ಹನೂರು:ಎಲ್ಲೇಮಾಳ ಗ್ರಾಮ ಪಂಚಾಯ್ತಿಯ ಚಿಗತಾಪುರ ಗ್ರಾಮದಲ್ಲಿ ಜನರು ತಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಬೇಕು ಹೀಗಾಗಿ ಸರ್ಕಾರಿ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಗ್ರಾಮ್ ಒನ್ ಕೇಂದ್ರದ ಸೈಯದ್ ಸಲೀಂ ಸಲಹೆ ನೀಡಿದರು.
ನಂತರ ಮಾತನಾಡಿದ ಗ್ರಾಮದ ಸದಸ್ಯೆ ಮುಂತಜ್ ಬೇಗಮ್ ಅವರು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ (ಅಭಾ) ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿ.ಎಂ.ಜೆ.ಎ.ವೈ) ಕಾರ್ಡ್ ನೋಂದಣಿ ಮೆಗಾ ಆಂದೋಲನವನ್ನು ಜಿಲ್ಲಾಧ್ಯಂತ ನವಂಬರ್ 9 ರಂದು ಬೆಳಗ್ಗೆ 6ರಿಂದ 10 ಗಂಟೆವರೆಗೆ ಹಮ್ಮಿ ಕೊಳ್ಳಲಾಗಿದೆ.ಈ ಕಾರ್ಡುಗಳಿಂದ ಬಿ.ಪಿ.ಎಲ್ ಕಾರ್ಡ್ ದಾರರಿಗೆ 5 ಲಕ್ಷದವರೆಗೆ ಚಿಕಿತ್ಸೆ ವೆಚ್ಚ ಬರಿಸರಾಗುತ್ತದೆ ಎಪಿಎಲ್ ಕಾರ್ಡು ದಾರರಿಗೆ 1.5 ಲಕ್ಷದವರೆಗೆ ಚಿಕಿತ್ಸೆ ಬರಿಸಲಾಗುತ್ತದೆ.
ಜಿಲ್ಲೆಯ ಜನತೆ ಆರೋಗ್ಯ ಸೌಲಭ್ಯಕ್ಕಾಗಿ ನೀಡಲಾಗುತ್ತಿರುವ ಅ.ಭಾ ಮತ್ತು ಪಿ ಎಂ ಜೆ ವೈ ಕಾರ್ಡುಗಳಿಗಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಥವಾ ಗ್ರಾಮ್ ಒನ್ ಕೇಂದ್ರಗಳಲ್ಲಿ ನೊಂದಣಿ ಮಾಡಿಕೊಳ್ಳುವುದು ಎಂದು ತಿಳಿಸಿದರು
ಗ್ರಾಮ ಒನ್ ಸೇವಾ ಕೇಂದ್ರದ ಸೈಯದ್ ಸಲೀಂ, ಆಶಾ ಕಾರ್ಯಕರ್ತೆ,ನಹೀದಾ ಭಾನು,ಗೌರಮ್ಮ, ಜ್ಯೋತಿ,ಸರೋಜ,ಸುಶೀಲ ಮತ್ತು ಗ್ರಾಮಸ್ಥರು ಇದ್ದರು.
ವರದಿ-ಉಸ್ಮಾನ್ ಖಾನ್ ಬಂಡಳ್ಳಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.