹಕೆ ಬಿದ್ದೆ ಅದರ ಜಾಲಕೆ
ಜೀವನವೆಂಬ ಜತೀಗೆಯು
ಬೀಗಿದಿದೆನ್ನ ಕುತಿಗೆಯು.!!
ಬಾಳು ಎಂಬ ದಾರಿಯಲಿ
ಅರಿಯದೆಂಗ ಸಾಗಲಿ
ಕ್ಷಣಿಕಸುಖದ ಬಂಡಿ ಏರಿದೆ
ಬದುಕನರಿಯದೆ ಬಿಕ್ಕಿದೆ !!
ದೇವನೊಬ್ಬ ನಾಯಕ
ಕಾಯುದವನ ಕಾಯಕ
ಜೀವನವೆಂಬ ಪಾಠವ
ಬದುಕೇ ಚದುರಂಗಆಟವು.
-ಪಿ.ಬಿ.ಕಮ್ಮಾರ ಐಹೊಳೆ