ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಕಾರ್ಯಕ್ರಮ ಅಂಗವಾಗಿ ಗೌರವಿತ ಉದ್ಘಾಟಕರಾಗಿ ಶ್ರೀ ರಮೇಶ್ ಗಾಣಿಗೇರಾ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ತಾಲೂಕು ಸೇವೆ ಸಮಿತಿ ಗಂಗಾವತಿ ಇವರು ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಚಾಲನೆ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮುಸಾಲಿ ಗುಂಡೂರು ಮಾತನಾಡಿ ಜನಸಾಮಾನ್ಯರಿಗೆ ಅರಿವನುಂಟು ಮಾಡಿ ಉಚಿತ ಕಾನೂನು ನೆರವು ಮತ್ತು ಸಲಹೆಗಳನ್ನು ನೀಡುವದು ಹಾಗೂ ಲೋಕ್ ಅಂದಲಕ್ ಮೂಲಕ ನ್ಯಾಯಾಲಯಗಳಲ್ಲಿ ಅಥವಾ ಇತರೆ ಕಚೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತರ್ಥಗೊಳಿಸುವುದು ಎಲ್ಲ ರಾಜ್ಯ ಮತ್ತು ಜಿಲ್ಲೆ ಕಾನೂನು ಸೇವೆಗಳ ಪದಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಉದ್ದೇಶವಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ಗೌರನಿತ ಶ್ರೀಮತಿ ಶ್ರೀದೇವಿ ದರಬಾರೆ ಪ್ರಧಾನ ಸೇವೆ ನ್ಯಾಯಾಧೀಶರು ಗಂಗಾವತಿ, ಶ್ರೀಮತಿ ಗೌರಮ್ಮ ಪಾಟೀಲ್ ಹೆಚ್ಚುವರಿ ನ್ಯಾಯಾಧೀಶರು ಗಂಗಾವತಿ, ಎಚ್ ಸಿ ಯಾದವ ಅಪಾರ ಸರಕಾರಿ ವಕೀಲರು, ಪರಸಪ್ಪ ನಾಯಕ ಉಪಾಧ್ಯಕ್ಷರು ವಕೀಲರ ಸಂಘ ಗಂಗಾವತಿ, ಎಚ್ ಎಮ್ ಮಂಜುನಾಥ, ವಿ.ಎನ್ ಪಾಟೀಲ್ ವಕೀಲರು ಗುಂಡೂರು,
ಬಿ.ಆಂಜನಪ್ಪ ವಕೀಲರು ಸಿಂಗನಾಳ,
ಕೇಶವ ನಾಯಕ ವಕೀಲರು,
ತಿರುಪತಿ ಬಾಬು ಮುಸಾಲಿ ಪ್ಯಾನಲ್ ವಕೀಲರು,
ಕಾರ್ಜುನಗೌಡ ವಕೀಲರು, ರಾಜಶೇಖರ್ ಹುಲಿಯಾಪುರ ವಕೀಲರು, ನಾಗನಗೌಡ ಪಾಟೀಲ್ ವಕೀಲರು,
ವೀರೇಶ್ ಬನ್ನಿಕಟ್ಟಿ ವಕೀಲರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಉಪಾಧ್ಯಕ್ಷರಾದ ರುದ್ರೇಶ್ ಬಿ. ಸಿಂಗನಾಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕನಕಪ್ಪ.ಎನ್ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಊರಿನ ಗ್ರಾಮದ ಹಿರಿಯರು ನಾಗರಿಕರು ಭಾಗವಹಿಸಿದ್ದರು.