ವಡಗೇರಾ:ಪಟ್ಟಣದ ತುಮಕೂರು ವಡಗೇರಾ ಮಾರ್ಗ ಮಧ್ಯೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದಲ್ಲಿ ಯಾದಗಿರಿ ವಡಗೇರಾ ಬೆಂಡೆಬೆಂಬಳಿ ಮಾರ್ಗದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸಿನ ಸ್ಟೇರಿಂಗ್ ರಾಡ್ ಮುರಿದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಹೋಗಿ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳಾಗಿಲ್ಲ.
ಈ ಬಸ್ಸಿನಲ್ಲಿ ಸಾರ್ವಜನಿಕರು ಹಾಗೂ ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ,ಈ ಘಟನೆಗೆ ನಮ್ಮ ಭಾಗಕ್ಕೆ ಹಳೆಯದಾದ ಗುಜರಿ ಬಸ್ಸುಗಳು ಓಡಿಸುತ್ತಿರುವುದು ಪ್ರಮುಖ ಕಾರಣ ಎಂದು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರು ಕೂಡಾ ಯಾವುದೇ ಪ್ರಯೋಜನವಾಗಿಲ್ಲ.
ತಾಲೂಕು ಕೇಂದ್ರದಲ್ಲಿ ಸರಕಾರಿ ಕಾಲೇಜು ಇಲ್ಲದೆ ಇರುವುದರಿಂದ ಈ ಭಾಗದಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ವಿದ್ಯಾಭ್ಯಾಸ ಮಾಡಲು ಹೋಗುತ್ತಾರೆ ಆದರೆ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ಅನುಕೂಲವಿಲ್ಲ ಕಾರಣ ವಿದ್ಯಾರ್ಥಿಗಳು ಒಬ್ಬರ ಮೇಲೊಬ್ಬರು ಬಿದ್ದು,ಬಸ್ಸಿನ ಬಾಗಿಲಲ್ಲಿ ನಿಂತು ಸುಮಾರು ಸಲ ಪ್ರಯಾಣ ಮಾಡುತ್ತಾರೆ ಇದು ಅಪಾಯಕಾರಿ,
ಆದ್ದರಿಂದ ವಡಗೇರಾ ತಾಲೂಕುವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿ ವಡಗೇರಾ ದಿಂದ ಸುತ್ತಮುತ್ತಲಿನ ಹೋಬಳಿ ಹಾಗೂ ಹಳ್ಳಿಗಳಿಗೆ ಮತ್ತು ಯಾದಗಿರಿ ಇಂದ ವಡಗೇರಾಕ್ಕೆ ಸಿಟಿ ಬಸ್ ಕೂಡಲೇ ಆರಂಭಿಸಬೇಕು.
ಈ ಭಾಗಕ್ಕೆ ಚೆನ್ನಾಗಿರುವ ಬಸ್ಸುಗಳನ್ನು ಓಡಿಸಬೇಕು ಅಧಿಕಾರಿಗಳು ನಿರ್ಲಕ್ಷ ಮಾಡದೆ ವಡಗೇರಾ ತಾಲ್ಲೂಕಿನ ಜನರ ಭಾವನೆ ಕಷ್ಟ ಹಾಗೂ ನೋವುಗಳಿಗೆ ಸ್ಪಂದಿಸಿ ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದರು.
ಕಳೆದ ಎಂಟು ದಿನಗಳ ಹಿಂದೆ ಶಿವಪುರ ಗ್ರಾಮದಲ್ಲಿ ಬಸ್ಸು ಹಾಗು ಬೈಕು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಆಗಿದ್ದು,ಗ್ರಾಮೀಣ ಭಾಗದ ಒಳ ರಸ್ತೆಗಳಲ್ಲಿ ಹಳೆಯ ಗುಜರಿ ಬಸ್ಸುಗಳನ್ನು ಓಡಿಸಲಾಗುತ್ತಿದೆ ಈ ಬಸ್ಸುಗಳನ್ನು ಹಳ್ಳಿ ರಸ್ತೆಗಳಲ್ಲಿ ಓಡಿಸಲು ಸಾಧ್ಯವಿಲ್ಲ ಎಂದು
ತಾಲುಕಿಗೆ ಬರುವ ಡ್ರೈವರ್ ಹಾಗು ಕಂಡಕ್ಟರ್ ರುಗಳು ಚೇನ್ನಾಗಿರೋ ಬಸ್ ಕೊಡಿ ಎಂದು ಅಧಿಕಾರಿ ವರ್ಗದವರ ಹತ್ತಿರ ಸಾವಿರಾರು ಭಾರಿ ಬೇಡಿಕೊಂಡು ಸಾಕಾಗಿ ಹೋಗಿದೆ ಅವರುಗಳಿಗೆ, ಈಗ ಕಂಡಕ್ಟರ್ ಹಾಗು ಡ್ರೈವರ್ ಜೀವ ಕೈಯಲ್ಲಿ ಹಿಡಿದುಕೊಂಡು ನೌಕರಿ ಮಾಡುತ್ತಿದ್ದಾರೆ,
ಸಂಸ್ಥೆಯಲ್ಲಿ ಕೆಲವರು ಇನ್ನು ನಮ್ಮಗೆ ಇಂತಹ ನೌಕರಿಯೇ ಬೇಡ ಏನ್ನುವ ಪರಿಸ್ಥಿತಿಯಲ್ಲಿ ಇದ್ದಾರೆ,
KKRTC ಆಡಳಿತ,ಅಧಿಕಾರಿಗಳು ಗಮನಹರಿಸಿ ವಿಷಯ ಗಂಭೀರತೆಯನ್ನು ಪಡೆದು ಅನಾಹುತ ಆಗುವದನ್ನು ತಪ್ಪಿಸಬೇಕು
ವರದಿ:ಶಿವರಾಜಸಾಹುಕಾರ ವಡಗೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.