ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮುಂಡಗೋಡದಲ್ಲಿ ಆತಂಕವಿಲ್ಲದೆ ನಡೆಯುತ್ತಿರುವ ಗೋಮಾಂಸ ದಂಧೆ:ಅಕ್ರಮಕ್ಕೆ ಬೆಂಗಾವಲು ಆದರಾ ಆ ಇಲಾಖೆಯ ಸಿಬ್ಬಂದಿ

ಮುಂಡಗೋಡ:ಅಕ್ರಮ ಚಟುವಟಿಕೆಗಳು ಸಂಬಂಧಪಟ್ಟ ಇಲಾಖೆಗಳ ದೃಷ್ಟಿಗೆ ಬೀಳದೆ ಅಷ್ಟು ಸುಲಭವಾಗಿ ಯಾವುದೇ ನಗರಗಳಲ್ಲಿ ನಡೆಯುವುದಿಲ್ಲ,ಅದರಲ್ಲೂ ಮುಂಡಗೋಡ ತಾಲೂಕಿನಲ್ಲಿ ನಡೆಯುವ ಅಕ್ರಮ ಗೋಮಾಂಸ ದಂಧೆ ಬಗ್ಗೆ ಕೇಳಿದರೆ ಕ್ಷಣಕಾಲ ಯಾರಾದರೂ ಸಹ ಬೆಚ್ಚಿ ಬೀಳಬಹುದು.
ದಿನವೊಂದಕ್ಕೆ ಬೇಕು 5 ಗೋವುಗಳ ಮಾಂಸ!

ಮುಂಡಗೋಡ ನಗರ ಹಾಗೂ ಟಿಬೆಟಿಯನ್ ಕಾಲೋನಿಗಳ ಕೆಲ ಬಿರಿಯಾನಿ ಹೋಟೆಲ್ ಗಳಲ್ಲಿ ಮಮ್ಮು ಎಂದರೆ ಸಾಕು ಕಣ್ಣೆದುರಿಗೆ ಬಂದು ಬಿಡುತ್ತೆ,ಗೋಮಾಂಸದ ಬಿರಿಯಾನಿ.ಅದರಲ್ಲೂ ಟಿಬೆಟಿಯನ್ ಕಾಲೊನಿಯಲ್ಲಿ ಗೋಮಾಂಸ ಇಲ್ಲದಿದ್ದರೆ ಕೆಲ ಮಂದಿಗೆ ಊಟವೇ ಸೇರುವುದಿಲ್ಲ, ಎನ್ನುವ ಪರಿಸ್ಥಿತಿ ಇದೆ ಅಷ್ಟಕ್ಕೂ ಎಷ್ಟೇ ದುಬಾರಿ ಯಾದರೂ ಮುಂಡಗೋಡ ನಗರ ಹಾಗೂ ಟಿಬೆಟಿಯನ್ ನಿರಾಶ್ರಿತ ಕಾಲೊನಿ ಗಳ ಹೋಟೆಲ್ ಗಳಿಗೆ ಸಪ್ಲೈ ಆಗುವುದು ತಪ್ಪುತ್ತಿಲ್ಲ ಟಿಬೆಟಿಯನ್ ಕಾ ಎಲ್ಲಾ ಹೋಟೆಲ್ ಗಳಲ್ಲಿ ಮಮ್ಮುಫುಲ್ ಫೇಮಸ್.

ಅಕ್ರಮ ನಿಲ್ಲಿಸಬೇಕಾದವರು ಏನು ಮಾಡುತ್ತಿದ್ದಾರೆ!?

ಕರ್ನಾಟಕ ಸರ್ಕಾರ ನೂತನ ಗೋಹತ್ಯೆ ಕಾಯ್ದೆ ಮೂಲಕ ಗೋವುಗಳನ್ನು ಜಾನುವಾರುಗಳನ್ನು ವಧೆ ಮಾಡುವುದನ್ನು ನಿಷೇಧ ಮಾಡಿದ್ದರೂ, ಮುಂಡಗೋಡ ತಾಲೂಕಿನಲ್ಲಿ ಅಕ್ರಮ ಗೋಮಾಂಸ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಇದನ್ನು ನಿಯಂತ್ರಣ ಮಾಡಬೇಕಿದ್ದ ಜವಾಬ್ದಾರಿಯುತ ಸ್ಥಾನದಲ್ಲಿರುವ ಆ “ಮಹಾಶಯ”ನ ಕೃಪಾ ಕಟಾಕ್ಷದಿಂದ ನಿರ್ಭಿತಿ ಯಾಗಿ ಮುಂಡಗೋಡ ತಾಲೂಕಿನಲ್ಲಿ ಗೋಮಾಂಸ ದಂಧೆ ವ್ಯಾಪಕವಾಗಿ ಬೆಳೆದಿದೆ ಹಾಗೂ ದಿನವೊಂದಕ್ಕೆ ಎಷ್ಟು ದನ ಕಡಿಯಬೇಕು ಎಷ್ಟು ಮಾಲ್ ಮುಂಡಗೋಡಕ್ಕೆ ತರಬೇಕು,ತರುವಾಗ ಯಾವ ವಾಹನದಲ್ಲಿ ತರಬೇಕು,ರೈಡ್ ಆಗುವ ಪ್ರಸಂಗ ಬಂದರೆ ಯಾವ ರೀತಿ ಎಸ್ಕೇಪ್ ಆಗಬೇಕು, ಹಾಗೂ ದಂಧೆ ಮಾಡುವ ಜನರಿಂದ ಎಷ್ಟು ಮಾಮೂಲಿ ಪಡೆಯಬೇಕು ಎನ್ನುವ ಎಲ್ಲಾ ರೀತಿಯ ಮಾಹಿತಿ ಇರುವ ಆ “ಮಹಾಶಯ” ಗೋ ಮಾಂಸ ದಂಧೆಗೆ ಯಾವುದೇ ರೀತಿಯ ತೊಂದರೆ ಬರದಂತೆ ನೋಡಿಕೊಳ್ಳುತ್ತಿರುವುದೆ ಆತನ ಪಾಲಿಗೆ ದೊಡ್ಡ ಸಾಧನೆ ಆಗಿದೆ.

ಎಲ್ಲಿಂದ ಬರುತ್ತಿದೆ ಗೋಮಾಂಸ..!?

ಮುಂಡಗೋಡ ನಗರ ಭಾಗದಲ್ಲಿ ಸಹ ವಧೆ ಮಾಡುವ ಅಡ್ಡೆಗಳಿದ್ದು ಹಾಗೂ ಹಾನಗಲ್, ಮೈನಲ್ಲಿ,ತಡಸ,ಸವಣೂರು,ಬಂಕಾಪುರಗಳಿಂದ ಗೋಮಾಂಸ ಸಾಗಾಟವಾಗುತ್ತಿದ್ದು ಯಾವಾಗ ರೈಡ್ ಮಾಡಲಾಗುತ್ತದೆ ಎನ್ನುವುದನ್ನು ನೋಡಿಕೊಂಡು ದಂಧೆ ದಾರರಿಗೆ ಮಾಹಿತಿ ನೀಡುವ ಆ ಮಹಾಶಯನಿಂದ ದಂಧೆದಾರರು ನೀನು ತಿನ್ನು, ನಾನು ತಿನ್ನುತ್ತೇನೆ ಎನ್ನುತ್ತಿದ್ದಾರೆ ಅದರಲ್ಲೂ ದೊಡ್ಡ ದೊಡ್ಡ ವಾಹನಗಳಲ್ಲಿ ತಂದರೆ ಮಾಹಿತಿ ತಿಳಿಯುತ್ತದೆ ಎಂಬ ಭೀತಿ ಬೈಕ್ ಹಾಗೂ ಸೋಮವಾರದ ತರಕಾರಿ ವಾಹನಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಪ್ಯಾಕೆಟ್ ಮಾಡಿಕೊಂಡು ತರಲಾಗುತ್ತಿದೆ.

ಯಾರವನು ಮಹಾಶಯ!?

ಸರ್ಕಾರದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆ ಮಹಾಶಯ ಮಾಡಿಕೊಂಡಿರುವ ಗಂಟು ನೋಡಿದರೆ ಸಾಕು ತಿಳಿಯುತ್ತದೆ,ಯಾವ ಮಟ್ಟಿಗೆ ಆತ ಮುಂಡಗೋಡದಲ್ಲಿ ಕಮಾಯಿ ಮಾಡಿರಬೇಕು ಎಂದು ತನ್ನ ಕಮಾಯಿ ಹಾಗೂ ಚಾಣಾಕ್ಷತನದಿಂದ ಯಾರ ಭಯವೂ ಇಲ್ಲದೆ “ಆ” ಸ್ಥಳಗಳಲ್ಲಿ ಆ ಜನರನ್ನು ಹೆದರಿಸಿ,ಬೆದರಿಸಿ ಬ್ಲಾಕ್ ಮೇಲ್ ಮಾಡುವ ಆತ ಮುಂಡಗೋಡದಲ್ಲೇ ವರ್ಲ್ಡ್ ಫೇಮಸ್ ಆಗಿದ್ದಾನೆ.

ಯಾವಾಗ ಬರುತ್ತೆ ಸರಕು..!!?

ಸಾಮಾನ್ಯವಾಗಿ ಸೋಮವಾರ,ಬುಧವಾರ, ಶುಕ್ರವಾರ ಹಾಗೂ ರವಿವಾರ ಮುಂಡಗೋಡ ನಗರ ಹಾಗೂ ಟಿಬೆಟಿಯನ್ ಕಾಲೊನಿಗಳಿಗೆ ನೇರವಾಗಿ ಬರುವ ಸರಕು ಇಕೋ,ಓಮ್ನಿ,ಸುಮೋ ಹಾಗೂ ಸ್ಪ್ಲೆಂಡರ್,ಡಿಯೋ ಬೈಕ್ ಗಳ ಮೂಲಕ ರಾತ್ರಿ ವೇಳೆ ಸಾಗಾಟ ಮಾಡಲಾಗುತ್ತದೆ ಆಗೊಮ್ಮೆ ಈಗೊಮ್ಮೆ ನೆಪಕ್ಕೆ ಮಾತ್ರ ರೈಡ್ ಮಾಡಿದರು ವಶಪಡಿಸಿಕೊಳ್ಳುವ ಗೋಮಾಂಸದ ಪ್ರಮಾಣ ಕಡಿಮೆಯೇ.

ಕರ್ನಾಟಕ ಸರ್ಕಾರ ಅಮಾಯಕ ಜಾನುವಾರುಗಳ ತಳಿ ರಕ್ಷಣೆಗಾಗಿ ಮತ್ತು ಕಾಳಜಿಗಾಗಿ ಗೋಹತ್ಯಾ ನಿಷೇಧ ಜಾರಿಗೆ ತಂದರು ಜವಾಬ್ದಾರಿಯುತ ಸ್ಥಾನದಲ್ಲಿರುವ “ಮಹಾಶಯ” ನಂತವರು ಇದ್ದರೆ ಯಾವುದೇ ಕಾಯ್ದೆಗಳು ಪರಿಣಾಮಕಾರಿಯಾಗಿ ಜಾರಿಗೆ ಬರಲಾರವು,ಸರ್ಕಾರ ಗೋವುಗಳ ರಕ್ಷಣೆಗೆ ತೆಗೆದುಕೊಂಡ ಕ್ರಮಗಳನ್ನು ಸಂಬಂಧ ಪಟ್ಟ ಇಲಾಖೆಗಳು ಸೂಕ್ತವಾಗಿ ಮುಂಡಗೋಡ ದಲ್ಲಿ ಜಾರಿಗೆ ತರಬೇಕು ಎಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ ನಗರದ ಗೋರಕ್ಷಕರೊಬ್ಬರು ವ್ಯವಸ್ಥೆಯ ಬಗ್ಗೆ ಸಂಪೂರ್ಣ ಬೇಸರ ವ್ಯಕ್ತಪಡಿಸುತ್ತಾ ನಿಖರ ಮಾಹಿತಿಯನ್ನು ಕರುನಾಡ ಕಂದ ಮಾಧ್ಯಮಕ್ಕೆ ನೀಡಿದ್ದಾರೆ.
ಅದರಲ್ಲೂ ಈಗಂತೂ ಬಹಿರಂಗವಾಗಿಯೇ ಗೋವುಗಳನ್ನು ಮಾಂಸ ಉದ್ದೇಶಕ್ಕೆ ಬಳಸಲು ಹಗಲಿನಲ್ಲಿಯೆ ಟಾಟಾ ಏಸ್ ವಾಹನಗಳಲ್ಲಿ ಸಾಗಾಟ ಮಾಡಿದರೂ ಕೇಳುವವರು ಯಾರೂ ಇಲ್ಲದಾಗಿದೆ..!!??

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ